ವಂದೇ ಭಾರತ್ ಭಾರತೀಯ ರೈಲ್ವೆಯ ಇತ್ತೀಚೆಗಿನ ಜನಪ್ರಿಯ ರೈಲುಗಳಲ್ಲಿ ಒಂದಾಗಿ ಗುರುತಿಸಿಕೊಳ್ಳುತ್ತಿದೆ. ಇದೀಗ ರೈಲ್ವೆ ಇಲಾಖೆ ಮೈಸೂರು ಹಾಗೂ ಚೆನ್ನೈ ಸೆಂಟ್ರಲ್ ನಡುವೆ ಬುಧವಾರವೂ ವಂದೇ ಭಾರತ್ ರೈಲನ್ನು ಓಡಿಸುವ ತೀರ್ಮಾನಕ್ಕೆ ಬಂದಿದೆ.
ಹೌದು, ಮೈಸೂರು ಹಾಗೂ ಚೆನ್ನೈ ನಗರಗಳ ನಡುವೆ ಬುಧವಾರ ಹೊರತುಪಡಿಸಿ ವಾರದ ಉಳಿದ ಎಲ್ಲಾ ದಿನಗಳೂ ಸಹ ವಂದೇ ಭಾರತ್ ರೈಲು ಸಂಚರಿಸುತ್ತಿತ್ತು. ಇದೀಗ ವರ್ಷಾಂತ್ಯ, ಕ್ರಿಸ್‌ಮಸ್ ಹಾಗೂ ಹೊಸವರ್ಷದ ಸಲುವಾಗಿ ಹೆಚ್ಚಿನ ಪ್ರಯಾಣಿಕರು ಸಂಚರಿಸುವುದನ್ನು ಗುರಿಯನ್ನಾಗಿಸಿಕೊಂಡು ನಿನ್ನೆಯಿಂದ ( ನವೆಂಬರ್ 29 ) ಡಿಸೆಂಬರ್ 27ರವರೆಗೂ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಮೈಸೂರಿನಿಂದ ಚೆನ್ನೈವರೆಗೆ ಆಯೋಜಿಸಲಾಗಿದೆ. ಈ ರೈಲು ಬೆಂಗಳೂರು ಹಾಗೂ ಕಟಪಾಡಿ ಈ ಎರಡು ನಿಲ್ದಾಣಗಳಲ್ಲಿ ಮಾತ್ರ ನಿಲ್ಲಲಿದೆ.
ಈ ರೈಲು ಚೆನ್ನೈ ಹಾಗೂ ಮೈಸೂರು ನಡುವೆ 06037 ಮತ್ತು ಮೈಸೂರು ಹಾಗೂ ಚೆನ್ನೈ ನಡುವೆ 06038 ಸಂಖ್ಯೆಯನ್ನು ಹೊಂದಿರಲಿದೆ. ಇನ್ನು ಈ ರೈಲು 500 ಕಿಲೋಮೀಟರ್ ವೇಗವನ್ನು 6 ಗಂಟೆ 30 ನಿಮಿಷಗಳಲ್ಲಿ ಕ್ರಮಿಸಲಿದ್ದು, ಈ ಮಾರ್ಗದಲ್ಲಿ ಸಂಚರಿಸುವ ಅತಿವೇಗದ ರೈಲು ಎಂದು ಗುರುತಿಸಿಕೊಂಡಿದೆ.
ಬೆಳಗಾವಿ : ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಿಟ್ಟ 50 ಸಾವಿರ ಕೋಟಿ ಅನುದಾನ ದುರುಪಯೋಗವಾಗಿದೆ ಎಂದು…
ಬೆಳಗಾವಿ: ಸಿಎಂ ಆಯ್ಕೆ ಮಾಡುವ ವೇಳೆ ಯಾವುದೇ ಗಡುವು ಕೊಟ್ಟಿಲ್ಲ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ. ಸಿಎಂ ಬದಲಾವಣೆ…
ಬೆಂಗಳೂರು: ಸುಪ್ರೀಂಕೋರ್ಟ್ ತೀರ್ಪು ಬೆನ್ನಲ್ಲೇ ಮೇಕೆದಾಟು ಸಮತೋಲಿತ ಜಲಾನಯನ ಯೋಜನೆ ತ್ವರಿತ ಅನುಷ್ಠಾನಕ್ಕೆ ಕರ್ನಾಟಕ ಇಂಜಿನಿಯರಿಂಗ್ ಸಂಶೋಧನಾ ಕೇಂದ್ರ ನಿರ್ದೇಶಕರ…
ನವದೆಹಲಿ: ಸಾಂಸ್ಕೃತಿಕ ನಗರಿ ಮೈಸೂರು ಸೇರಿದಂತೆ ದೇಶದಲ್ಲಿರುವ ಪಾರಂಪರಿಕ ನಗರಗಳ ಅಭಿವೃದ್ಧಿಗೆ ಪೂರಕವಾದ ಕಾನೂನು ಚೌಕಟ್ಟು ರೂಪಿಸಲು ನಗರಾಭಿವೃದ್ಧಿ ಸಚಿವಾಲಯ…
ಬೆಳಗಾವಿ: ನನ್ನನ್ನು ಸಿಎಂ ಮಾಡುವುದಾದರೆ ಮಾತ್ರ ನಾನು ಬಿಜೆಪಿಗೆ ವಾಪಸ್ ಹೋಗುತ್ತೇನೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್…
ಬೆಂಗಳೂರು: ಗ್ಯಾರಂಟಿ ಯೋಜನೆ ಅಧ್ಯಕ್ಷ ಹಾಗೂ ಮಾಜಿ ಸಚಿವ ಎಚ್.ಎಂ.ರೇವಣ್ಣ ಪುತ್ರನ ಕಾರು ಡಿಕ್ಕಿ ಹೊಡೆದು ಬೈಕ್ ಸವಾರ ಸಾವನ್ನಪ್ಪಿರುವ…