ನೀವೆಲ್ಲರೂ ಸಾಯುತ್ತೀರಿ: ದ್ವೇಷ ಭಾಷಣ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸುತ್ತಿದ್ದಂತೆ ಪೊಲೀಸರ ವಿರುದ್ಧ ಗುಡುಗಿದ ಯತಿ ನರಸಿಂಹಾನಂದ

ದೆಹಲಿ: ಧರ್ಮ ಸಂಸದ್ ದ್ವೇಷ ಭಾಷಣ ಪ್ರಕರಣದಲ್ಲಿ ಉತ್ತರಾಖಂಡ ಪೊಲೀಸರು ಗುರುವಾರ ಮೊದಲ ಬಂಧನವನ್ನು ಮಾಡಿದ್ದಾರೆ. ಹರಿದ್ವಾರ ಜಿಲ್ಲೆಯ ರೂರ್ಕಿಯಿಂದ ಜಿತೇಂದ್ರ ನಾರಾಯಣ ತ್ಯಾಗಿ ಎಂದು ಕರೆಯಲ್ಪಡುವ ವಸೀಮ್ ರಿಜ್ವಿಯನ್ನು ಪೊಲೀಸರು ಬಂಧಿಸಿದ್ದು ಇನ್ನಿಬ್ಬರು ಪ್ರಮುಖ ಆರೋಪಿಗಳಾದ ಯತಿ ನರಸಿಂಹಾನಂದ ಸರಸ್ವತಿ ಮತ್ತು ಸಾಧ್ವಿ ಅನ್ನಪೂರ್ಣ ಅವರು ಪೊಲೀಸರ ಮುಂದೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಎಫ್‌ಐಆರ್‌ಗಳಲ್ಲಿ ಮೂವರನ್ನೂ ಇತರರೊಂದಿಗೆ ಹೆಸರಿಸಲಾಗಿದೆ. ತ್ಯಾಗಿ ಅವರನ್ನು ಬಂಧಿಸಲಾಗಿದ್ದು, ಸಿಆರ್‌ಪಿಸಿಯ ಸೆಕ್ಷನ್ 41 ಎ ಅಡಿಯಲ್ಲಿ ಹಾಜರಾಗುವಂತೆ ಯತಿ ನರಸಿಂಹಾನಂದ ಮತ್ತು ಸಾಧ್ವಿ ಅನ್ನಪೂರ್ಣ ಅವರಿಗೆ ನೋಟಿಸ್ ಕಳುಹಿಸಲಾಗಿದೆ ಎಂದು ಉತ್ತರಾಖಂಡ ಡಿಜಿಪಿ ಅಶೋಕ್ ಕುಮಾರ್ ಪಿಟಿಐಗೆ ತಿಳಿಸಿದ್ದಾರೆ. ತ್ಯಾಗಿಯ ಬಂಧನದ ವಿಡಿಯೊದಲ್ಲಿ, ನರಸಿಂಹಾನಂದರು ಪೊಲೀಸರಿಗೆ ಬೆದರಿಕೆ ಹಾಕುವುದನ್ನು ಮತ್ತು ತ್ಯಾಗಿಯನ್ನು ಏಕೆ ಬಂಧಿಸಲಾಗುತ್ತಿದೆ ಎಂದು ಕೇಳುವುದನ್ನು ಕಾಣಬಹುದು. ಎನ್​​ಡಿಟಿವಿ ಪ್ರಕಾರ, “ತುಮ್ ಸಬ್ ಮರೋಗೆ (ನೀವೆಲ್ಲರೂ ಸಾಯುತ್ತೀರಿ)” ಎಂದು ಅವರು ಹೇಳುತ್ತಿದ್ದಾರೆ.

“ಮೂರೂ ಪ್ರಕರಣಗಳಲ್ಲಿ ನಾನು ಅವರೊಂದಿಗಿದ್ದೇನೆ. ಅವನು ಒಬ್ಬನೇ ಮಾಡಿದ್ದಾನಾ?” ಎಂದು ಯತಿ ಕೇಳಿದ್ದಾರೆ.  “ತ್ಯಾಗಿ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುತ್ತಿದ್ದಾರೆ” ಎಂದು ಅಧಿಕಾರಿಗಳು ಹೇಳುತ್ತಿದ್ದಂತೆ, ನರಸಿಂಹಾನಂದ, “ಆದರೆ ನಾನು ಅಲ್ಲ. ನಮ್ಮ ಬೆಂಬಲದ ಮೇಲೆ ಅವರು ಹಿಂದೂ ಆದರು ಎಂದಿದ್ದಾರೆ. ನರಸಿಂಹಾನಂದ ಅವರು ಹರಿದ್ವಾರದಲ್ಲಿ ಧರ್ಮ ಸಂಸದ್ ಆಯೋಜಿಸಿದ್ದ ಗಾಜಿಯಾಬಾದ್‌ನ ದಾಸ್ನಾ ದೇವಸ್ಥಾನದ ವಿವಾದಿತ ಅರ್ಚಕರಾಗಿದ್ದರೆ, ಸಾಧ್ವಿ ಅನ್ನಪೂರ್ಣ ಅವರು ಮುಸ್ಲಿಮರ ವಿರುದ್ಧ ಹೆಚ್ಚು ಪ್ರಚೋದನಕಾರಿ ಭಾಷಣ ಮಾಡಿದ ಕಾರ್ಯಕ್ರಮದಲ್ಲಿ ಭಾಷಣಕಾರರಲ್ಲಿ ಒಬ್ಬರು.

× Chat with us