ಸ್ವಾಮಿ ಪ್ರಸಾದ್ ಮೌರ್ಯ, ಧರಂ ಸಿಂಗ್ ಸೈನಿ ಜತೆ 6 ಶಾಸಕರು ಸಮಾಜವಾದಿ ಪಕ್ಷಕ್ಕೆ ಸೇರ್ಪಡೆ

ಲಖನೌ: ಈ ವಾರದ ಆರಂಭದಲ್ಲಿ ಬಿಜೆಪಿ ತೊರೆದ ಸ್ವಾಮಿ ಪ್ರಸಾದ್ ಮೌರ್ಯ, ಧರಂ ಸಿಂಗ್ ಸೈನಿ ಮತ್ತು ಇತರ ಐದು ಶಾಸಕರನ್ನು ಸಮಾಜವಾದಿ ಪಕ್ಷವು ಶುಕ್ರವಾರ ಪಕ್ಷಕ್ಕೆ ಸ್ವಾಗತಿಸಿದೆ.

ಬಿಜೆಪಿಯಿಂದ ನಾಯಕರು ಒಬ್ಬರ ಹಿಂದೆ ಒಬ್ಬರು ರಾಜೀನಾಮೆ ನೀಡುತ್ತಿದ್ದು ಸಮಾಜವಾದಿ ಮುಖ್ಯಸ್ಥ ಅಖಿಲೇಶ್ ಯಾದವ್, “ವಿಕೆಟ್ಸ್  ಗಿರ್ ರಹೇ ತೇ” ಎಂದು ಹೇಳಿದರು.  ಭಗವತಿ ಸಾಗರ್, ರೋಷನ್‌ಲಾಲ್ ವರ್ಮಾ , ವಿನಯ್ ಶಕ್ಯಾ , ಬ್ರಿಜೇಶ್ ಪ್ರಜಾಪತಿ ಮತ್ತು ಮುಖೇಶ್ ವರ್ಮಾಎಸ್‌ಪಿಗೆ ಸೇರ್ಪಡೆಯಾದ ಐವರು ಬಿಜೆಪಿ ಶಾಸಕರು. ಅಪ್ನಾ ದಳ ಶಾಸಕ ಅಮರ್ ಸಿಂಗ್ ಚೌಧರಿ ಕೂಡ ಎಸ್‌ಪಿಗೆ ಸೇರ್ಪಡೆಗೊಂಡರು.

× Chat with us