ನವದೆಹಲಿ : ಭಾರತದ ರಾಷ್ಟ್ರಪತಿ ಚುನಾವಣೆಗೆ ಮತದಾನವು ನಡೆದಿದ್ದು ಇಂದು ಎಣಿಕೆ ಕಾರ್ಯ ನಡೆಯುತ್ತಿದೆ. ಇಂದು ಸಂಜೆ ವೇಳೆಗೆ ಫಲಿತಾಂಶ ಘೋಷಣೆಯಾಗಲಿದೆ.
ಇತ್ತ ಎನ್ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರಗ ಗೆಲುವಿಗಾಗಿ ಪ್ರಾರ್ಥಿಸಿ ಒಡಿಶಾದ ಮಯೂರ್ ಭಂಜ್ ನ ಬುಡಕಟ್ಟು ನಿವಾಸಿಗಳು ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಸ್ವಯಂ ಪ್ರೇರಿತವಾಗಿ ಸಾಮೂಹಿ ಪ್ರಾರ್ಥನೆಯನ್ನು ಬುಡಕಟ್ಟು ನಿವಾಸಿಗಳು ಸಲ್ಲಿಸಿದ್ದು,ದೌಪದಿ ಮುರ್ಮು ಅವರ ಗೆಲುವು ಬಹುತೇಕ ಖಚಿತ ಎಂದು ವಿಶ್ವಾಸವನ್ನು ಹೊಂದಿದ್ದಾರೆ. ಮುಂಚಿತವಾಗಿಯೇ ಸಂಭ್ರಮಾಚರಣೆಗಾಗಿ ತಯಾರಿ ಮಾಡಿಕೊಂಡಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಅಭಿನಂದನಾ ಯಾತ್ರೆಗೆ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ. ಸಂಜೆ ಬಿಜೆಪಿಯ ಅಧ್ಯಕ್ಷ ಜೆಪಿ ನಡ್ಡಾ ಅವರು ಪಂಡಿತ್ ಪಂತ್ ಮಾರ್ಗದಿಂದ ರಾಜಪಥ್ ಮಾರ್ಗದ ವರೆಗೆ ಯಾತ್ರೆಯನ್ನು ಆಯೋಜಿಸಿದ್ದಾರೆ. ಬಳಿಕ ಬಿಜೆಪಿ ಕಚೇರಿಯಲ್ಲಿ ನೂತನ ರಾಷ್ಟ್ರಪತಿಯನ್ನು ಉದ್ದೇಶಿಸಿ ಮಾತನಾಡಿಲಿದ್ದಾರೆ.
ಮತಎಣಿಕೆಯು ಆರಂಭವಾಗಿದ್ದು ವೇಳೆಗೆ ಅಧಿಕೃತ ಫಲಿತಾಂಶ ಹೊರಬೀಳಿಲಿದೆ. ಮುಖ್ಯ ಚುನಾವಣಾ ಅಧಿಕಾರಿ ಪಿ.ಸಿ.ಮೋದಿ ಅವರು ಪ್ರಕಟ ಮಾಡಲಿದ್ದಾರೆ.