ಹೊಸದಿಲ್ಲಿ: ಮುಂಬೈನ ೨೬/೧೧ ಉಗ್ರ ಕೃತ್ಯದ ರೂವಾರಿಗಳನ್ನು ನ್ಯಾಯಾಂಗದ ಮುಂದೆ ತರಲೇಬೇಕು ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಹೇಳಿದರು.
೨೦೦೮ರ ನವೆಂಬರ್ನಲ್ಲಿ ನಡೆದಿದ್ದ ಭಯೋತ್ಪಾದನಾ ದಾಳಿಯ ೧೪ನೇ ವರ್ಷದ ಸ್ಮರಣಾರ್ಥ ಟ್ವೀಟ್ ಮಾಡಿದ ಜೈಶಂಕರ್, ಭಯೋತ್ಪಾದನೆಯು ಮಾನವೀಯತೆಗೆ ತೊಡಕಾಗಿದೆ. ೨೬/೧೧ ದಾಳಿಯಲ್ಲಿ ಪ್ರಾಣ ಕಳೆದುಕೊಂಡವರ ಸ್ಮರಣಾರ್ಥ ನ.೨೬ರಂದು ವಿಶ್ವವು ಭಾರತದ ಜೊತೆಯಾಗಿದೆ ಎಂದರು.
ಉಗ್ರ ಕೃತ್ಯದ ಹಿಂದಿರುವ ರೂವಾರಿಗಳನ್ನು ಕಾನೂನಿನ ಅಡಿ ತರಲೇಬೇಕು. ಭಯೋತ್ಪಾದನಾ ದಾಳಿಯಿಂದ ಮೃತಪಟ್ಟ ವಿಶ್ವದ ಪ್ರತಿಯೊಬ್ಬ ವ್ಯಕ್ತಿಯನ್ನು ಗೌರವಾರ್ಥ ಸ್ಮರಿಸುತ್ತಿದ್ದೇವೆ. ಉಗ್ರರ ದಾಳಿಯಿಂದ ಆಘಾತಕ್ಕೆ ಒಳಗಾದ ವಿದೇಶಿ ಪ್ರಜೆಗಳಿಗೆ ಸಾಂತ್ವನ ಹೇಳುವುದು ಮತ್ತು ದುಷ್ಕರ್ಮಿಗಳನ್ನು ನ್ಯಾಯಾಂಗದ ಮುಂದೆ ತರಲು ಶ್ರಮಿಸುತ್ತಿರುವ ಅಂತರರಾಷ್ಟ್ರೀಯ ಸಮುದಾಯಕ್ಕೆ ಕೃತಜ್ಞತೆ ಸಲ್ಲಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಭಯೋತ್ಪಾದನೆ ವಿಚಾರದಲ್ಲಿ ಭಾರತ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ.ನ್ಯಾಯ ಸಿಗುವವರೆಗೆ ನಮ್ಮ ಹೋರಾಟವನ್ನು ಬಿಟ್ಟುಬಿಡುವುದಿಲ್ಲ ಎಂದರು.
೨೦೦೮ರಲ್ಲಿ ನಡೆದ ಉಗ್ರರ ದಾಳಿyಲ್ಲಿ ಸುಮಾರು ೧೪೦ ಭಾರತೀಯರು ಮತ್ತು ೨೩ ರಾಷ್ಟ್ರಗಳ ೨೬ ನಾಗರಿಕರು ಪ್ರಾಣ ಕಳೆದುಕೊಂಡರು.
- ಮುಖಪುಟ
- ಮೈಸೂರು
- ಜಿಲ್ಲೆಗಳು
- ರಾಜ್ಯ
- ದೇಶ- ವಿದೇಶ
- ರಾಜಕೀಯ
- ಅಪರಾಧ
- ಮಹಿಳೆ
- ಕೃಷಿ
- ವಿಜ್ಞಾನ ತಂತ್ರಜ್ಞಾನ
- ಕ್ರೀಡೆ
- ವಾಣಿಜ್ಯ
- ಚಿತ್ರಸಂತೆ
- ವಿಶೇಷ
- ಆಂದೋಲನ ಪುರವಣಿ
- ಎಡಿಟೋರಿಯಲ್
- ಆಂದೋಲನ 50
- ಜಾಹೀರಾತು
- Cricket
Subscribe to Updates
Get the latest creative news from FooBar about art, design and business.
Previous Articleಬಾಲಿವುಡ್ ನಟ ವಿಕ್ರಂ ಗೋಖಲೆ ನಿಧನ