ವಾಷಿಂಗ್ಟನ್: ಅಮೆರಿಕದ ದಕ್ಷಿಣ ರಾಜ್ಯಗಳಾದ ಅಲಬಾಮಾ ಮತ್ತು ಮಿಸಿಸಿಪ್ಪಿಗಳಲ್ಲಿ ಶುಕ್ರವಾರ ಬೀಸಿದ ಭೀಕರ ಸುಂಟರಗಾಳಿಯ ಪರಿಣಾಮ ಕಟ್ಟಡಗಳು ಕುಸಿದು ಬಿದ್ದು ಏಳು ಮಂದಿ ಸಾವನ್ನಪ್ಪಿದ್ದಾರೆ.
ಹವಾಮಾನ ವೈಪರೀತ್ಯದಿಂದ ಆಲಿಕಲ್ಲುಗಳು ಬಿದ್ದಿವೆ, ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಚಂಡಮಾರುತದ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ ಅಧಿಕಾರಿಗಳು ‘ನಿಮ್ಮ ಜೀವ ಅಪಾಯದಲ್ಲಿದೆ, ಪ್ರಾಣವನ್ನು ರಕ್ಷಿಸಿಕೊಳ್ಳಿ‘ ಎಂದು ಜನರಿಗೆ ಎಚ್ಚರಿಕೆ ನೀಡಿದ್ದಾರೆ.
ಸುಂಟರಗಾಳಿಯು ಮಿಸಿಸಿಪ್ಪಿಯ 96 ಕಿ.ಮೀ.ನಷ್ಟು ದೂರದವರೆಗೆ ಹಾನಿ ಮಾಡಿದೆ ಎಂದು ರಾಷ್ಟ್ರೀಯ ಹವಾಮಾನ ಸಂಸ್ಥೆಯು ತಿಳಿಸಿದೆ.