ಹೊಸದಿಲ್ಲಿ: ಎನ್ಡಿಟಿವಿ ಚಾನಲ್ನಲ್ಲಿ ಶೇ.29.18ರಷ್ಟು ಷೇರುಗಳನ್ನು ಅದಾನಿ ಗ್ರೂಫ್ ಸ್ವಾಧೀನಪಡಿಸಿಕೊಂಡ ಬೆನ್ನಲ್ಲೇ ಹಿರಿಯ ಪತ್ರಕರ್ತ ರವೀಶ್ ಕುಮಾರ್ ಎನ್ಡಿಟಿವಿಯಿಂದ ಹೊರಬಂದಿದ್ದಾರೆ. ಆರ್ಆರ್ಪಿಆರ್ ಹೋಲ್ಡಿಂಗ್ ಪ್ರೈವೇಟ್ ಲಿಮಿಟೆಡ್ನ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ಎನ್ಡಿಟಿವಿಯ ಸಂಸ್ಥಾಪಕರಾದ ಪ್ರಣಾಯ್ ರಾಯ್ ಹಾಗೂ ರಾಧಿಕಾ ರಾಯ್ ರಾಜೀನಾಮೆ ನೀಡಿದ ಮರುದಿನವೇ ಈ ಬೆಳವಣಿಗೆ ನಡೆದಿದೆ.
ಚಾನೆಲ್ನ ಆಂತರಿಕ ಮೇಲ್ ರವೀಶ್ ಕುಮಾರ್ ಅವರ ರಾಜೀನಾಮೆಯನ್ನು ಖಚಿತ ಪಡಿಸಿದೆ, ತಕ್ಷಣದಿಂದಲೇ ರಾಜೀನಾಮೆ ಜಾರಿಗೆ ಬಂದಿದೆ ಎಂದು ಎನ್ಡಿಟಿವಿ ತಿಳಿಸಿದೆ. ಈ ಬಗ್ಗೆ ಎನ್ಡಿಟಿವಿ ಗ್ರೂಪ್ನ ಅಧ್ಯಕ್ಷೆ ಸುಪರ್ಣಾ ಸಿಂಗ್ ಪ್ರತಿಕ್ರಿಯಿಸಿದ್ದು, ಕೆಲವೇ ಪತ್ರಕರ್ತರು ರವೀಶ್ ಕುಮಾರ್ ಅವರಂತೆ ಜನರು ಹಾಗೂ ಮಾಧ್ಯಮ ಕ್ಷೇತ್ರದ ಮೇಲೆ ಪ್ರಭಾವ ಬೀರಿದ್ದಾರೆ ಭಾರತ ಸೇರಿ ದೇಶ, ವಿದೇಶಗಳಲ್ಲಿ ಅವರು ಪಡೆದಿರುವ ಪ್ರತಿಷ್ಠಿತ ಪ್ರಶಸ್ತಿಗಳು ಅವರ ಕೆಲಸವನ್ನು ತಿಳಿಸುತ್ತವೆ ಎಂದು ಹೇಳಿದ್ದಾರೆ,
NDTV ಇಂಡಿಯಾದ ಹಿರಿಯ ಕಾರ್ಯನಿರ್ವಾಹಕ ಸಂಪಾದಕ ರವೀಶ್ ಕುಮಾರ್ ರಾಜೀನಾಮೆ ಪ್ರಕಟಿಸಿದ ಬೆನ್ನಲ್ಲೆ ‘ರವೀಶ್ ಕುಮಾರ್ ಅಫಿಶಿಯಲ್’ ಹೆಸರಿನ ಯೂಟ್ಯೂಬ್ ಚಾನೆಲ್ ಅನ್ನು ಆರಂಭಿಸಿದ್ದಾರೆ. ತಮ್ಮ ಮೊದಲ ವಿಡಿಯೋದಲ್ಲಿ “ಪ್ರಜಾಪ್ರಭುತ್ವಕ್ಕೆ ಗಂಭೀರ ಬೆದರಿಕೆಯಿರುವ ಸಮಯದಲ್ಲಿ ಅಧಿಕಾರದಲ್ಲಿರುವವರನ್ನು ಪ್ರಶ್ನಿಸುವ ಪತ್ರಕರ್ತರನ್ನು ಬೆಂಬಲಿಸುವುದನ್ನು ಮುಂದುವರಿಸಬೇಕೆಂದು” ದೇಶದ ಜನರಲ್ಲಿ ಮನವಿ ಮಾಡಿದ್ದಾರೆ.
“ದೇಶದ ನ್ಯಾಯಾಂಗವು ತತ್ತರಿಸಿದ ಸಮಯದಲ್ಲಿ, ಅಧಿಕಾರದಲ್ಲಿರುವ ಜನರು ಅನೇಕರ ಧ್ವನಿಯನ್ನು ಅಡಗಿಸಲು ಪ್ರಯತ್ನಿಸಿದಾಗ, ದೇಶದ ಜನರು ನನ್ನ ಮೇಲೆ ಅಪಾರ ಪ್ರೀತಿಯನ್ನು ತೋರಿಸಿದರು. ನನ್ನ ಪ್ರೇಕ್ಷಕರಿಲ್ಲದೆ ನಾನು ಏನನ್ನೂ ಮಾಡಲು ಸಾಧ್ಯವಾಗುತ್ತಿರಲಿಲ್ಲ. ನನ್ನ ಕೆಲಸವನ್ನು ಹೊಸ ಯೂಟ್ಯೂಬ್ ಚಾನೆಲ್ ಮತ್ತು ಫೇಸ್ಬುಕ್ ಪುಟದ ಮೂಲಕ ಮುಂದುವರೆಸುತ್ತಿದ್ದು, ಅದನ್ನು ಬೆಂಬಲಿಸುತ್ತೀರೆಂದು ನಂಬಿದ್ದೇನೆ” ಎಂದು ರವೀಶ್ ತಮ್ಮ ಯುಟ್ಯೂಬ್ ವೀಡಿಯೊದಲ್ಲಿ ಹೇಳಿದ್ದಾರೆ.
ನನ್ನ ಅಸ್ತಿತ್ವದಲ್ಲಿ ನೀವೆಲ್ಲರೂ ಸೇರಿದ್ದೀರಿ. ನಿಮ್ಮ ಪ್ರೀತಿಯೇ ನನ್ನ ಸಂಪತ್ತು. ಇದು ನಿಮ್ಮ youtube ಚಾನಲ್ನಲ್ಲಿನ ನನ್ನ ಹೊಸ ವಿಳಾಸವಾಗಿದೆ. ಗೋದಿ ಮೀಡಿಯಾದ ದಾಸ್ಯದ ವಿರುದ್ಧ ಎಲ್ಲರೂ ಹೋರಾಡಬೇಕಿದೆ ಎಂದು ರವೀಶ್ ಕುಮಾರ್ ಹೇಳಿದ್ದಾರೆ.
ನಾನು ರಾಜೀನಾಮೆ ನೀಡಿದ್ದೇನೆ. ಈ ರಾಜೀನಾಮೆ ನಿಮ್ಮ ಗೌರವಾರ್ಥವಾಗಿದೆ. ಕೋಟ್ಯಾಂತರ ವೀಕ್ಷಕರ ಆತ್ಮಗೌರವ ಒಬ್ಬರ ಕೆಲಸ ಮತ್ತು ಅಸಹಾಯಕತೆಗಿಂತ ಬಹಳ ದೊಡ್ಡದು. ನಿನ್ನ ಪ್ರೀತಿಯ ಮುಂದೆ ತಲೆಬಾಗುತ್ತೇನೆ ಎಂದು ಅವರು ಹೇಳಿದ್ದಾರೆ.
माननीय जनता,
मेरे होने में आप सभी शामिल हैं। आपका प्यार ही मेरी दौलत है। आप दर्शकों से एकतरफ़ा और लंबा संवाद किया है। अपने यू- ट्यूब चैनल पर। यही मेरा नया पता है। सभी को गोदी मीडिया की ग़ुलामी से लड़ना है।
आपका
रवीश कुमार https://t.co/39BKNJdoro— ravish kumar (@ravishndtv) December 1, 2022