ರಾಷ್ಟ್ರೀಯ

ಆಯೋಧ್ಯೆ ಅರ್ಚಕರಾಗಿ ಎಸ್‌ಸಿ-ಒಬಿಸಿ ಸಮುದಾಯದವರು ಆಯ್ಕೆ!

ಅಯೋಧ್ಯೆ : ಹಿಂದೂಗಳ ದಶಕಗಳ ಕನಸು ಈಡೇರುತ್ತಿದ್ದು, ಅಯೋಧ್ಯೆ ಶ್ರೀರಾಮಮಂದಿರ ಇದೇ ಜ.22 ರಂದು ಉದ್ಘಾಟನೆಯಾಗಲಿದೆ. ಇದೀಗ ರಾಮಮಂದಿರಕ್ಕೆ ಮಂದಿರಕ್ಕೆ‌ 24 ಅರ್ಚಕರನ್ನು ನೇಮಕ ಮಾಡಲಾಗಿದೆ.

ಅರ್ಚಕರಲ್ಲಿ ಇಬ್ಬರು ಎಸ್‌ಸಿ ಮತ್ತು ಒಬ್ಬರು ಒಬಿಸಿ ಸಮುದಾಯದವರಾಗಿದ್ದು ಮೂರು ತಿಂಗಳ ತರಬೇತಿ ನಂತರ ಈ ಅರ್ಚಕರು ನಿಯೋಜನೆಗೊಳ್ಳಲಿದ್ದಾರೆ.

ಜಾತಿ ಆಧಾರದಲ್ಲಿ ಅರ್ಚಕರನ್ನು ಆಯ್ಕೆ ಮಾಡದೇ, ಕೇವಲ ಅರ್ಹತೆಯ ಆಧಾರದ ಮೇಲೆ ಮಾತ್ರ ಅರ್ಚಕರನ್ನು ಆಯ್ಕೆ ಮಾಡಲಾಗಿದೆ. ರಾಮನಂದಿ ಸಂಪ್ರದಾಯದಂತೆ ಎಲ್ಲ ಅರ್ಚಕರಿಗೂ ಮೂರು ತಿಂಗಳ ತರಬೇತಿ ನೀಡಲಾಗುತ್ತಿದೆ.

ರಾಮಮಂದಿರದ ಮಹಂತ್ ಮಿಥಿಲೇಶ್ ನಂದಿನಿ ಶರಣ್ ಮತ್ತು ಮಹಂತ್ ಸತ್ಯನಾರಾಯಣ ದಾಸ್ ಅವರು ದೇವಾಲಯದ ವಿಗ್ರಹ ಪೂಜಿಸಲು ಪೌರೋಹಿತ್ಯ ಮತ್ತು ಆಚರಣೆಗಳ ತರಬೇತಿಯನ್ನು ನೀಡುತ್ತಿದ್ದಾರೆ.

ಮೂರು ಸುತ್ತಿನ ಸಂದರ್ಶನದ ಮೂಲಕ 3240 ಅಭ್ಯರ್ಥಿಗಳ ಪೈಕಿ 25 ಮಂದಿಯನ್ನು ತರಬೇತಿಗೆ ಆಯ್ಕೆ ಮಾಡಲಾಗಿದೆ. ಸಂದರ್ಶನದಲ್ಲಿ 14 ಪ್ರಶ್ನೆಗಳನ್ನು ಕೇಳಲಾಗಿತ್ತು.

ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿದ 25 ಯುವಕರನ್ನು ಅರ್ಚಕರ‌ ಹುದ್ದೆಗೆ ನವೆಂಬರ್‌ನಲ್ಲಿ ಆಯ್ಕೆ ಮಾಡಲಾಗಿದೆ. ಇವರಲ್ಲಿ ಆಚಾರ್ಯ ದೈವಜ್ಞ ಕೃಷ್ಣ ಶಾಸ್ತ್ರಿ ಅವರು ಹಿಂದೆ‌ ಸರಿದಿದ್ದಾರೆ.

ರಾಮಲಲ್ಲಾ‌ನ ಪೂಜೆಗೆ ಆಯ್ಕೆಯಾಗಿರುವ ಅರ್ಚಕರು ಮೊಬೈಲ್ ಫೋನ್ ಬಳಸುವಂತಿಲ್ಲ ಅಥವಾ ಯಾವುದೇ ಹೊರಗಿನವರೊಂದಿಗೆ ಸಂಪರ್ಕ ಹೊಂದುವಂತಿಲ್ಲ.

ಅಂದಹಾಗೆ ಮಂದಿರಕ್ಕೆ ಬ್ರಾಹ್ಮಣೇತರರು ಅರ್ಚಕರಾಗಿರುವುದು ಇದೆ ಮೊದಲನೇಲ್ಲ, ದಕ್ಷಿಣ ಭಾರತದ ಬಹುತೇಕ ದೇವಾಲಯಗಳಲ್ಲಿ ಶೇ.70 ಪ್ರತಿಶತದಷ್ಟು ಅರ್ಚಕರು ಬ್ರಾಹ್ಮಣೇತರರು ಎಂಬುದು ಗಮನಾರ್ಹ.

ವಿಶೇಷವೆಂದರೆ ಶೈವ ಸಂಪ್ರದಾಯದ ದೇವಾಲಯಗಳಲ್ಲಿ ಬಹುತೇಕ ಬ್ರಾಹ್ಮಣೇತರ ಅರ್ಚಕರದ್ದೇ ಪ್ರಾಬಲ್ಯವಿರುತ್ತದೆ.

andolanait

Recent Posts

ಜಮೀನು ಕಬಳಿಸಲು ಸಂಚು ; ಚಿಕ್ಕಕೆರೆಯೂರು ಹಾಡಿಯ ಗಿರಿಜನರಿಂದ ಆಹೋರಾತ್ರಿ ಪ್ರತಿಭಟನೆ

ಎಚ್.ಡಿ.ಕೋಟೆ : ಪ್ರಭಾವಿಗಳು ಮತ್ತು ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿ, ಮುಗ್ಧ ಆದಿವಾಸಿ ಜನರ ೮ ಎಕರೆ ಜಮೀನು ಕಬಳಿಸಲು…

7 hours ago

ಮೈಸೂರು | ಪೇದೆ ನೇಮಕಾತಿ ಪರೀಕ್ಷೆ ಸುಸೂತ್ರ ; 13,166 ಹಾಜರ್‌, 3,424 ಮಂದಿ ಗೈರು

ಮೈಸೂರು : ಸಿಎಆರ್, ಡಿಎಆರ್ ಪೇದೆಗಳ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಭಾನುವಾರ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯು ಸುಗಮವಾಗಿ ನಡೆಯಿತು.…

8 hours ago

ದೆಹಲಿಯಲ್ಲಿ 6 ಅಂತಸ್ತಿನ ಕಟ್ಟಡ ಕುಸಿತ ; ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ

ದೆಹಲಿ : ನೈಋತ್ಯ ದೆಹಲಿಯ ಸತ್ಯ ನಿಕೇತನದಲ್ಲಿ ಇಂದು ಮಧ್ಯಾಹ್ನ ಆರು ಅಂತಸ್ತಿನ ಕಟ್ಟಡ ಕುಸಿದು ಹಲವರು ಅವಶೇಷಗಳಡಿ ಸಿಲುಕಿರುವ…

9 hours ago

ಅಶ್ಲೀಲ ಕಮೆಂಟ್‌ ಪ್ರಕರಣ : ರಮ್ಯಾ ಕಾಲಿಗೆ ಬಿದ್ದ ದರ್ಶನ್ ಫ್ಯಾನ್ಸ್ ; ಆದರೂ ಇಲ್ಲ ಕ್ಷಮೆ ಎಂದ ನಟಿ

ಬೆಂಗಳೂರು : ತಮಗೆ ಅಶ್ಲೀಲ ಸಂದೇಶ ಕಳಿಸಿದವರ ವಿರುದ್ಧ ನಟಿ ರಮ್ಯಾ ಅವರು ಕಾನೂನು ಸಮರ ಸಾರಿದ್ದು, ರಾಜಿಯಾಗುವ ಪ್ರಶ್ನೆಯೇ…

12 hours ago

ಬೆಳಗಿನ ಜಾವ ಸಿದ್ದಾಪುರ ಪಟ್ಟಣಕ್ಕೆ ಕಾಡಾನೆಗಳ ಎಂಟ್ರಿ: ಆತಂಕದಲ್ಲಿ ಜನತೆ

ಸಿದ್ದಾಪುರ: ಪಟ್ಟಣದೊಳಗೆ ಭಾನುವಾರ ಬೆಳಗಿನ ಜಾವ ಐದು ಕಾಡಾನೆಗಳು ಸಂಚರಿಸಿರುವ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಸಿದ್ದಾಪುರದಿಂದ ಮೈಸೂರು ಕಡೆಗೆ…

13 hours ago

ಸೋಮವಾರಪೇಟೆಯಲ್ಲಿ ಎಟಿಎಂ ದರೋಡೆಗೆ ಖದೀಮರ ಯತ್ನ

ಸೋಮವಾರಪೇಟೆ: ಪಟ್ಟಣದ ಎಂ.ಜಿ. ರಸ್ತೆಯಲ್ಲಿರುವ ಎಸ್‌ಬಿಐ ಬ್ಯಾಂಕ್‌ಗೆ ಹೊಂದಿಕೊಂಡಿರುವ ಎಟಿಎಂ ಅನ್ನು ದರೋಡೆ ಮಾಡಲು ಖದೀಮರ ತಂಡವೊಂದು ಯತ್ನಿಸಿರುವ ಘಟನೆ…

13 hours ago