ಅಯೋಧ್ಯೆ : ಹಿಂದೂಗಳ ದಶಕಗಳ ಕನಸು ಈಡೇರುತ್ತಿದ್ದು, ಅಯೋಧ್ಯೆ ಶ್ರೀರಾಮಮಂದಿರ ಇದೇ ಜ.22 ರಂದು ಉದ್ಘಾಟನೆಯಾಗಲಿದೆ. ಇದೀಗ ರಾಮಮಂದಿರಕ್ಕೆ ಮಂದಿರಕ್ಕೆ 24 ಅರ್ಚಕರನ್ನು ನೇಮಕ ಮಾಡಲಾಗಿದೆ.
ಅರ್ಚಕರಲ್ಲಿ ಇಬ್ಬರು ಎಸ್‌ಸಿ ಮತ್ತು ಒಬ್ಬರು ಒಬಿಸಿ ಸಮುದಾಯದವರಾಗಿದ್ದು ಮೂರು ತಿಂಗಳ ತರಬೇತಿ ನಂತರ ಈ ಅರ್ಚಕರು ನಿಯೋಜನೆಗೊಳ್ಳಲಿದ್ದಾರೆ.
ಜಾತಿ ಆಧಾರದಲ್ಲಿ ಅರ್ಚಕರನ್ನು ಆಯ್ಕೆ ಮಾಡದೇ, ಕೇವಲ ಅರ್ಹತೆಯ ಆಧಾರದ ಮೇಲೆ ಮಾತ್ರ ಅರ್ಚಕರನ್ನು ಆಯ್ಕೆ ಮಾಡಲಾಗಿದೆ. ರಾಮನಂದಿ ಸಂಪ್ರದಾಯದಂತೆ ಎಲ್ಲ ಅರ್ಚಕರಿಗೂ ಮೂರು ತಿಂಗಳ ತರಬೇತಿ ನೀಡಲಾಗುತ್ತಿದೆ.
ರಾಮಮಂದಿರದ ಮಹಂತ್ ಮಿಥಿಲೇಶ್ ನಂದಿನಿ ಶರಣ್ ಮತ್ತು ಮಹಂತ್ ಸತ್ಯನಾರಾಯಣ ದಾಸ್ ಅವರು ದೇವಾಲಯದ ವಿಗ್ರಹ ಪೂಜಿಸಲು ಪೌರೋಹಿತ್ಯ ಮತ್ತು ಆಚರಣೆಗಳ ತರಬೇತಿಯನ್ನು ನೀಡುತ್ತಿದ್ದಾರೆ.
ಮೂರು ಸುತ್ತಿನ ಸಂದರ್ಶನದ ಮೂಲಕ 3240 ಅಭ್ಯರ್ಥಿಗಳ ಪೈಕಿ 25 ಮಂದಿಯನ್ನು ತರಬೇತಿಗೆ ಆಯ್ಕೆ ಮಾಡಲಾಗಿದೆ. ಸಂದರ್ಶನದಲ್ಲಿ 14 ಪ್ರಶ್ನೆಗಳನ್ನು ಕೇಳಲಾಗಿತ್ತು.
ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿದ 25 ಯುವಕರನ್ನು ಅರ್ಚಕರ ಹುದ್ದೆಗೆ ನವೆಂಬರ್‌ನಲ್ಲಿ ಆಯ್ಕೆ ಮಾಡಲಾಗಿದೆ. ಇವರಲ್ಲಿ ಆಚಾರ್ಯ ದೈವಜ್ಞ ಕೃಷ್ಣ ಶಾಸ್ತ್ರಿ ಅವರು ಹಿಂದೆ ಸರಿದಿದ್ದಾರೆ.
ರಾಮಲಲ್ಲಾನ ಪೂಜೆಗೆ ಆಯ್ಕೆಯಾಗಿರುವ ಅರ್ಚಕರು ಮೊಬೈಲ್ ಫೋನ್ ಬಳಸುವಂತಿಲ್ಲ ಅಥವಾ ಯಾವುದೇ ಹೊರಗಿನವರೊಂದಿಗೆ ಸಂಪರ್ಕ ಹೊಂದುವಂತಿಲ್ಲ.
ಅಂದಹಾಗೆ ಮಂದಿರಕ್ಕೆ ಬ್ರಾಹ್ಮಣೇತರರು ಅರ್ಚಕರಾಗಿರುವುದು ಇದೆ ಮೊದಲನೇಲ್ಲ, ದಕ್ಷಿಣ ಭಾರತದ ಬಹುತೇಕ ದೇವಾಲಯಗಳಲ್ಲಿ ಶೇ.70 ಪ್ರತಿಶತದಷ್ಟು ಅರ್ಚಕರು ಬ್ರಾಹ್ಮಣೇತರರು ಎಂಬುದು ಗಮನಾರ್ಹ.
ವಿಶೇಷವೆಂದರೆ ಶೈವ ಸಂಪ್ರದಾಯದ ದೇವಾಲಯಗಳಲ್ಲಿ ಬಹುತೇಕ ಬ್ರಾಹ್ಮಣೇತರ ಅರ್ಚಕರದ್ದೇ ಪ್ರಾಬಲ್ಯವಿರುತ್ತದೆ.
ಮೈಸೂರು : ಹುಣಸೂರು ವಿಭಾಗದ ಪಿರಿಯಾಪಟ್ಟಣ ವ್ಯಾಪ್ತಿಯ ಗುಳ್ಳೆದಹಳ್ಳ ರಾಜ್ಯ ಅರಣ್ಯದಿಂದ 2 ಕಿ.ಮೀ ದೂರದಲ್ಲಿರುವ ಕೊಪ್ಪ ವಿಭಾಗದಲ್ಲಿ ಗುಂಡೇಟಿನಿಂದ…
ಬೆಂಗಳೂರು : ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ನಡೆಸಿದ 2025-2026ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ…
ಬೆಂಗಳೂರು : ಕರ್ನಾಟಕದಲ್ಲಿ ಪೂರ್ವ ಮುಂಗಾರು ಏಪ್ರಿಲ್ 2 ನೇ ವಾರದಿಂದ ಚುರುಕಾಗುತ್ತಿದ್ದು, ಏಪ್ರಿಲ್ 7ರಿಂದ ಮೂರು ದಿನಗಳು ರಾಜ್ಯದಲ್ಲಿ…
ವಾಷಿಂಗ್ಟನ್ : ಒಪ್ಪಂದಕ್ಕೆ ಬನ್ನಿ, ಇಲ್ಲವೇ ಶರಣಾಗಿ, ಇಲ್ಲದಿದ್ದರೆ ಮಂಗಳವಾರ ರಾತ್ರಿ 8 ಗಂಟೆಯ ನಂತರ ಮತ್ತಷ್ಟು ಮಾರಕ ದಾಳಿ…
ಮದುರೈ : ತಮಿಳುನಾಡಿನ ತೂತುಕುಡಿ ಜಿಲ್ಲೆಯ ಶಾಂತನ್‌ಕುಲಂ ಪೊಲೀಸ್ ಠಾಣೆ ಕಸ್ಟಡಿಯಿಂದಲೇ ತಂದೆ,ಮಗ ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಸೋಮವಾರ…
ಬೆಂಗಳೂರು : ಕೌಶಲ್ಯ ಕ್ಷೇತ್ರದಲ್ಲಿ ಕರ್ನಾಟಕ ಈಗ ಇಡೀ ದೇಶದಲ್ಲಿ ಮುಂಚೂಣಿಯತ್ತ ಸಾಗುತ್ತಿದೆ. ಇತ್ತೀಚೆಗೆ ಗ್ರೇಟರ್ ನೋಯ್ಡಾದ ಇಂಡಿಯಾ ಎಕ್ಸ್‌ಪೋ…