ಡಲ್ಲಾಸ್: ಮಹಾಭಾರತದ ಭಗವದ್ಗೀತೆಯ ಎಲ್ಲಾ ೭೦೦ ಶ್ಲೋಕಗಳನ್ನು ಕಂಠಪಾಠ ಮಾಡಿ, ಅದನ್ನು ೨,೨೨೦ಕ್ಕೂ ಅಧಿಕ ಮಂದಿ ಒಕ್ಕೊರಲಿನಲ್ಲಿ ಹೇಳುವ ಜಾಗತಿಕ ಕಾರ್ಯಕ್ರಮ ಅಮೆರಿಕದ ಟೆಕ್ಸಾಸ್ ರಾಜ್ಯದ ಡಲ್ಲಾಸ್ ನಗರದಲ್ಲಿ ನಡೆದಿದ್ದು, ಗಿನ್ನಿಸ್ ದಾಖಲೆಯಲ್ಲೂ ಸೇರ್ಪಡೆಯಾಗಿದೆ.
ಮೈಸೂರಿನ ದತ್ತಾಶ್ರಮದ ಪೀಠಾಧ್ಯಕ್ಷರಾದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಕಳೆದ ಶನಿವಾರ ಕಾರ್ಯಕ್ರಮ ನಡೆಗದಿತ್ತು. ಜಗತ್ತಿನ ೩೦ಕ್ಕೂ ಅಧಿಕ ದೇಶಗಳ ಮಂದಿ ಇದರಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಸ್ವಾಮೀಜಿ ೨೦೧೫ರಲ್ಲಿ ಕಾರ್ಯಸಿದ್ಧಿ ಹನುಮಾನ್ ದೇವಸ್ಥಾನವನ್ನು ಡಲ್ಲಾಸ್ನಲ್ಲಿ ನಿರ್ಮಿಸಿದ್ದರು. ಹೀಗಾಗಿ ಅದೇ ಜಾಗದಲ್ಲಿ ಭಗವದ್ಗೀತೆ ಹಾಡಿಸಿ ಗಿನ್ನಿಸ್ ದಾಖಲೆ ಬರೆದಿದ್ದಾರೆ. ೨,೨೦೦ಕ್ಕೂ ಅಧಿಕ ಮಂದಿಯಲ್ಲಿ ೧೪ ಮಂದಿ ವಿದೇಶಿಗರಿದ್ದರು. ಸುಮಾರು ನಾಲ್ಕು ಗಂಟೆಗಳ ಕಾಲ ಪಾರಾಯಣ ನಡೆಯಿತು.