ಹೊಸದಿಲ್ಲಿ: ದಿಲ್ಲಿ ಸರ್ಕಾರದ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆಮ್ ಆದ್ಮಿ ಪಕ್ಷದ ಮುಖಂಡ ವಿಜಯ್ ನಾಯರ್ಗೆ ಕನಿಷ್ಟ 100 ಕೋಟಿ ರೂ. ಲಂಚ ನೀಡಲಾಗಿದೆ ಎಂದು ಜಾರಿ ನಿರ್ದೇಶನಾಲಯ ವಿಶೇಷ ನ್ಯಾಯಾಲಯಕ್ಕೆ ಹೇಳಿದೆ.
ದಕ್ಷಿಣದ ಕಂಪೆನಿಯಿಂದ ಹಣ ಬಂದಿದೆ. ಶರತ್ ರೆಡ್ಡಿ, ಕೆ.ಕವಿತಾ ರೆಡ್ಡಿ, ಮಗುಂಟ ಶ್ರೀನಿವಾಸಲು ರೆಡ್ಡಿ ನಿಯಂತ್ರಣದ ಕಂಪನಿಯಿದು. ಎಎಪಿ ಸಂವಹನ ವಿಭಾಗದ ಮುಖ್ಯಸ್ಥ ವಿಜಯ್ ನಾಯರ್ಗೆ ಈ ಹಣ ಸಂದಾಯವಾಗಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ. ಆದಾಗ್ಯೂ ಕವಿತಾ ಕೆ.ರೆಡ್ಡಿಯನ್ನು ಯಾರೆಂದು ಗುರುತಿಸಿಲ್ಲ.