ಮುಂಬೈ: ನವರಾತ್ರಿ ಹಬ್ಬ ಸಂದರ್ಭದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಗ್ರಾಹಕರಿಗೆ ಮತ್ತೆ ಆಘಾತ ನೀಡಿದೆ. ರೆಪೊ ದರವನ್ನು ಮತ್ತೆ ಶೇ 0.50ರಷ್ಟು ಹೆಚ್ಚಿಸಲಾಗಿದ್ದು ಗೃಹಸಾಲ, ವಾಹನ ಸಾಲ, ವೈಯಕ್ತಿಕ ಸಾಲ ಸೇರಿ ಎಲ್ಲವೂ ತುಟ್ಟಿಯಾಗಲಿದೆ. ಈಗಾಗಲೇ ಸಾಲ ಪಡೆದವರೂ ಮತ್ತೆ ಹೆಚ್ಚಿನ ಹೊರೆ ಹೊರಲು ಸಿದ್ದರಾಗಬೇಕಿದೆ.
ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಶುಕ್ರವಾರ ರೆಪೊ ದರ ಹೆಚ್ಚಳದ ನಿರ್ಧಾರ ಪ್ರಕಟಿಸಿದರು. ಹಣದುಬ್ಬರ ತಡೆಯುವುದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆರ್ಬಿಐ ಹೇಳಿದೆ. ಈ ಬಾರಿಯ ಹೆಚ್ಚಳದೊಂದಿಗೆ ರೆಪೊ ದರ ಈಗ ಶೇ 5.9 ಆಗಿದೆ. ಕಳೆದ ಮೇ ತಿಂಗಳಿನಿಂದ ಈ ವರೆಗೆ ಸತತ ನಾಲ್ಕನೇ ಬಾರಿ ರೆಪೊ ದರ ಹೆಚ್ಚಳ ಮಾಡಿದಂತಾಗಿದೆ.
ರೆಪೊ ದರ ಹೆಚ್ಚಳದ ಪರಿಣಾಮವಾಗಿ ಗೃಹ, ವಾಹನ ಸಾಲಗಳ ಬಡ್ಡಿ ದರ ಏರಿಕೆಯಾಗಲಿದೆ. ನವರಾತ್ರಿ, ದೀಪಾವಳಿ ಸಂದರ್ಭದಲ್ಲಿ ವಾಹನ ಖರೀದಿಯ ಯೋಚನೆಯಲ್ಲಿದ್ದವರಿಗೆ ಆರ್ಬಿಐ ನಿರ್ಧಾರ ಆಘಾತ ನೀಡಿದೆ.
ಈ ಹಿಂದೆ ಆಗಸ್ಟ್ 5ರಂದು ರೆಪೊ ದರವನ್ನು ಶೇಕಡ 0.50ರಷ್ಟು ಹೆಚ್ಚಿಸಲಾಗಿತ್ತು. ಕಳೆದ ಬಾರಿಯ ಹೆಚ್ಚಳದೊಂದಿಗೆ ರೆಪೊ ದರ ಕೋವಿಡ್–19 ಸಾಂಕ್ರಾಮಿಕಕ್ಕಿಂತ ಮೊದಲಿನ, ಅಂದರೆ 2019ರ ಆಗಸ್ಟ್ನಲ್ಲಿದ್ದ ಹಂತಕ್ಕೆ ತಲುಪಿತ್ತು.
ರೆಪೊ ದರವನ್ನು ಮೇ ತಿಂಗಳಲ್ಲಿ ಶೇ 0.40 ಹಾಗೂ ಜೂನ್ನಲ್ಲಿ ಶೇ 0.50 ಹೆಚ್ಚಿಸಲಾಗಿತ್ತು. ಜೂನ್ ತಿಂಗಳಲ್ಲಿ ರೆಪೊ ದರ ಹೆಚ್ಚಳವಾದ ಬೆನ್ನಲ್ಲೇ ಹೆಚ್ಚಿನ ಬ್ಯಾಂಕ್ಗಳು ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಬಡ್ಡಿ ದರ ಏರಿಕೆ ಮಾಡಿದ್ದವು.
ಜಿಡಿಪಿ ಬೆಳವಣಿಗೆ ದರ ಶೇ 7: ಆರ್ಬಿಐ
23ನೇ ಹಣಕಾಸು ವರ್ಷದ ಜಿಡಿಪಿ ಬೆಳವಣಿಗೆ ದರ ಶೇ 7ರಷ್ಟು ಇರಲಿದೆ ಎಂದು ಆರ್ಬಿಐ ಅಂದಾಜಿಸಿದೆ. ಗ್ರಾಹಕ ದರ ಸೂಚ್ಯಂಕ ಆಧಾರಿತ (ಸಿಪಿಐ) ಹಣದುಬ್ಬರ ಶೇ 6.7ರಷ್ಟು ಇರಲಿದೆ ಎಂದು ಆರ್ಬಿಐ ತಿಳಿಸಿದೆ..
- ಮುಖಪುಟ
- ಮೈಸೂರು
- ಜಿಲ್ಲೆಗಳು
- ರಾಜ್ಯ
- ದೇಶ- ವಿದೇಶ
- ರಾಜಕೀಯ
- ಅಪರಾಧ
- ಮಹಿಳೆ
- ಕೃಷಿ
- ವಿಜ್ಞಾನ ತಂತ್ರಜ್ಞಾನ
- ಕ್ರೀಡೆ
- ವಾಣಿಜ್ಯ
- ಚಿತ್ರಸಂತೆ
- ವಿಶೇಷ
- ಆಂದೋಲನ ಪುರವಣಿ
- ಎಡಿಟೋರಿಯಲ್
- ಆಂದೋಲನ 50
- ಜಾಹೀರಾತು
- Cricket
Subscribe to Updates
Get the latest creative news from FooBar about art, design and business.
Previous Articleಭಾರತ್ ಜೋಡೊ ಯಾತ್ರೆ ಆರಂಭ, ಸಹಸ್ರಾರು ಜನರ ಜೊತೆ ಹೆಜ್ಜೆ ಹಾಕಿದ ರಾಹುಲ್
Next Article RSS ನಿಷೇಧ ಮಾಡಿ ಎನ್ನುವುದು ದುರ್ದೈವ : ಸಿಎಂ ಬೊಮ್ಮಾಯಿ