ರಾಷ್ಟ್ರೀಯ

ಒಂದು ರಾಷ್ಟ್ರ ಒಂದು ಚುನಾವಣೆ: ಸಾರ್ವಜನಿಕರ ಸಲಹೆ ಕೋರಿದ ಕೋವಿಂದ್‌ ನೇತೃತ್ವದ ಸಮಿತಿ

ಒಂದು ರಾಷ್ಟ್ರ ಒಂದು ಚುನಾವಣೆ ಕುರಿತಂತೆ ಮಾಜಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ನೇತೃತ್ವದ ಸಮಿತಿಯನ್ನು ಕಳೆದ ಸೆಪ್ಟೆಂಬರ್‌ನಲ್ಲಿ ರಚಿಸಲಾಗಿತ್ತು. ಈ ಸಮಿತಿ ಒಂದು ರಾಷ್ಟ್ರ ಒಂದು ಚುನಾವಣೆ ಬಗ್ಗೆ ರಾಜಕೀಯ ಪಕ್ಷಗಳ ಅಭಿಪ್ರಾಯವೇನು ಎಂಬುದನ್ನು ವಿವಿಧ ರಾಜಕೀಯ ಪಕ್ಷಗಳಿಗೆ ಪತ್ರ ಬರೆಯುವ ಮೂಲಕ ಸಂಗ್ರಹ ಮಾಡಿತ್ತು.

ಇದೀಗ ಅದೇ ರೀತಿ ಈ ಕುರಿತು ಸಾರ್ವಜನಿಕರ ಅಭಿಪ್ರಾಯವನ್ನು ಸಂಗ್ರಹ ಮಾಡಲು ಸಮಿತಿ ಮುಂದಾಗಿದೆ. ಈ ಕುರಿತು ಇದೀಗ ಸಾರ್ವಜನಿಕ ಪ್ರಕಟಣೆಯನ್ನು ಹೊರಡಿಸುವ ಮೂಲಕ ಸಾರ್ವಜನಿಕ ಸಲಹೆಗಳನ್ನು ಆಹ್ವಾನಿಸಿದೆ. ಜನವರಿ 15ರೊಳಗೆ ಸಾರ್ವಜನಿಕರು ಸಲಹೆಗಳನ್ನು ಕಳುಹಿಸಬೇಕು, ಅಂತಹ ಸಲಹೆಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದೆ. ಸಾರ್ವಜನಿಕರು ತಮ್ಮ ಸಲಹೆಗಳನ್ನು onee.gov.in ವೆಬ್‌ಸೈಟ್‌ನಲ್ಲಿ ಪೋಸ್ಟ್‌ ಮಾಡಬಹುದು ಅಥವಾ sc-hlc@gov.inಗೆ ಇಮೇಲ್ ಕಳುಹಿಸಿಕೊಡಬಹುದು ಎಂದು ನೋಟಿಸ್‌ನಲ್ಲಿ ತಿಳಿಸಿದೆ.

andolana

Recent Posts

ನಾಗರಹೊಳೆ, ಬಂಡೀಪುರದಲ್ಲಿ ಸಫಾರಿಗೆ ಗ್ರೀನ್‌ಸಿಗ್ನಲ್:‌ ಅನ್ನದಾತರ ಆಕ್ರೋಶ

ಚಾಮರಾಜನಗರ: ಕಳೆದ ಮೂರು ತಿಂಗಳಿನಿಂದಲೂ ಬಂದ್‌ ಆಗಿದ್ದ ನಾಗರಹೊಳೆ ಹಾಗೂ ಬಂಡೀಪುರ ಸಫಾರಿ ಆರಂಭಕ್ಕೆ ಸರ್ಕಾರ ಗ್ರೀನ್‌ ಸಿಗ್ನಲ್‌ ನೀಡಿದೆ.…

8 mins ago

ಫ್ಯಾಕ್ಟರಿ ಕೆಲಸಕ್ಕೆ ಹೋಗಿದ್ದ ಯುವಕ ಅನುಮಾನಾಸ್ಪದ ಸಾವು

ಹಾಸನ: ಫ್ಯಾಕ್ಟರಿ ಕೆಲಸಕ್ಕೆ ಹೋಗಿದ್ದ ಯುವಕ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಹಾಸನ ಹೊರವಲಯದ ಹನುಮಂತಪುರ ಬಳಿ ನಡೆದಿದೆ. 27 ವರ್ಷ…

21 mins ago

ರಾಜ್ಯದಲ್ಲಿ ಹೆಚ್ಚಿದ ಗರಿಷ್ಠ ತಾಪಮಾನ: ಚರ್ಮದ ಬಗ್ಗೆ ಇರಲಿ ಎಚ್ಚರ

ಬೆಂಗಳೂರು: ರಾಜ್ಯದಲ್ಲಿ ಇಂದಿನಿಂದ ತಾಪಮಾನ ಹೆಚ್ಚಾಗಿದ್ದು, ಬಿಸಿಲ ಝಳ ಆರಂಭವಾಗಿದೆ. ಹಲವು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ ಏರಿಕೆಯಾಗುವ ಸಾಧ್ಯತೆಯಿದೆ. ಕರಾವಳಿ…

1 hour ago

ಯಡಿಯೂರಪ್ಪ ರಾಜಕೀಯ ಜೀವನಕ್ಕೆ 50 ವರ್ಷ: ಭಾವುಕ ಪೋಸ್ಟ್‌ ಹಾಕಿದ ರಾಘವೇಂದ್ರ

ಬೆಂಗಳೂರು: ಕರ್ನಾಟಕದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ರಾಜಕೀಯ ಜೀವನಕ್ಕೆ 50 ವರ್ಷಗಳು ತುಂಬಿದೆ. ಇಂದು ನಡೆಯುವ ಬಿಜೆಪಿ ರಾಜ್ಯ ಕಾರ್ಯಕಾರಿಣಿ…

2 hours ago

ಓದುಗರ ಪತ್ರ: ಐದು ವರ್ಷಕ್ಕೊಮ್ಮೆ ಆಸ್ತಿ ತೆರಿಗೆ ಪರಿಷ್ಕರಿಸಿ

ರಾಜ್ಯದಲ್ಲಿ ಪುರಸಭೆ, ನಗರಸಭೆ, ಮಹಾನಗರ ಪಾಲಿಕೆಗಳಲ್ಲಿ ಐದು ವರ್ಷಗಳಿಗೊಮ್ಮೆ ಆಸ್ತಿ ತೆರಿಗೆಯನ್ನು ಪರಿಷ್ಕರಣೆ ಮಾಡಬೇಕು ಎಂಬ ನಿಯಮವಿದ್ದರೂ ವರ್ಷಕ್ಕೊಮ್ಮೆ ಆಸ್ತಿ…

2 hours ago

ಓದುಗರ ಪತ್ರ: ಮ್ಯಾನ್ ಹೋಲ್ ಸ್ವಚ್ಛಗೊಳಿಸಿ

ಮೈಸೂರಿನ ಝಾನ್ಸಿ ಲಕ್ಷ್ಮೀಬಾಯಿ (ಜೆಎಲ್‌ಬಿ) ರಸ್ತೆಯಲ್ಲಿರುವ ಮೈಸೂರು ಅಭಿವೃದ್ಧಿ ಪ್ರಾಧಿಕಾರ (ಎಂಡಿಎ) ಕಚೇರಿಯ ಮುಂದಿರುವ ಫುಟ್‌ಪಾತ್‌ನಲ್ಲಿರುವ ಮ್ಯಾನ್ ಹೋಲ್‌ನಲ್ಲಿ ಕಸ…

2 hours ago