ಮುಂಬೈ : ಬಾಲಿವುಡ್ ನ ಖ್ಯಾತ ಹಾಸ್ಯನಟ ರಾಜು ಶ್ರೀವಾಸ್ತವ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಕಳೆದ ತಿಂಗಳ ಆಗಸ್ಟ್ 10ನೇ ತಾರೀಖಿನಂದು ಜಿಮ್ ಮಾಡುತ್ತಿದ್ದ ವೇಳೆ ಎದೆನೋವಿನಿಂದ ಏಕಾಏಕಿ ಕುಸಿದು ಬಿದ್ದಿದ್ದು, ತಕ್ಷಣವೇ ಅವರನ್ನು ಏಮ್ಸ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ಬೆಳಿಗೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.
ರಾಜು ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಸಹ ಹಾಸ್ಯ ಕಲಾವಿದ ಸುನಿಲ್ ಪಾಲ್ ಅವರು
ವಿಡಿಯೋ ಸಂದೇಶದ ಮೂಲಕ “ದಯವಿಟ್ಟು ರಾಜು ಶ್ರೀ ವಾಸ್ತವ ಅವರಿಗಾಗಿ ಪ್ರಾರ್ಥಿಸಿ ಅವರು ತೀವ್ರ ಗಂಭೀರ ಸ್ಥಿತಿಯಲ್ಲಿದ್ದಾರೆ. ಮೆದುಳು ಕಾರ್ಯ ಸ್ಥಗಿತಗೊಂಡಿದೆ ದಯವಿಟ್ಟು ರಾಜುಬಾಯ್ ಗಾಗಿ ಪ್ರಾರ್ಥಿಸಿ” ಎಂದು ಮನವಿ ಮಾಡಿದ್ದರು. ಆದರೆ ಇಂದು ಆ ಮನವಿ ಫಲಿಸಲಿಲ್ಲ.
ರಾಜು ಶ್ರೀವಾಸ್ತವ ಅವರು ಹಾಸ್ಯ ಕಲಾವಿದರಲ್ಲದೆ ಒಂದಷ್ಟು ಸಿನಿಮಾಗಳಲ್ಲೂ ನಟಿಸಿ. ಕೆಲ ಕಾಲ ರಾಜಕೀಯದಲ್ಲಿಯೂ ತೊಡಗಿಕೊಂಡಿದ್ದರು. ಇವರ ನಿಧನಕ್ಕೆ ಹಲವಾರು ಗಣ್ಯರು ಕಂಬನಿ ಮಿಡಿದಿದ್ದಾರೆ.