ನವದೆಹಲಿ : ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದ ಸಮಸ್ತ ಜನತೆಗೆ ಕಾರ್ತಿಕ ಪೂರ್ಣಿಮ ಮತ್ತು ದೇವ್ ದೀಪಾವಳಿ ಹಬ್ಬದ ಶುಭಾಶಯ ಕೋರಿದ್ದಾರೆ.
ಈ ಸಂಬಂಧ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ, ಎಲ್ಲರಿಗೂ ಭಾರತೀಯ ಸಾಂಪ್ರದಯದ ಆಚರಣೆಯ ಭಾಗವಾದ ಕಾರ್ತಿಕ ಪೂರ್ಣಿಮ ಮತ್ತು ದೇವ್ ದೀಪಾವಳಿ ಹಬ್ಬದ ಶುಭಾಶಯಗಳು. ಈ ದಿನ ದೇಶದ ಎಲ್ಲಾ ನನ್ನ ಕುಟುಂಬ ಸದಸ್ಯರ ಜೀವನದಲ್ಲಿ ಹೊಸ ಬೆಳಕು ಹಾಗೂ ಚೈತನ್ಯ ತರಲಿ ಎಂದು ಬಯಸುತ್ತೇನೆ ಎಂದು ಹೇಳಿದ್ದಾರೆ.
ನಂಬಿಕೆಗಳ ಪ್ರಕಾರ, ಈ ದಿನ ಶಿವನು ತ್ರಿಪುರಾಸುರನನ್ನು ಕೊಂದನು ಎನ್ನಲಾಗುತ್ತದೆ. ತ್ರಿಪುರಾಸುರನ ವಧೆಯಿಂದ ಸಂತಸಗೊಂಡ ದೇವತೆಗಳು ಕಾಶಿಯಲ್ಲಿ ಅನೇಕ ದೀಪಗಳನ್ನು ಬೆಳಗಿಸಿದರು. ಅದಕ್ಕಾಗಿಯೇ ಇದನ್ನು ದೇವ ದೀಪಾವಳಿ ಎಂದೂ ಕರೆಯುತ್ತಾರೆ.
ಕಾರ್ತಿಕ ಪೂರ್ಣಿಮೆಯ ದಿನ, ಪ್ರದೋಷ ಕಾಲದಲ್ಲಿ ನದಿ, ಕೊಳದಲ್ಲಿ ದೀಪವನ್ನು ದಾನ ಮಾಡುವುದಕ್ಕೆ ವಿಶೇಷ ಮಹತ್ವವಿದೆ. ಈ ದಿನ ಬ್ರಹ್ಮ ಮುಹೂರ್ತದಂದು ಬೆಳಗ್ಗೆ ನದಿ ಅಥವಾ ಕೊಳದಲ್ಲಿ ದೀಪವನ್ನು ಹಚ್ಚಿ ಹರಿಯುವಂತೆ ಮಾಡಿ. ದೀಪವನ್ನು ದಾನ ಮಾಡುವುದರಿಂದ ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ.
ಬೆಂಗಳೂರು: ಇರಾನ್-ಇಸ್ರೇಲ್ ನಡುವಿನ ಸಂಘರ್ಷ ಏರ್ಪಟ್ಟಿರುವ ಪರಿಣಾಮ ಕನ್ನಡಿಗರ ರಕ್ಷಣೆಗೆ ತುರ್ತು ಕ್ರಮ ಕೈಗೊಳ್ಳಿ ಎಂದು ಪ್ರಧಾನಿ ನರೇಂದ್ರ ಮೋದಿ…
ನಾಪೋಕ್ಲು: ಕಾನೂನು ವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ವಾಗ್ದಾಳಿ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಮಲೆಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೊಳಸಿಕೆರೆ ಗ್ರಾಮದ…
ಬೆಂಗಳೂರು: ಈ ಬಾರಿಯ ಬಜೆಟ್ ಅಧಿವೇಶನದಲ್ಲಿ ಸರ್ಕಾರದ ಲೋಪದೋಷಗಳನ್ನು ಚರ್ಚಿಸಲಾಗುವುದು. ರಾಜ್ಯದ ಆರ್ಥಿಕ ದುಸ್ಥಿತಿಯ ವಿರುದ್ಧ ಹೋರಾಟ ಮಾಡಲಾಗುವುದು ಎಂದು…
ಕೊಡಗು: ನಾಳೆ ವರ್ಷದ ಮೊದಲ ಚಂದ್ರಗ್ರಹಣ ಹೋಳಿ ಹುಣ್ಣಿಮೆಯ ದಿನದಂದು ಸಂಭವಿಸುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಹಲವು ದೇವಾಲಯಗಳ ಪೂಜಾ…
ಮಂಡ್ಯ: ಜಿಲ್ಲೆಯ ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆ, ಗೊರವನಹಳ್ಳಿ, ಚಾಮನಹಳ್ಳಿ, ಸೋಮನಹಳ್ಳಿ ಸೇರಿದಂತೆ ವಿವಿಧ ಪ್ರದೇಶಗಳನ್ನು ಸ್ಥಳೀಯರ ಆಶಯಗಳಿಗೆ ವಿರುದ್ಧವಾಗಿ ಮದ್ದೂರು…