ನವದೆಹಲಿ : ರಾಷ್ಟ್ರಪತಿ ಚುನಾವಣೆಯ ಮತದಾನ ಪ್ರಕ್ರಿಯೆಯುಬೆಳಿಗ್ಗೆ ಆರಂಭವಾಗಿದ್ದು ಎನ್ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ಮುನ್ನಡೆಯಲ್ಲಿದ್ದಾರೆ. ಪ್ರತಿಪಕ್ಷ ಅಭ್ಯರ್ಥಿ ಯಶವಂತ್ ಸಿನ್ಹಾ ಅವರಿಗಿಂತ ಭಾರೀ ಮುನ್ನಡೆ ಸಾಧಿಸಿದ್ದಾರೆ.
ದ್ರೌಪದಿ ಮರ್ಮು ಅವರಿಗೆ ಸುಮಾರು 540 ಮತಗಳು ಲಭಿಸಿದ್ದು, ಇದರ ಮೌಲ್ಯ 3,78,000 ಆಗಿದೆ. ಯಶವಂತ್ ಸಿನ್ಹಾ 208 ಮತಗಳನ್ನು ಗಳಿಸಿದ್ದು, ಇದರ ಮೌಲ್ಯ 1,45,600 ಆಗಿದೆ.
ಒಟ್ಟು ಮತದಾನದಿಂದ 8 ಜನ ಸಂಸದರು ದೂರ ಉಳಿದಿದ್ದರು ಹಾಗೂ 15 ಮತಗಳು ಅಸಿಂಧುಗೊಂಡಿದೆ. ಪ್ರತಿಸ್ಪರ್ಧಿ ಯಶವಂತ್ ಸಿನ್ಹಾಗೆ 237 ಸಂಸದರ ಬೆಂಬಲ ದೊರೆಯಬೇಕಿತ್ತು.