ನವದೆಹಲಿ: ರಾಷ್ಟ್ರಪತಿ ಚುನಾವಣೆ ಸಂಬಂಧವಾಗಿ ಚುನಾವಣಾ ಆಯೋಗವು ಇಂದು ಅಧಿಸೂಚನೆಯನ್ನು ಹೊರಡಿಸಿದೆ. ನಾಮಪತ್ರ ಸಲ್ಲಿಕೆಗೆ ಪ್ರಕ್ರಿಯೆಗೆ ಚಾಲನೆ ದೊರೆತಿದೆ.
ನಾಮಪತ್ರವನ್ನು ಸಲ್ಲಿಸಲು ಜೂನ್ 29 ಕಡೆ ದಿನವಾಗಿದ್ದು, ಜೂನ್ 30ರಂದು ಪರಿಶೀಲನೆ ನಡೆಯಲಿದೆ. ನಾಮಪತ್ರವನ್ನು ಹಿಂಪಡೆಯಲು ಜುಲೈ ಎರಡನೇ ತಾರೀಖು ಕೊನೆ ದಿನಾಂಕವಾಗಿದೆ. ಜುಲೈ 21ರಂದು ಚುನಾವಣೆ ನಡೆಯಲಿದೆ. ಎಂದು ಚುನಾವಣಾ ಆಯೋಗ ತಿಳಿಸಿದೆ.