ರಾಷ್ಟ್ರಪತಿ ಚುನಾವಣೆ : ದ್ರೌಪದಿ ಮುರ್ಮು ನಾಳೆ ನಾಮಪತ್ರ ಸಲ್ಲಿಕೆ

ಭುವನೇಶ್ವರ ( ಒಡಿಶಾ) : ರಾಷ್ಟ್ರಪತಿ ಚುನಾವಣಾ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ನಾಳೆ (ಜೂನ್‌ 24) ನಾಮಪತ್ರ ಸಲ್ಲಿಸಲಿದ್ದಾರೆ. ಈ ಹಿನ್ನೆಲೆ ಇಂದು ಅವರು ಭುವನೇಶ್ವರದಿಂದ ದೆಹಲಿಗೆ ತೆರಳಿದ್ದಾರೆ.

ಕೇಂದ್ರ ಸರ್ಕಾರ ಹೀಗಾಗಲೇ ಅವರಿಗೆ ಝೆಡ್‌ ಪ್ಲಸ್‌ ಭದ್ರತೆಯನ್ನು ಕಲ್ಪಿಸಲಾಗಿದ್ದು, ಭುವನೇಶ್ವರ ವಿಮಾನ ನಿಲ್ದಾಣದಿಂದ ಬೆಳಿಗ್ಗೆ 9.40 ಕ್ಕೆ ತಮ್ಮ ಪ್ರಯಾಣವನ್ನು ಬೆಳಸಿದ್ದಾರೆ.

ಭಾರತದ 16 ನೇ ರಾಷ್ಟ್ರಪತಿ ಚುನಾವಣೆಯು  ಜುಲೈ 18 ರಂದು ನಡೆಯಲಿದೆ. ಜುಲೈ 21 ರಂದು ಮತ ಎಣಿಕೆಯು ನಡೆಯಲಿದೆ.