ಯೋದರೊಂದಿಗೆ ವಿಜಯದಶಮಿ ಆಚರಿಸಲಿರುವ ರಾಷ್ಟ್ರಪತಿ

ದ್ರಾಸ್ (ಲಡಾಖ್): ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ದಸರಾ ಹಬ್ಬವನ್ನು ದೆಹಲಿಯಲ್ಲಿಯೇ ಆಚರಿಸುವುದು ಸಂಪ್ರದಾಯ. ಆದರೆ, ಅವರು ಈ ಬಾರಿ ಭಾರತೀಯ ಸೇನೆಯೊಂದಿಗೆ, ಲಡಾಕ್‌ನ ದ್ರಾಸ್‌ನಲ್ಲಿ ನವರಾತ್ರಿ ವಿಜಯದಶಮಿ ಆಚರಿಸಲಿದ್ದಾರೆ. ರಾಷ್ಟ್ರಪತಿ ಅವರು ಗುರುವಾರದಿಂದ ಎರಡು ದಿನಗಳ ಕಾಲ ಲಡಾಖ್ ಮತ್ತು ಜಮ್ಮು-ಕಾಶ್ಮೀರ ಪ್ರವಾಸ ಕೈಗೊಂಡಿದ್ದಾರೆ. ಈಗಾಗಲೇ ಲಡಾಖ್ ತಲುಪಲಿದ್ದಾರೆ.

ರಾಮನಾಥ ಕೋವಿಂದ್ ಅವರು ಅ. ೧೪ ಮತ್ತು ೧೫ರಂದು ಲಡಾಖ್, ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡುತ್ತಾರೆ. ಕಾರ್ಗಿಲ್ ಯುದ್ಧದಲ್ಲಿ ಮಡಿದ ಹುತಾತ್ಮರಿಗೆ ಅ. ೧೫ರಂದು ಶ್ರದ್ಧಾಂಜಲಿ ಸಲ್ಲಿಸುವರು. ಅದಾದ ಬಳಿಕ ಅಲ್ಲಿನ ಸೇನಾ ಅಧಿಕಾರಿಗಳು ಮತ್ತು ಸೈನಿಕರೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ರಾಷ್ಟ್ರಪತಿ ಭವನದ ಪ್ರಕಟಣೆ ತಿಳಿಸಿದೆ.

ರಾಷ್ಟ್ರಪತಿ ಅವರು, ಲಡಾಖ್‌ಗೆ ತೆರಳಲಿದ್ದಾರೆ. ಲೇಹ್‌ನ ಸಿಂಧು ಘಾಟ್‌ನಲ್ಲಿ ಸಿಂಧು ದರ್ಶನ ಪೂಜೆ ನೆರವೇರಿಸಿ ಜಮ್ಮು-ಕಾಶ್ಮಿರಕ್ಕೆ ತೆರಳಿ ಅಲ್ಲಿ ಭಾರತೀಯ ಸೇನೆಯ ಉತ್ತರ ಕಮಾಂಡ್‌ನ ಪ್ರಧಾನ ಕಚೇರಿಯಿರುವ ಉಧಾಂಪುರ ಸ್ಟೇಶನ್‌ನಲ್ಲಿ ಯೋಧರೊಂದಿಗೆ ಸಂವಾದ ನಡೆಸುವರು.

ಅ. ೧೫ರಂದು ಅಂದರೆ ವಿಜಯದಶಮಿ ದಿನದಂದು ರಾಷ್ಟ್ರಪತಿಗಳು ಲಡಾಖ್‌ನ ದ್ರಾಸ್‌ನಲ್ಲಿರಲಿದ್ದಾರೆ. ೧೯೯೯ರ ಕಾರ್ಗಿಲ್ ಯುದ್ಧದಲ್ಲಿ ಮಡಿದ ಯೋಧರ ಸ್ಮಾರಕಕ್ಕೆ ಗೌರವ ನಮನ ಸಲ್ಲಿಸುವರು.

× Chat with us