ಆಯುಧ ಪೂಜೆ: ದೇಶದ ಜನತೆಗೆ ರಾಷ್ಟ್ರಪತಿ, ಪ್ರಧಾನಿ ಶುಭಾಶಯ

ಹೊಸದಿಲ್ಲಿ: ನವರಾತ್ರಿ ಮಹೋತ್ಸವದ ಪ್ರಮುಖ ದಿನಗಳಾದ ಆಯುಧ ಪೂಜೆ ಮತ್ತು ವಿಜಯದಶಮಿ ಪ್ರಯುಕ್ತ ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯಾತಿಗಣ್ಯರು ದೇಶದ ಜನರಿಗೆ ಶುಭ ಕೋರಿದ್ದಾರೆ.

ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು, ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ ಸಿಂಗ್, ಪ್ರಹ್ಲಾದ್ ಜೋಷಿ, ಶೋಭಾ ಕರಂದ್ಲಾಜೆ, ರಾಜೀವ್ ಚಂದ್ರಶೇಖರ್. ಎ. ನಾರಾಯಣಸ್ವಾಮಿ, ಭಗವಂತ ರಾವ್ ಖೂಬಾ, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಅನೇಕ ಗಣ್ಯರು ದಸರಾ ಹಬ್ಬದ ಶುಭ ಕೋರಿದ್ದಾರೆ.

ದಸರಾ ಮಹೋತ್ಸವವು ದೇಶದ ಸಮಸ್ತ ಜನರಿಗೆ ಸಕಲ ಸನ್ಮಂಗಳ ಉಂಟು ಮಾಡಲಿ ಎಂದು ಗಣ್ಯರು ಶುಭ ಕೋರಿದ್ದಾರೆ.

× Chat with us