ಹೊಸದಿಲ್ಲಿ: ಸಂಸತ್‌ನಲ್ಲಿ ಚಳಿಗಾಲದ ಅಧಿವೇಶನ ಇಂದಿನಿಂದ ಶುರುವಾಗಿದ್ದು, ವಿಪಕ್ಷಗಳ ಗದ್ದಲ ಕೋಲಾಹಲದಿಂದ ನವೆಂಬರ್ 27ಕ್ಕೆ ಸದನ ಮುಂದೂಡಿಕೆ ಮಾಡಲಾಗಿದೆ.
ಲೋಕಸಭೆಯಲ್ಲಿ ಇಂದು(ನ.25) ವಿರಾಮದ ನಂತರ 12 ಗಂಟೆಗೆ ಸದನ ಸೇರಿದ ಪ್ರತಿಪಕ್ಷದ ಸದಸ್ಯರು ಉತ್ತರ ಪ್ರದೇಶದ ಸಂಭಲ್‌ನಲ್ಲಿ ಸಂಭವಿಸಿದ ಹಿಂಸಾಚಾರವನ್ನು ಖಂಡಿಸಿ ಘೋಷಣೆಗಳನ್ನು ಕೂಗಿದರು. ಅಲ್ಲದೇ ಅಮೆರಿಕಾ ನ್ಯಾಯಾಲಯದಲ್ಲಿ ಉದ್ಯಮಿ ವಿರುದ್ಧದ ಆರೋಪಗಳ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.
ಈ ಹಿನ್ನೆಲೆ ಲೋಕಸಭೆಯಲ್ಲಿ ಉಂಟಾದ ಗದ್ದಲಕ್ಕೆ ಕಾರಣವಾಗಿರುವುದರಿಂದ ಲೋಕಸಭೆ ಸಭಾಪತಿ ನವೆಂಬರ್ 27ಕ್ಕೆ ಮುಂದೂಡಿಕೆ ಮಾಡಿದ್ದಾರೆ.
ಲೋಕಸಭೆಯಲ್ಲಿ ಚಳಿಗಾಲದ ಅಧಿವೇಶನ ಇಂದಿನಿಂದ ಪ್ರಾರಂಭವಾಗಿದ್ದು, ಸದನದಲ್ಲಿ ಪಶ್ಚಿಮ ಬಂಗಾಳದ ಬಸಿರ್ಹತ್ ಕ್ಷೇತ್ರದಿಂದ ಎಸ್ಕೆ ನೂರುಲ್ ಇಸ್ಲಾಂ ಹಾಗೂ ಮಹಾರಾಷ್ಟ್ರದ ನಾಂದೇಡ್ ಕ್ಷೇತ್ರದಿಂದ ಸದನಕ್ಕೆ ಚುನಾಯಿತರಾಗಿದ್ದ ವಸಂತರಾವ್ ಚವಾಣ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಹೊಸದಿಲ್ಲಿ : 2025ನೇ ಸಾಲಿನ ಐಪಿಎಲ್‌ನ 18ನೇ ಆವೃತ್ತಿಯ 32ನೇ ಪಂದ್ಯ ಸೂಪರ್ ಓವರ್‌ನಲ್ಲಿ ಅಂತ್ಯ ಕಂಡಿದ್ದು, ಈ ಪಂದ್ಯದಲ್ಲಿ…
ಕರ್ನಾಟಕದ ಮುಕುಟ ‘ಬೀದರ್’ ನಲ್ಲಿ 2025ಕೋಟಿ ರೂ. ಮೌಲ್ಯದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಸಿಎಂ ಗ್ಯಾರಂಟಿಗಳನ್ನು ಜಾರಿ ಮಾಡಿ…
ಹನೂರು : ತಾಲ್ಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ಇತಿಹಾಸದಲ್ಲಿಯೇ ಬುಧವಾರ ನಡೆದ ಹುಂಡಿ ಹಣ ಎಣಿಕೆಯಲ್ಲಿ ಈ…
ಕಲಬುರಗಿ : ರಾಜ್ಯದಲ್ಲಿನ ನಮ್ಮ ಸರ್ಕಾರ ತೆಗೆಯಲು ಯೋಜನೆ ನಡೆದಿದೆ. ಒಗ್ಗಾಟ್ಟಾಗಿ ಇರದೇ ಹೋದರೆ ಸರ್ಕಾರ ಉರುಳಬಹುದು ಎನ್ನುವ ಮೂಲಕ…
ಮೈಸೂರು: ಬಿಸಿಲ ತಾಪದಿಂದ ಕಾದು ಕೆಂಡದಂತಾಗಿದ್ದ ಇಳೆಗೆ ಬುಧವಾರ ರಾತ್ರಿ ಸುರಿದ ಅಶ್ವಿನಿ ಮಳೆ ತಂಪೆರೆದಿದೆ. ಜಿಲ್ಲೆಯ ವಿವಿಧೆಡೆ ಉತ್ತಮ…
ಬೆಂಗಳೂರು : ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯತಿ ಕಾರ್ಯದರ್ಶಿಗಳು, ಗ್ರಾಮೀಣಾಭಿವೃದ್ಧಿ ಸಹಾಯಕ ಗ್ರೇಡ್ 1 ಮತ್ತು 2…