ಆರ್ಯನ್‌ ಖಾನ್‌ಗೆ ಜಾಮೀನು ನೀಡಲು ಸಾಧ್ಯವಿಲ್ಲ: ಕೋರ್ಟ್‌

ಮುಂಬೈ: ಡ್ರಗ್ಸ್‌ ಪ್ರಕರಣದಡಿ ಎನ್‌ಸಿಬಿಯಿಂದ ಬಂಧನಕ್ಕೆ ಒಳಗಾಗಿರುವ ಬಾಲಿವುಡ್‌ ನಟ ಶಾರೂಖ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ ಸಲ್ಲಿಸಿದ್ದ ಜಾಮೀನು ಮನವಿಯನ್ನು ಮುಂಬೈ ಕೋರ್ಟ್‌ ತಿರಸ್ಕರಿಸಿದೆ.

23 ವರ್ಷ ವಯಸ್ಸಿನ ಆರ್ಯನ್‌ ಖಾನ್‌ ಅಕ್ಟೋಬರ್‌ 8ರಿಂದ ಮುಂಬೈನ ಆರ್ಥರ್‌ ರೋಡ್‌ ಜೈಲಿನಲ್ಲಿದ್ದಾರೆ.

ಆರ್ಯನ್‌ ಖಾನ್‌ ಮತ್ತು ಆತನ ಸ್ನೇಹಿತ ಆರ್ಬನ್‌ ಮರ್ಚೆಂಟ್‌ ಹಾಗೂ ಇತರೆ ಏಳು ಮಂದಿಯನ್ನು ಎನ್‌ಸಿಬಿ ಪೊಲೀಸರು ಅಕ್ಟೋಬರ್‌ 3ರಂದು ಬಂಧಿಸಿದ್ದರು.

ʻರೇವ್‌ ಪಾರ್ಟಿ ವೇಳೆ ಎನ್‌ಸಿಬಿ ಪೊಲೀಸರು ದಾಳಿ ನಡೆಸಿದಾಗ ಆರ್ಯನ್‌ ಖಾನ್‌ ಬಳಿ ಯಾವುದೇ ಡ್ರಗ್ಸ್‌ ಇರಲಿಲ್ಲʼ ಎಂದು ಅವರ ವಕೀಲರು ವಾದ ಮಂಡಿಸಿದ್ದರು.

× Chat with us