video ನೋಡಿ… ನೀರಿನಾಳದಲ್ಲೂ ಜಾವೆಲಿನ್‌ ಎಸೆದ ನೀರಜ್‌ ಚೋಪ್ರಾ!

ಬೆಂಗಳೂರು: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಜಾವೆಲಿನ್‌ ಎಸೆತದಲ್ಲಿ ಭಾರತಕ್ಕೆ ಚಿನ್ನದ ಪದಕ ತಂದು ಇಡೀ ದೇಶವೇ ಹೆಮ್ಮೆಪಡುವಂತೆ ಮಾಡಿದ ನೀರಜ್‌ ಚೋಪ್ರಾ ಈಗ ಮತ್ತೊಂದು ವಿಶೇಷತೆಯೊಂದಿಗೆ ಸುದ್ದಿಯಲ್ಲಿದ್ದಾರೆ.

ವಿಶ್ರಾಂತಿ ಮೂಡ್‌ನಲ್ಲಿರುವ ಚೋಪ್ರಾ ಮಾಲ್ಡೀವ್ಸ್ ಪ್ರವಾಸ ಕೈಗೊಂಡಿದ್ದಾರೆ.

ಜಾವೆಲಿನ್‌ ಚೋಪ್ರಾರ ಬದುಕಿನ ಭಾಗವಾಗಿದೆ. ಅದಕ್ಕೆ ಸಾಕ್ಷಿ ಎಂಬಂತೆ ನೀರಿನಾಳದಲ್ಲಿ ಜಾವೆಲಿನ್ ಎಸೆದು ಜಯದ ಸಂಕೇತ ತೋರಿಸುತ್ತಿರುವ ವಿಡಿಯೊ ಎಲ್ಲೆಡೆ ವೈರಲ್‌ ಆಗಿದೆ. ವಿಡಿಯೊವನ್ನು ನೀರಜ್‌ ಚೋಪ್ರಾ ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಅದಕ್ಕೆ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

ಅಸಲಿಗೆ ಅಲ್ಲಿ ಜಾವೆಲಿನ್ ಇರಲಿಲ್ಲ. ಜಾವೆಲಿನ್ ಎಸೆಯುವ ಹಾಗೇ ಅಭಿನಯಿಸಿ ಎಲ್ಲರ ಮನಗೆದ್ದಿದ್ದಾರೆ.

‘ನಾನು ಯಾವಾಗಲೂ ಜಾವೆಲಿನ್ ಬಗ್ಗೆಯೇ ಯೋಚಿಸುತ್ತಿರುತ್ತೇನೆ’ ಎಂದು ತಮ್ಮ ನೀರಿನಾಳದ ವಿಡಿಯೊಗೆ ಸಾಲೊಂದನ್ನು ನೀರಜ್ ಚೋಪ್ರಾ ಬರೆದುಕೊಂಡಿದ್ದಾರೆ.

× Chat with us