ಬೆಂಗಳೂರು : ಬಾಹ್ಯಕಾಶ ಕ್ಷೇತ್ರದಲ್ಲಿ ಹೊಸ ಹೊಸ ಪ್ರಯತ್ನಗಳನ್ನು ನಡೆಸುವ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಇದೀಗ ಶನಿಗ್ರಹದ ಚಂದ್ರನಂಗಳಕ್ಕೆ ಹಾವಿನ ಆಕಾರದ ವಿಶೇಷ ನೌಕೆಯನ್ನು ಕಳುಹಿಸಲು ಯೋಜನೆ ರೂಪಿಸಿದೆ.
ಹಾವಿನ ರೀತಿಯಲ್ಲಿ ಚಲಿಸುವ ಈ ರೋಬೋಟ್ ಶನಿಗ್ರಹದ ಚಂದ್ರನ ಬಗ್ಗೆ ಅಧ್ಯಯನ ನಡೆಸಲಿದೆ. ಇದು ಎನ್ನಲಾಡಸ್ ಎಂದು ಕರೆಲ್ಪಡುತ್ತದೆ. ಚಂದ್ರನಲ್ಲಿ ಮಾನವನಿಗೆ ಪೂರಕವಾದ ವಾತಾವರಣ ಇದೆಯೇ ಎಂದು ಪತ್ತೆ ಮಾಡುವುದು ಇದರ ಮೂಲ ಉದ್ದೇಶ.
ಎನ್ನೆಲಾಡಸ್ ನ ಮೇಲ್ಮೈ ಹಿಮದಿಂದ ಆವೃತವಾಗಿರುವ ಕಾರಣ ಸಾಮಾನ್ಯ ಸಾಧನಗಳಿಂದ ಅಧ್ಯಯನ ನಡೆಸಲು ಸಾಧ್ಯವಾಗುವುದಿಲ್ಲ.ಅದಕ್ಕಾಗಿ ನಾಸಾ ವಿಜ್ಞಾನಿಗಳು ಹಾವಿನ ರೀತಿಯ ರೋಬೋಟ್ ಸಿದ್ಧಪಡಿಸಿದ್ದು, ಇದು ಮಂಜಿನ ಎಡೆಯಲ್ಲಿ ಸಲೀಸಾಗಿ ಪ್ರಯಾಣಿಸಬಲ್ಲದು.