ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಟ್ವೀಟ್; ಯುವಕನನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾದ ಮುಂಬೈ ಪೊಲೀಸ್

ಟ್ವಿಟರ್​ನಲ್ಲಿ ಪೋಸ್ಟ್​ ಪ್ರಕಟಿಸಿ, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ ಯುವಕನನ್ನು ಮುಂಬೈನ ಸೈಬರ್​ ಪೊಲೀಸರು ರಕ್ಷಣೆ ಮಾಡಿದ್ದಾರೆ. ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದ ಯುವಕ ಡೆತ್​ ನೋಟ್​ ಬರೆದು ಅದನ್ನು ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿದ್ದ. ಈ ವಿಷಯ ತಿಳಿಯುತ್ತಿದ್ದಂತೆ ಯುವಕನ ನಿರ್ಧಾರವನ್ನು ಬದಲಾಯಿಸಲು ಮುಂದಾದ ಪೊಲೀಸರು ಜೀವದ ಮತ್ತು ಬದುಕಿನ ಮೌಲ್ಯವನ್ನು ಆತನಿಗೆ ಅರ್ಥೈಸುವ ಪ್ರಯತ್ನ ಮಾಡಿದ್ದು, ಯುವಕನನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸ್ವತಃ ಈ ಸಂಗತಿಯನ್ನು ಮುಂಬೈ ಪೊಲೀಸರು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪೋಸ್ಟ್​ ಹಾಕಿದ ಯುವಕನನ್ನು ಅಮೀರ್​ ಎಂದು ಗುರುತಿಸಲಾಗಿದೆ.

ಮುಂಬೈ ಪೊಲೀಸರ ಟ್ವೀಟ್​ ​​ ಪ್ರಕಾರ, ಯುವಕ ಮಾನಸಿಕವಾಗಿ ನೊಂದಿದ್ದು, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪೋಸ್ಟ್​ ಮಾಡಿದ್ದ. ಆದರೆ ಮುಂಬೈ ಸೈಬರ್​ ಪೊಲೀಸ್​, ಪಿಎಸ್ಐ ವಾಫ್​, ವಿರಾರ್​ ಅವರು ತಕ್ಷಣಕ್ಕೆ ಅಮೀರ್​ನನ್ನು ಭೇಟಿಯಾಗಿ ಆತನ ಮನಃಪರಿವರ್ತನೆಗೆ ಮುಂದಾಗಿದ್ದಾರೆ ಮತ್ತು ಆತ್ಮಹತ್ಯೆ ಮಾಡಿಕೊಳ್ಳುವುದು ಅಪರಾಧ ಎಂದು ಅರಿವು ಮೂಡಿಸಿ ಯುವಕನ ತಪ್ಪು ನಿರ್ಧಾರಕ್ಕೆ ಕಡಿವಾಣ ಹಾಕಿದ್ದಾರೆ.

× Chat with us