ಮಧ್ಯಪ್ರದೇಶ : ಶಾಲೆಯೊಂದರಲ್ಲಿ ಒಂದೇ ಸಿರಿಂಜ್ ಬಳಸಿ ಶಾಲಾ ಮಕ್ಕಳಿಗೆ ಕೋವಿಡ್ ಲಸಿಕೆ ಹಾಕಲಾಗಿದೆ.
ಒಂದೇ ಸಿಂಗಲ್ ಸಿರಿಂಜ್ ಬಳಸಿ ಸುಮಾರು 30 ವಿದ್ಯಾರ್ಥಿಗಳಿಗೆ ಲಸಿಕೆ ನೀಡಲಾಗಿರುವ ಆಘಾತಕಾರಿ ಅಂಶ ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಅಧಿಕಾರಿ ಜೀತೇಂದ್ರ ಅವರ ನೇತೃತ್ವದಲ್ಲಿ ಲಸಿಕೆಯನ್ನು ನೀಡಲಾಗಿದ್ದು, ಇದನ್ನು ವಿದ್ಯಾರ್ಥಿಗಳ ಪೋಷಕರು ಸ್ಥಳದಲ್ಲಿಯೇ ವೀಡಿಯೋ ಮಾಡಿ ಈ ಆಘಾತಕಾರಿ ಬೆಳವಣಿಗೆಯನ್ನು ಖಂಡಿಸಿ ಅಧಿಕಾರಿಯನ್ನು ಪ್ರಶ್ನಿಸಿ ʼಒಂದೇ ಸಿರಿಂಜ್ ಅನ್ನು ಹಲವಾರು ವಿದ್ಯಾರ್ಥಿಗಳಿಗೆ ನೀಡಬಹುದೇ ಇದು ತಪ್ಪಲ್ಲವೇ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಆತ ನನಗೆ ಈ ವಿಚಾರ ತಿಳಿದಿದೆ ನಾನು ಉದ್ದೇಶ ಪೂರ್ವಕವಾಗಿಯೇ ವಿದ್ಯಾರ್ಥಿಗಳಿಗೆ ಲಸಿಕೆಯನ್ನು ನೀಡಿದೆ ಎಂದು ಹೇಳಿದ್ದಾರೆ.
ವಿದ್ಯಾರ್ಥಿಗಳು ಹಾಗೂ ಅವರ ತಂದೆ-ತಾಯಿಗಳು ಇದನ್ನು ಖಂಡಿಸಿದ್ದಾರೆ. ಮೇಲಾಧಿಕಾರಿಗಳ ಗಮನಕ್ಕೆ ತರಲು ಮುಂದಾಗಿದ್ದಾರೆ.
“ಒಂದು ಸೂಜಿ, ಒಂದು ಸಿರಿಂಜ್, ಒಂದೇ ಬಾರಿ” ಪ್ರೋಟೋಕಾಲ್ ಉಲ್ಲಂಘನೆಯಾಗಿದೆ.