ಚೆನ್ನೈ : ತಮಿಳುನಾಡಿನ ಖ್ಯಾತ ವಿಮರ್ಶಕ ಎಂ.ಎಲ್ ಕೌಶಿಕ್ ಅವರು ನಿಧನರಾಗಿದ್ದಾರೆ.
ಕೌಶಿಕ್ ಅವರಿಗೆ 36 ವರ್ಷ ವಯಸ್ಸಾಗಿದ್ದು ಸೋಮವಾರ ರಾತ್ರಿ ಹೃದಯಘಾತದಿಂದ ಮೃತಪಟ್ಟಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸುವೆ.
ಕೌಶಿಕ್ ಅವರು ಕೆಲಕಾಲ ಖಾಸಗಿ ವಾಹಿನಿಯಲ್ಲಿ ವಿಡಿಯೋ ಜಾರಿಯಾಗಿಯೂ ಕೆಲಸ ಮಾಡುತ್ತಿದ್ದರು. ಇದರ ಜೊತೆಗೆ ಬಿಡುಗಡೆಯಾಗುತ್ತಿದ್ದ ತಮಿಳು, ತೆಲುಗು, ಮಲಯಾಳಂ ಸಿನಿಮಾಗಳನ್ನು ವಿಮರ್ಶೆ ಮಾಡುತ್ತಿದ್ದರು ಇವರ ವಿಮರ್ಶೆಯನ್ನು ನೋಡಿ ಹಲವಾರು ಪ್ರೇಕ್ಷಕರು ಸಿನಿಮಾ ನೋಡಲು ತೆರಳುತ್ತಿದ್ದರು.
ಕೌಶಿಕ್ ಅವರ ನಿಧಾನಕ್ಕೆ ಕಾಲಿವುಡ್, ಟಾಲಿವುಡ್ ಸೇರಿದಂತೆ ಮಲಯಾಳಂ ಚಿತ್ರರಂಗದ ಹಲವಾರು ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸಿದ್ದಾರೆ.