ಭದ್ರತೆಯೊಂದಿಗೆ ಜೋಡೊ ಯಾತ್ರೆ ಆರಂಭ
ಕತುವಾ: ಜಮ್ಮು-ಕಾಶ್ಮೀರದಲ್ಲಿ ಅವಳಿ ಬಾಂಬ್ ಸ್ಛೋಟ ನಡೆದ ಮರುದಿನ ಬಿಗಿ ಭದ್ರತೆಯೊಂದಿಗೆ ಕಾಂಗ್ರೆಸ್ ನಾಯಕ ಭಾರತ್ ಜೋಡೊ ಯಾತ್ರೆಯನ್ನು ಜಮ್ಮು-ಕಾಶ್ಮೀರದ ಕತುವಾ ಜಿಲ್ಲೆಯ ಹಿರನ್ ನಗರದಿಂದ ಪುನಾರಂಭ ಮಾಡಿದ್ದಾರೆ.
ಜ.21 ರಂದು ಜಮ್ಮುವಿನಲ್ಲಿ ಅವಳಿ ಸ್ಛೋಟ ನಡೆದಿತ್ತು. ಒಂದು ದಿನದ ವಿರಾಮದ ನಂತರ ಭಾರತ್ ಜೋಡೊ ಯಾತ್ರೆ ಭಾನುವಾರ ಬೆಳಿಗ್ಗೆ 7 ಗಂಟೆಗೆ ಅಂತಾರಾಷ್ಟ್ರೀಯ ಗಡಿಯ ಬಳಿ ಇರುವ ಜಮ್ಮು-ಪಠಾಣ್ ಕೋಟ್ ಹೆದ್ದಾರಿಯಾದ್ಯಂತ ಇರುವ ಹಿರನ್ ನಗರ ಆರಂಭವಾಯಿತು.
ರಾಹುಲ್ ಗಾಂಧಿಗೆ ಜಮ್ಮು-ಕಾಶ್ಮೀರದ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ವಿಕಾರ್ ರಸೂಲ್ ವನಿ, ಕಾರ್ಯಾಧ್ಯಕ್ಷ ರಮಣ್ ಭಲ್ಲಾ ಹಾಗೂ ಇನ್ನಿತರ ಸ್ವಯಂ ಸೇವಕರು ಭಾಗವಹಿಸಿದ್ದರು. ರಾಹುಲ್ ಗಾಂಧಿ ಅವರ ಭಾರತ್ ಜೊಡೋ ಯಾತ್ರೆ ಬೆಳಿಗ್ಗೆ 8 ರ ವೇಳೆಗೆ ಲೋಂದಿ ಚೆಕ್ ಪಾಯಿಂಟ್ ಗೆ ತಲುಪಿ ಸಾಂಬ ಜಿಲ್ಲೆಯ ತಪ್ಯಾಲ್-ಗಗ್ವಾಲ್ಗೆ ಪ್ರವೇಶಿಸಿತು.
ಭಾನುವಾರ ಸುಮಾರು 25 ಕಿ.ಮೀ ಕಾಲ್ನಡಿಗೆಯಲ್ಲಿ ಕ್ರಮಿಸಿದ ಬಳಿಕ, ಯಾತ್ರೆ ಚಕ್ ನಾನಕ್ನಲ್ಲಿ ರಾತ್ರಿ ವಿರಾಮ ಪಡೆಯಿತು. ಸೋಮವಾರ ಸಾಂಬದ ವಿಜಯಪುರದಿಂದ ಜಮ್ಮುವಿನತ್ತ ಸಾಗಲಿದೆ.
ರಾಹುಲ್ ಗಾಂಧಿಗೆ ಭದ್ರತೆ ಒದಗಿಸಲು ವ್ಯವಸ್ಥೆ ಮಾಡಲಾಗಿದೆ ಇದಕ್ಕಾಗಿ ಪೊಲೀಸ್, ಸಿಆರ್ಪಿಎಫ್ ಹಾಗೂ ಇತರ ಭದ್ರತಾ ಏಜೆನ್ಸಿಗಳನ್ನು ನಿಯೋಜಿಸಲಾಗಿದ್ದು, ಭಾರತ್ ಜೋಡೊ ಯಾತ್ರೆ ಸುಗಮವಾಗಿ ಸಾಗುವುದನ್ನು ಭದ್ರತಾ ಸಿಬ್ಬಂದಿಗಳು ಖಚಿತಪಡಿಸಿಕೊಳ್ಳಲಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜನವರಿ 30 ರಂದು ಶ್ರೀನಗರದಲ್ಲಿ ಭಾರತ್ ಜೋಡೊ ಯಾತ್ರೆ ಪೂರ್ಣಗೊಳ್ಳಲಿದ್ದು, ಅಲ್ಲಿನ ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ರಾಷ್ಟ್ರಧ್ವಜಾರೋಹಣದ ಮೂಲಕ ಯಾತ್ರೆ ಸಮಅರೋಪ ನಡೆಯಲಿದೆ.