ಜಮ್ಮು : ಜಮ್ಮುಇನಲ್ಲಿರುವ ಸುದ್ರಾ ಪ್ರದೇಶದಲ್ಲಿ ಒಂದೇ ಕುಟುಂಬಕ್ಕೆ ಸೇರಿದ 6 ಜನರು ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ನಡೆದಿದೆ.
ಇದು ಆಕಸ್ಮಿಕವಾಗಿ ಸಂಭವಿಸಿರುವ ಘಟನೆಯೇ ಅಥವಾ ಕೊಲೆಯಾಗಿದಿಯೇ ಎಂಬುದು ತನಿಖೆಯ ನಂತರವಷ್ಟೇ ತಿಳಿಯಬೇಕಾಗಿದೆ. ಪಲೋಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.