ನವದೆಹಲಿ: ಇಂದು ಅಂತಾರಾಷ್ಟ್ರೀಯ ಯೋಗ ದಿನ ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಯೋಗ ಸಮಾವೇಶಗಳು ನಡೆಯುತ್ತಿದ್ದು, ವಿಶ್ವದ ಹಲವು ದೇಶಗಳಲ್ಲೂ ಯೋಗ ದಿನಾಚರಣೆಯನ್ನು ಯೋಗ ಮಾಡುವ ಮೂಲಕ ಜನ ಆಚರಣೆ ಮಾಡುತ್ತಿದ್ದಾರೆ. ಹಾಗೆಯೇ ದೇಶದ ರಕ್ಷಣಾ ಪಡೆಯ ಸಿಬ್ಬಂದಿ ಕೂಡ ತಾವು ಇರುವ ಸ್ಥಳದಿಂದಲೇ ಯೋಗ ಮಾಡುವ ಮೂಲಕ ಯೋಗ ದಿನಾಚರಣೆಯಲ್ಲಿ ಭಾಗಿಯಾಗುತ್ತಿದ್ದಾರೆ.
ಇಂಡೋ ಬಾರ್ಡರ್ ಸೆಕ್ಯೂರಿಟಿ ಪೋರ್ಸ್ನ ಯೋಧರು ಲಡಾಕ್, ಹಿಮಾಚಲ ಪ್ರದೇಶ, ಅರುಣಾಚಲ ಪ್ರದೇಶ, ಉತ್ತರಾಖಂಡ್, ಹಿಮಾಚಲ ಪ್ರದೇಶ, ಸಿಕ್ಕಿಂ ಮುಂತಾದ ಪ್ರದೇಶಗಳಲ್ಲಿ ಯೋಗ ಮಾಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
8ನೇ ಅಂತಾರಾಷ್ಟ್ರೀಯ ಯೋಗದಿನದ ಅಂಗವಾಗಿ ಐಟಿಬಿಪಿ ಯೋಧರು ಹಾಡೊಂದನ್ನು ಸಮರ್ಪಣೆ ಮಾಡಿದ್ದಾರೆ. ಹಾಗೆಯೇ ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸ್ ಪಡೆಯ ಸಿಬ್ಬಂದಿ ಉತ್ತರಾಖಂಡ್ನಲ್ಲಿ 14,500 ಅಡಿ ಎತ್ತರದಲ್ಲಿ ಯೋಗ ಮಾಡುತ್ತಿರುವ ವಿಡಿಯೋವನ್ನು ಐಟಿಬಿಪಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದೆ. ಹಾಗೆಯೇ ಹಿಮಾಚಲ ಪ್ರದೇಶದಲ್ಲಿಯೂ ಕೂಡ ಐಟಿಬಿಪಿ ಸಿಬ್ಬಂದಿ 16,500 ಅಡಿ ಎತ್ತರದಲ್ಲಿ ಯೋಗ ಮಾಡಿದರು.
ಸುಮಾರು 6 ಸಾವಿರ ವರ್ಷಗಳ ಇತಿಹಾಸವಿರುವ ಯೋಗ ಆರೋಗ್ಯಕರ ದೇಹದೊಳಗೆ ಆರೋಗ್ಯಕರ ಮನಸ್ಸನ್ನು ಬೆಳೆಸುವ ಒಂದು ಪ್ರಕ್ರಿಯೆಯಾಗಿದೆ. ಇದು ಮಾನವನ ದೇಹದ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಸ್ಥಿತಿಯನ್ನು ಉನ್ನತ ಹಂತಕ್ಕೆ ಕೊಂಡೊಯ್ಯುತ್ತದೆ. ಯೋಗವು ದೇಹ ಮತ್ತು ಮನಸ್ಸಿಗೆ ಪುನರ್ ಯೌವನ ನೀಡುತ್ತದೆ. ಯೋಗದ ಕಲಿಕೆ ವೈಚಾರಿಕತೆ, ಭಾವನಾತ್ಮಕತೆ ಮತ್ತು ಸೃಜನಶೀಲತೆಯನ್ನು ಹೆಚ್ಚು ಮಾಡುತ್ತದೆ. ಹಾಗಾಗಿ ಯೋಗವನ್ನು ಜೀವನದ ಅವಿಭಾಜ್ಯ ಅಂಗವಾಗಿ ರೂಪಿಸಿಕೊಳ್ಳುವುದರಿಂದ ಸಾಕಷ್ಟು ಲಾಭ ಪಡೆದುಕೊಳ್ಳಬಹುದಾಗಿದೆ.
ಯೋಗದ ವ್ಯಾಪ್ತಿ ವಿಶಾಲವಾದದ್ದು. ಕೇವಲ ಆಸನಗಳು ಅಥವಾ ಪ್ರಾಣಾಯಾಮಗಳಷ್ಟೇ ಯೋಗವಲ್ಲ. ಯೋಗ ಎಂಬುದು ಅಷ್ಟಾಂಗಗಳನ್ನು ಒಳಗೊಂಡಿದೆ. ಇದು ಭಾರತದ ಪ್ರಾಚೀನ ಭಾರತದ ಋುಷಿಗಳು ಪ್ರಪಂಚಕ್ಕೆ ನೀಡಿದ ಜ್ಞಾನ. ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಮತ್ತು ಸಮಾಧಿ ಇವುಗಳು ಅಷ್ಟಾಂಗ ಯೋಗಗಳು.
ITBP Jawans dedicate a song on 8th #InternationalDayofYoga-2022. The ITBP personnel have been exemplary in promoting #Yoga by demonstrating various yogasanas at different high altitude Himalayan ranges in Ladakh, HP, Uttarakhand, Sikkim & Arunachal Pradesh over the years. pic.twitter.com/y0FH80f9wO
— ITBP (@ITBP_official) June 21, 2022
#Himveers of Indo-Tibetan Border police (ITBP) practicing Yoga at 14,500 feet in Uttarakhand on #InternationalDayofYoga pic.twitter.com/Z32R8huEFr
— ITBP (@ITBP_official) June 21, 2022