ಇಸ್ಲಾಮಿಕ್ ಸ್ಟೇಟ್ ಮುಖ್ಯಸ್ಥ ಅಬು ಹಸನ್ ಅಲ್- ಹಶ್ಮಿ ಅಲ್- ಖುರೇಷಿ ಮೃತಪಟ್ಟಿದ್ದಾನೆ ಎಂದು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಈ ಕುರಿತು ಅಧಿಕೃತವಾಗಿ ಘೋಷಣೆ ಮಾಡಿರುವ ಇಸ್ಲಾಮಿಕ್ ಸ್ಟೇಟ್ಸ್ ಅಥವಾ IS ಯುದ್ಧಭೂಮಿಯಲ್ಲಿ ತನ್ನ ನಾಯಕ ಮೃತಪಟ್ಟಿರುವುದಾಗಿ ತಿಳಿಸಿದೆ.
“ದೇವರ ಶತ್ರುಗಳೊಂದಿಗಿನ ಯುದ್ಧದಲ್ಲಿ ಇಸ್ಲಾಮಿಕ್ ಸ್ಟೇಟ್ ಮುಖ್ಯಸ್ಥ ಅಬು ಹಸನ್ ಅಲ್- ಹಶ್ಮಿ ಅಲ್- ಖುರೇಷಿ ಸಾವನ್ನಪ್ಪಿದ್ದಾಗಿ ತಿಳಿಸಲಾಗಿದೆ. ಆದರೆ ಅಬು ಹಸನ್ ಅಲ್- ಹಶ್ಮಿ ಅಲ್- ಖುರೇಷಿ ಸಾವಿನ ದಿನಾಂಕ ಅಥವಾ ಸಂದರ್ಭಗಳನ್ನು ವಿವರಿಸಲಾಗಿಲ್ಲ. ಆಡಿಯೋ ಸಂದೇಶದಲ್ಲಿ ಮಾತನಾಡಿದ ಇಸ್ಲಾಮಿಕ್ ಸ್ಟೇಟ್ ವಕ್ತಾರ ಗುಂಪಿನ ಹೊಸ ನಾಯಕನನ್ನು ಅಬು ಅಲ್-ಹುಸೇನ್ ಅಲ್-ಹುಸೇನಿ ಅಲ್-ಖುರಾಶಿ ಎಂದು ಗುರುತಿಸಿದ್ದಾರೆ.
ಐಸಿಸ್ನ ಹಿಂದಿನ ನಾಯಕ ಅಬು ಇಬ್ರಾಹಿಂ ಅಲ್-ಖುರಾಶಿ ಈ ವರ್ಷದ ಆರಂಭದಲ್ಲಿ ಉತ್ತರ ಸಿರಿಯಾದ ಇಡ್ಲಿಬ್ ಪ್ರಾಂತ್ಯದಲ್ಲಿ ಯುಎಸ್ ದಾಳಿಯಲ್ಲಿ ಕೊಲ್ಲಲ್ಪಟ್ಟಿದ್ದ.