ವಾಷಿಂಗ್ಟನ್: ಭಾರತದ ಜೊತೆಗಿನ ತಮ್ಮ ಸಂಬಂಧದ ವಿಷುಂವಾಗಿ ಮೂಗು ತೂರಿಸಬೇಡಿ ಎಂದು ಚೀನಾ, ಅಮೆರಿಕಕ್ಕೆ ಎಚ್ಚರಿಸಿದೆ ಎಂದು ಪೆಂಟಗನ್ ಅಮೆರಿಕ ಕಾಂಗ್ರೆಸ್ಗೆ ಸಲ್ಲಿಸಿರುವ ವರದಿಯಲ್ಲಿ ತಿಳಿಸಿದೆ.
ಅಮೆರಿಕ ಜೊತೆ ಭಾರತ ಹೆಚ್ಚು ಆಪ್ತತೆ ಬೆಳೆಸಿಕೊಳ್ಳುವುದನ್ನು ತಪ್ಪಿಸಲು ಗಡಿ ಸಮಸ್ಯೆ ಉದ್ಭವವಾಗದಂತೆ ನೋಡಿಕೊಳ್ಳುವತ್ತ ಚೀನಾ ಗಮನ ಹರಿಸುತ್ತಿದೆ. ಪಿಆರ್ಸಿ (ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ) ಸಂಘರ್ಷದ ಗಂಭೀರತೆಯನ್ನು ತಗ್ಗಿಸಲು ಪ್ರಯತ್ನಿಸಿತು. ೨೦೨೧ರಲ್ಲಿ ಚೀನಾ-ಭಾರತದ ಗಡಿಯ ಉದ್ದಕ್ಕೂ ಪಿಎಲ್ಎ ಪಡೆಗಳ ನಿಯೋಜನೆ ಇತ್ತು. ಎಲ್ಎಸಿ ಉದ್ದಕ್ಕೂ ಮೂಲಸೌಕರ್ಯಗಳನ್ನು ನಿರ್ಮಿಸುವ ಕಾರ್ಯ ಮುಂದುವರೆಸಿದೆ.