ಹೊಸದಿಲ್ಲಿ: ದೇಶದ ಹಲವೆಡೆ ಕೋವಿಡ್ ಸೋಂಕು ಮತ್ತೆ ದಿಢೀರ್ ಹೆಚ್ಚಳದ ಹಿನ್ನೆಲೆಯಲ್ಲಿ, ವೈರಲ್ ಸೋಂಕುಗಳ ಪ್ರಕರಣಗಳ ಮೇಲೆ ಕಟ್ಟೆಚ್ಚರ ವಹಿಸುವಂತೆ ಕರ್ನಾಟಕ ಸೇರಿ ಆರು ರಾಜ್ಯಗಳಿಗೆ ಕೇಂದ್ರ ಸರಕಾರ ಸೂಚಿಸಿದೆ. ಫ್ಲೂ ಸಂಬಂಧಿ ಪ್ರಕರಣಗಳಲ್ಲಿ ಏರಿಕೆಯ ಭೀತಿ ಎದುರಾಗಿರುವ ನಡುವೆಯೇ, ಕೆಲವು ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳಲ್ಲಿ ಕೂಡ ಹೆಚ್ಚಳದ ಆತಂಕ ಶುರುವಾಗಿದೆ. ಈ ಸಂಬಂಧ ಕರ್ನಾಟಕ ಸೇರಿದಂತೆ ಆರು ರಾಜ್ಯಗಳಿಗೆ ಕೇಂದ್ರ ಪತ್ರ ಬರೆದಿದೆ. ಕೋವಿಡ್ ಪರೀಕ್ಷೆ, ಚಿಕಿತ್ಸೆ, ಲಸಿಕಾಕರಣ ಹೆಚ್ಚಿಸುವಂತೆ ಕೇರಳ, ತಮಿಳುನಾಡು, ಮಹಾರಾಷ್ಟ್ರ, ಗುಜರಾತ್, ತೆಲಂಗಾಣ ಮತ್ತು ಕರ್ನಾಟಕ ಸರಕಾರಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ಸೂಚಿಸಿದೆ. ಇದು ಕಳವಳಕಾರಿ ವಿಷಯವಾಗಿದ್ದು, ಆದ್ಯತೆಯ ಮೇರೆಗೆ ಕ್ರಮ ಕೈಗೊಳ್ಳಬೇಕೆಂದು ಸೂಚಿಸಲಾಗಿದೆ.”ಭಾರತದಲ್ಲಿ ನಾಲ್ಕು ತಿಂಗಳ ಬಳಿಕ ಕೋವಿಡ್ ದೈನಂದಿನ ಸೋಂಕಿನ ಪ್ರಮಾಣ 700 ದಾಟಿದೆ. ಕೆಲವು ರಾಜ್ಯಗಳಲ್ಲಿ ಹೆಚ್ಚಿನ ಪ್ರಕರಣಗಳು ಕಂಡು ಬರುತ್ತಿವೆ. ಅಲ್ಲಿ ಸ್ಥಳೀಯವಾಗಿ ಸೋಂಕು ಹರಡುವಿಕೆಯ ಮೇಲೆ ನಿಗಾ ಇಡಬೇಕಿದೆ. ಆ ಮೂಲಕ ಇದುವರೆಗೂ ಸೋಂಕು ತಡೆಗೆ ನಡೆಸಿದ ಪ್ರಯತ್ನಗಳು ವಿಫಲವಾಗದಂತೆ ರಾಜ್ಯ ಸರಕಾರಗಳು ನೋಡಿಕೊಳ್ಳಬೇಕಿದೆ,” ಎಂದು ರಾಜ್ಯ ಸರಕಾರಗಳಿಗೆ ಬರೆದ ಪತ್ರದಲ್ಲಿ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ತಿಳಿಸಿದ್ದಾರೆ.ಬೇಸಿಗೆಯ ಬೇಗೆಯ ಬೆನ್ನಲ್ಲೇ ಹೆಚ್ಚುತ್ತಿರುವ ವೈರಲ್ ಜ್ವರ ಮತ್ತು ಶ್ವಾಸಕೋಶ ಸೋಂಕಿನ ಮೇಲೂ ನಿಗಾ ಇಡುವಂತೆ ರಾಜ್ಯಗಳಿಗೆ ಸೂಚನೆ ನೀಡಲಾಗಿದೆ.
- ಮುಖಪುಟ
- ಮೈಸೂರು
- ಜಿಲ್ಲೆಗಳು
- ರಾಜ್ಯ
- ದೇಶ- ವಿದೇಶ
- ರಾಜಕೀಯ
- ಅಪರಾಧ
- ಮಹಿಳೆ
- ಕೃಷಿ
- ವಿಜ್ಞಾನ ತಂತ್ರಜ್ಞಾನ
- ಕ್ರೀಡೆ
- ವಾಣಿಜ್ಯ
- ಚಿತ್ರಸಂತೆ
- ವಿಶೇಷ
- ಆಂದೋಲನ ಪುರವಣಿ
- ಎಡಿಟೋರಿಯಲ್
- ಆಂದೋಲನ 50
- ಜಾಹೀರಾತು
- Cricket
Subscribe to Updates
Get the latest creative news from FooBar about art, design and business.