ಅಹಮದಾಬಾದ್ : 2024ನೇ ಶೈಕ್ಷಣಿಕ ವರ್ಷದಿಂದ 6 ರಿಂದ 8 ನೇ ತರಗತಿಗಳ ಪಠ್ಯಕ್ರಮಕ್ಕೆ ಸೇರಿಸಲು ‘ಭಗವದ್ಗೀತೆ’ ಕುರಿತು ನೂತನ ಪಠ್ಯಪುಸ್ತಕವೊಂದನ್ನು ಗುಜರಾತ್ ಸರ್ಕಾರ ಶುಕ್ರವಾರ ಬಿಡುಗಡೆ ಮಾಡಿದೆ.
ಈಗಿರುವ ಶಾಲಾ ಪಠ್ಯ ಪುಸ್ತಕಗಳನ್ನು ಹೊರತುಪಡಿಸಿ 6 ರಿಂದ 8ನೇ ತರಗತಿ ಮಕ್ಕಳು ಇನ್ನು ಭಗವದ್ಗೀತೆಯ ಸಾರಾಂಶವನ್ನೊಳಗೊಂಡ ಮೊದಲ ಭಗವದ್ಗೀತೆ ಪಠ್ಯಪುಸ್ತಕವನ್ನು ಹೆಚ್ಚುವರಿ ಅಧ್ಯಯನ ಮಾಡಲಿದ್ದಾರೆ.
ಕುರುಕ್ಷೇತ್ರದ ಯುದ್ಧ ಭೂಮಿಯಲ್ಲಿ ಅರ್ಜುನ ಮತ್ತು ಭಗವಾನ್ ಕೃಷ್ಣನ ನಡುವೆ ಭಗವದ್ಗೀತೆ ಸಂಭಾಷಣೆ ನಡೆದ ದಿನವೆಂದು ಗುರುತಿಸಲಾಗುವ ‘ಗೀತಾ ಜಯಂತಿ’ಯಂದೇ ಪಠ್ಯವನ್ನು ಬಿಡುಗಡೆ ಮಾಡಲಾಗಿದೆ. ಬಳಿಕ ಸುದ್ದಿಗಾರರ ಜತೆ ಮಾತನಾಡಿದ ರಾಜ್ಯ ಶಿಕ್ಷಣ ಸಚಿವ ಪ್ರಫುಲ್ ಕನ್ಶೇರಿಯಾ ‘ರಾಷ್ಟ್ರೀಯ ಶಿಕ್ಷಣ ನೀತಿ – 2020 (ಎನ್‌ಇಪಿ) ಚೌಕಟ್ಟಿನಡಿ ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದರು.
ಇನ್ನು 9 ರಿಂದ 12ನೇ ತರಗತಿಗೆ ಭಗವದ್ಗೀತೆಯ ಮುಂದುವರಿದ ಭಾಗ ಅಥವಾ ‘ಭಗವದ್ಗೀತೆ’ಯ 2ನೇ ಭಾಗವನ್ನು ಮುಂದಿನ ದಿನಗಳಲ್ಲಿ ಅಳವಡಿಸಲಾಗುತ್ತದೆ ಎಂದು ಸರ್ಕಾರ ಹೇಳಿದೆ.
ಬೆಂಗಳೂರು: ಹಳೆಯ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಕಡ್ಡಾಯವಾಗಿ ಅಳವಡಿಸಬೇಕು ಎಂಬ ನಿಯಮದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸಾರಿಗೆ ಇಲಾಖೆ ಸ್ಪಷ್ಟನೆ…
ದಾವಣಗೆರೆ: ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇರುವ ಏಕೈಕ ಬಂಡವಾಳ ಎಂದರೆ ಐದು ಗ್ಯಾರಂಟಿಗಳು ಮಾತ್ರ. ಅವುಗಳನ್ನು ಕೂಡ ಮನಸ್ಸು ಇಚ್ಛೆ,…
ದಾವಣಗೆರೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಮತ್ತು ಕುರ್ಚಿ ಉಳಿಸಿಕೊಳ್ಳಲು ತಮ್ಮನ್ನು ಬೆಳೆಸಿದ್ದ ಅಹಿಂದ ವರ್ಗವನ್ನೇ ಹತ್ತಿಕ್ಕಲು…
ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಸಂಜೆಯ ವೇಳೆಗೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಭಾರೀ…
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂದು ಹಸಿರು ಕ್ರಾಂತಿ ಹರಿಕಾರ ಬಾಬು ಜಗಜೀವನ್ ರಾಮ್ ಅವರ 119ನೇ ಜಯಂತಿಯನ್ನು ಆಚರಣೆ…
ಬೆಂಗಳೂರು: ಅತಿ ಹೆಚ್ಚು ಅಭಿಮಾನಿ ಬಳಗ ಹೊಂದಿರುವ ಐಪಿಎಲ್‌ನ 2 ತಂಡಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್…