ಹೈದರಾಬಾದ್: ಚಿಕ್ಕ ವಯಸ್ಸಿನಲ್ಲಿ ನನ್ನ ತಂದೆಯಿಂದಲೆ ಲೈಂಗಿಕ ಕಿರುಕುಳಕ್ಕೆ ಗುರಿಯಾಗಿದ್ದೇ ಎಂಬ ನನ್ನ ಹೇಳಿಕೆ ಬಗ್ಗೆ ನನಗೆ ಯಾವುದೇ ನಾಚಿಕೆಯಾಗಿಲ್ಲ ಎಂದು ಬಿಜೆಪಿ ನಾಯಕಿ ಹಾಗೂ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬು ಸುಂದರ್ ಹೇಳಿದ್ದಾರೆ.
ನಾನು ಆಶ್ಚರ್ಯಕರವಾದ ಹೇಳಿಕೆಯನ್ನು ನೀಡಿಲ್ಲ, ಆ ಹೇಳಿಕೆ ನನ್ನಿಂದ ಹೊರಬಂದ ಪ್ರಾಮಾಣಿಕತೆ ಎಂದು ನಾನು ಭಾವಿಸುತ್ತೇನೆ. ನಾನು ಹೇಳಿದ್ದಕ್ಕೆ ನಾಚಿಕೆಪಡುವುದಿಲ್ಲ ಏಕೆಂದರೆ ಇದು ನನಗೆ ಸಂಭವಿಸಿದೆ ಮತ್ತು ಅಪರಾಯು ತನ್ನ ಬಳಿ ಇರುವುದಕ್ಕೆ ನಾಚಿಕೆಪಡಬೇಕು ಎಂದು ನಾನು ಭಾವಿಸುತ್ತೇನೆ ಎಂದು ಅವರು ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.
ಹಿಂದಿ ಕನ್ನಡ, ತಮಿಳು, ತೆಲುಗು ಸೇರಿದಂತೆ ದೇಶದ ಹಲವಾರು ಭಾಷೆಗಳ ಚಲನಚಿತ್ರಗಳಲ್ಲಿ ನಟಿಸಿ ಮನೆ ಮಾತಾಗಿದ್ದ ಖುಷ್ಬು ಅವರು ತಮಿಳುನಾಡಿನಲ್ಲಿ ಹೆಸರಾಂತ ನಟಿಯಾಗಿ ಗುರುತಿಸಿಕೊಂಡಿದ್ದು ತಮಿಳು ಮೂಲದ ವ್ಯಕ್ತಿ ಸುಂದರ್ ಅವರನ್ನು ವಿವಾಹವಾಗಿ ಚೆನ್ನೈನಲ್ಲೇ ನೆಲೆಸಿದ್ದಾರೆ.
ನಂತರ ಅವರು 2010 ರಲ್ಲಿ ಡಿಎಂಕೆ ಪಕ್ಷ ಸೇರಿ ಪಕ್ಷದಲ್ಲಿ 4 ವರ್ಷಗಳ ಸೇವೆ ಸಲ್ಲಿಸಿದ ನಂತರ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಗೆ ಸೇರ್ಪಡೆಗೊಂಡು ಆರು ವರ್ಷಗಳ ಕಾಲ ಅಲ್ಲಿದ್ದು, ಇದೀಗ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
2021ರ ಚುನಾವಣೆಯಲ್ಲಿ ಬಿಜೆಪಿಯಿಂದ, ಡಿಎಂಕೆ ಅಭ್ಯರ್ಥಿ ವಿರುದ್ಧ ಪರಾಭವಗೊಂಡಿದ್ದ ಖುಷ್ಬು ಅವರನ್ನು ಬಿಜೆಪಿ ಪಕ್ಷ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರನ್ನಾಗಿ ನೇಮಕ ಮಾಡಿತ್ತು.
ಮಹಿಳಾ ಆಯೋಗದ ಸದಸ್ಯೆಯಾದ ನಂತರ ತಮ್ಮ ಎಂಟನೆ ವಯಸ್ಸಿನಲ್ಲಿ ತಂದೆ ನಡೆಸಿದ್ದ ಲೈಂಗಿಕ ಕಿರುಕುಳದ ಬಗ್ಗೆ ಬಾಯ್ಬಿಟ್ಟಿದ್ದರು. ಅವರ ಹೇಳಿಕೆಗೆ ಪರ, ವಿರೋಧ ವ್ಯಕ್ತವಾಗಿದ್ದ ಹಿನ್ನಲೆಯಲ್ಲಿ ಅವರು ನನ್ನ ಹೇಳಿಕೆಯಿಂದ ನನಗೆ ಯಾವುದೇ ಮುಜುಗರವಿಲ್ಲ ಎಂದಿದ್ದಾರೆ.
- ಮುಖಪುಟ
- ಮೈಸೂರು
- ಜಿಲ್ಲೆಗಳು
- ರಾಜ್ಯ
- ದೇಶ- ವಿದೇಶ
- ರಾಜಕೀಯ
- ಅಪರಾಧ
- ಮಹಿಳೆ
- ಕೃಷಿ
- ವಿಜ್ಞಾನ ತಂತ್ರಜ್ಞಾನ
- ಕ್ರೀಡೆ
- ವಾಣಿಜ್ಯ
- ಚಿತ್ರಸಂತೆ
- ವಿಶೇಷ
- ಆಂದೋಲನ ಪುರವಣಿ
- ಎಡಿಟೋರಿಯಲ್
- ಆಂದೋಲನ 50
- ಜಾಹೀರಾತು
- Cricket
Subscribe to Updates
Get the latest creative news from FooBar about art, design and business.
Previous Articleಮುಂಬೈ ಕರಾವಳಿಯಲ್ಲಿ ನೀರಿನ ಮೇಲೆ ಇಳಿದ ಎಎಲ್ಎಚ್ ‘ಧ್ರುವ್’: ಮೂವರ ರಕ್ಷಣೆ