ಮರಿಯಾನೆ ರಕ್ಷಣೆಗೆ ಮೂರಾನೆಗಳ ಬೆಂಗಾವಲು!
ತಮಿಳುನಾಡು : ಪುಟ್ಟ ನವಜಾತ ಮಕ್ಕಳ ರಕ್ಷಣೆಯ ವಿಚಾರದಲ್ಲಿ ತಾಯಿ ಹಾಗೂ ಕುಟುಂಬ ಮಾಡುವ ಕಾಳಜಿ ತುಂಬಾ ಜಾಗರೂಕವಾಗಿರುತ್ತದೆ. ಮಗುವಿನ ಸುರಕ್ಷತೆಗೆ ಕುಟುಂಬ ಮೊದಲ ಆದ್ಯತೆ ನೀಡುತ್ತದೆ. ಆದರೆ ಬುದ್ಧಿವಂತ ಪ್ರಾಣಿ ಎನಿಸಿಕೊಂಡಿರುವ ಮನುಷ್ಯ ಇದನ್ನು ಮಾಡುವುದು ದೊಡ್ಡ ವಿಚಾರವಲ್ಲ. ಆದರೆ ಪ್ರಾಣಿಗಳು ಕೂಡ ಇದೇ ರೀತಿ ತಮ್ಮ ಹಸುಗೂಸುಗಳಿಗೆ ರಕ್ಷಣೆ ನೀಡುತ್ತವೆ ಎಂಬುದು ಅಷ್ಟೇ ಸತ್ಯ. ಇದನ್ನು ಪುಷ್ಠಿಕರಿಸುತ್ತಿದೆ ಆನೆಗಳ ಗುಂಪಿನ ಇತ್ತೀಚಿನ ವಿಡಿಯೋ.
ಆನೆಗಳು ಕೂಡ ಹೇಳಿ ಕೇಳಿ ಮನುಷ್ಯರಷ್ಟೇ ಬುದ್ಧಿವಂತ ಪ್ರಾಣಿಗಳು. ಹಿಂಡು ಹಿಂಡುಗಳಾಗಿ ಕುಟುಂಬ ಜೀವನವನ್ನು ಆನೆಗಳು ಮಾಡುತ್ತವೆ. ಇವುಗಳು ತಮ್ಮ ನವಜಾತ ಕಂದನ ಸುರಕ್ಷತೆಗೆ ಕೈಗೊಳ್ಳುವ ಕ್ರಮಗಳು ಮಾತ್ರ ನೋಡುಗರನ್ನು ಹುಬ್ಬೇರುವಂತೆ ಮಾಡುತ್ತಿದೆ.
No body on earth can provide better security than an elephant herd to the cute new born baby. It’s Z+++.
Said to be from Sathyamangalam Coimbatore road. pic.twitter.com/iLuhIsHNXp— Susanta Nanda IFS (@susantananda3) June 22, 2022
ವಿಡಿಯೋದಲ್ಲಿ ಕಾಣಿಸುವಂತೆ ಆನೆಗಳ ಹಿಂಡೊಂದು ಕಾಡಿನ ಮಧ್ಯದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿವೆ. ಈ ವೇಳೆ ಈ ಹಿಂಡಿನಲ್ಲಿ ಪುಟ್ಟದೊಂದು ಮರಿಯೂ ಇದ್ದು, ಇದನ್ನು ಯಾರಿಗೂ ಕಾಣದಂತೆ ಗಜಪಡೆ ಮಧ್ಯದಲ್ಲಿ ಇರಿಸಿಕೊಂಡು ಕರೆದುಕೊಂಡು ಹೋಗುತ್ತಿವೆ. ಹಿಂದೆ ಮುಂದೆ ಸುತ್ತಮುತ್ತ ದೊಡ್ಡ ದೊಡ್ಡ ಆನೆಗಳು ಸಾಗುತ್ತಿದ್ದರೆ ಇವುಗಳ ಮಧ್ಯೆ ಹಿಂಡಿನಲ್ಲಿ ಪುಟ್ಟ ಮರಿಯಾನೆ ಸಾಗುತ್ತಿದೆ.
ಇದರ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಶಾಂತ್ ನಂದಾ ಅವರು ಸಾಮಾಜಿಕ ಜಾಲತಾಣ ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದ್ದು, ಅದು ವೈರಲ್ ಆಗಿದೆ. ಜಗತ್ತಿನಲ್ಲಿ ಯಾರೂ ಕೂಡ ಆನೆ ಹಿಂಡಿನಂತೆ ತನ್ನ ಕಂದನಿಗೆ ಈ ರೀತಿಯ ಭದ್ರತೆ ನೀಡಲು ಸಾಧ್ಯವಿಲ್ಲ. ಇದು ಕೇವಲ ಝೆಡ್ ಪ್ಲಸ್ ಭದ್ರತೆ ಅಲ್ಲ. ಇದು ತಮಿಳುನಾಡಿನ ಕೊಯಂಬತ್ತೂರು ಜಿಲ್ಲೆಯಲ್ಲಿರುವ ಸತ್ಯಮಂಗಲ ಅರಣ್ಯದಲ್ಲಿ ಕಂಡು ಬರುವ ದೃಶ್ಯ ಎಂದು ಅವರು ಬರೆದುಕೊಂಡಿದ್ದಾರೆ.
ಆನೆ ಹಿಂಡು ಮರಿಯನ್ನು ರಕ್ಷಿಸುತ್ತಿರುವುದನ್ನು ಜನರು ಮೆಚ್ಚಿಕೊಂಡಿದ್ದಾರೆ. ಬಳಕೆದಾರರೊಬ್ಬರು, ತುಂಬಾ ಸುಂದರವಾಗಿದೆ. ಆನೆಗಳು ಎಷ್ಟು ಬಲವಾದ ಬಂಧವನ್ನು ಹೊಂದಿವೆ ಎಂದರೆ ಹಿಂಡಿನಲ್ಲಿರುವ ಪ್ರತಿಯೊಂದು ಹೆಣ್ಣು ಆನೆಯು ಎಲ್ಲಾ ಮರಿಗಳಿಗೆ ತಾಯಿಯಾಗಿದೆ. ಅವರು ತಮ್ಮ ಮರಿಗಳಿಗೆ ತುಂಬಾ ರಕ್ಷಣೆ ನೀಡುತ್ತಾರೆ ಮತ್ತು ಈ ವೀಡಿಯೊ ಎಲ್ಲವನ್ನೂ ಹೇಳುತ್ತದೆ. ದೇವರು ಅವರನ್ನು ಆಶೀರ್ವದಿಸಲಿ ಎಂದು ಕಾಮೆಂಟ್ ಮಾಡಿದ್ದಾರೆ.