ಮಥುರಾ: ಶ್ರೀಕೃಷ್ಣನ ಜನ್ಮ ಸ್ಥಳವೆಂದು ಹಿಂದೂಗಳು ನಂಬುವ ಮಥುರಾದ ಶಾಹಿ ಈದ್ಗಾ ಮಸೀದಿಯನ್ನು ತೆಗೆದು ಮಂದಿರ ನಿರ್ಮಾಣ ಮಾಡಬೇಕೆಂಬ ಬೇಡಿಕೆಯೂ ಶಾಂತಿಯುತ ಮಥುರಾ ನಗರದಲ್ಲಿ ಕೋಮು ಉದ್ವಿಗ್ನತೆಯನ್ನು ಉಂಟು ಮಾಡಿದೆ. ಈ ವಿಚಾರ ದೇಗುಲ ನಗರಿಯ ಹಿಂದೂಗಳು ಮತ್ತು ಮುಸ್ಲಿಮರ ಹೃದಯದಲ್ಲಿ ಗುಪ್ತವಾಗಿ ವಿಭಜನೆಯನ್ನು ಸೃಷ್ಟಿಸಿದೆ.
ನಗರದಲ್ಲಿ ಸುಮಾರು ಅರ್ಧ ಶತಮಾನದಿಂದ ರೆಸ್ಟೋರೆಂಟ್ ನಡೆಸುತ್ತಿರುವ ಇಸ್ಲಾಂ ಸಮುದಾಯಕ್ಕೆ ಸೇರಿದ ಸ್ಥಳೀಯ ಹೋಟೆಲ್ ಉದ್ಯಮಿಯೊಬ್ಬರು ಈ ಬಗ್ಗೆ ಮಾತನಾಡಿದ್ದು, ಬದಲಾದ ಕಾಲ ಹಾಗೂ ಪರಿಸ್ಥಿತಿಗೆ ತಕ್ಕಂತೆ ಎಲ್ಲವನ್ನೂ ಬದಲಾಯಿಸುವ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದ್ದಾರೆ. ಅವರ ಉಪಾಹಾರ ಗೃಹದ ಹೆಸರು, ಸಿಬ್ಬಂದಿ, ಆಹಾರ ಸೇರಿದಂತೆ ಎಲ್ಲವನ್ನೂ ಬದಲಾಯಿಸಿದ್ದಾಗಿ ಅವರು ಹೇಳಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
56ರ ಹರೆಯದ ರೆಸ್ಟೋರೆಂಟ್ ಒಂದರ ಮಾಲೀಕ ಮೊಹಮ್ಮದ್ ಜಮೀಲ್ ಹೇಳುವಂತೆ, ನಗರದಲ್ಲಿ ಮುಸ್ಲಿಮರಾಗಿರುವುದು ಕಷ್ಟಕರವಾಗಿದೆ ಮತ್ತು ಮುಸ್ಲಿಮರನ್ನು ನಿರಂತರವಾಗಿ ಅನುಮಾನದಿಂದ ನೋಡಲಾಗುತ್ತದೆ ಎಂದು ಅವರು ಅವರು ನಗರದ ದರೇಸಿ ರಸ್ತೆಯಲ್ಲಿರುವ ತಮ್ಮ ಕುಟುಂಬವೂ 1974 ಸ್ಥಾಪಿಸಿದ ತಾಜ್ ಹೋಟೆಲ್ ಅನ್ನು ಡಿಸೆಂಬರ್ 2021 ರಲ್ಲಿ ‘ರಾಯಲ್ ಫ್ಯಾಮಿಲಿ ರೆಸ್ಟೋರೆಂಟ್’ ಎಂದು ಹೊಸದಾಗಿ ಮರು ನಾಮಕರಣ ಮಾಡಿದ್ದಾರೆ ಎಂದು ವರದಿಯಾಗಿದೆ.
ದಶಕಗಳಿಂದ ಈ ರೆಸ್ಟೋರೆಂಟ್ ತನ್ನ ಕುಟುಂಬದ ಆದಾಯದ ಮೂಲವಾಗಿದೆ ‘ನನಗಿಂತ ಮೊದಲು, ನನ್ನ ಪೋಷಕರು ರೆಸ್ಟೋರೆಂಟ್ ಅನ್ನು ನಡೆಸುತ್ತಿದ್ದರು ಮತ್ತು ನನ್ನ ಕುಟುಂಬದ ಪರಂಪರೆಯನ್ನು ಬದಲಾಯಿಸುವುದು ನನಗೆ ನೋವಿನ ಸಂಗತಿಯಾಗಿದೆ. ನಾವು ಅನಿಶ್ಚಿತತೆಯ ಕಾಲದಲ್ಲಿ ವಾಸಿಸುತ್ತಿದ್ದೇವೆ ಮತ್ತು ಅಪರಿಚಿತರಿಗೆ ನಿರಂತರವಾಗಿ ಭಯಪಡುತ್ತಿದ್ದೇವೆ ನಮ್ಮ ಜೀವನೋಪಾಯಕ್ಕಾಗಿ ನಮ್ಮ ಗುರುತನ್ನು ಮರೆಮಾಡುವುದನ್ನು ಬಿಟ್ಟು ನಮಗೆ ಬೇರೆ ದಾರಿಯಿಲ್ಲ ಎಂದು ಜಮೀಲ್ ಹೇಳಿದ್ದಾರೆ.
ಮಥುರಾದಲ್ಲಿ ಮಾಂಸದ ನಿಷೇಧದ ನಂತರ ಮಾಂಸಹಾರಿ ತಿನ್ನಿಸುಗಳಾದ ಚಿಕನ್ ಕೊರ್ಮಾ, ಚಿಕನ್ ಚೇಂಜ್ಜಿಗಳು ಮತ್ತು ನಿಹಾರಿಗಳಿಗೆ ಬೇಡಿಕೆ ಕಡಿಮೆಯಾದ ಕಾರಣ ತನ್ನ ಎಂಟು ಮುಸ್ಲಿಂ ಸಿಬ್ಬಂದಿಯನ್ನು ವಜಾಗೊಳಿಸಿ ಹಿಂದೂಗಳನ್ನು ನೇಮಿಸಿಕೊಂಡಿದ್ದಾಗಿ ಜಮೀಲ್ ತಿಳಿಸಿದ್ದಾರೆ. ಕಳೆದ ವರ್ಷ ಆಗಸ್ಟ್ 30 ರಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಥುರಾದಲ್ಲಿ ಮದ್ಯ ಮತ್ತು ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸುವುದಾಗಿ ಘೋಷಿಸಿದ್ದರು.
ಪ್ರಸ್ತುತ ಈ ಹೊಟೇಲ್ನಲ್ಲಿ ಮೆನುಗಳು ಮಾಂಸಾಹಾರದಿಂದ ಸಸ್ಯಹಾರಕ್ಕೆ ಬದಲಾಗಿದ್ದು, ಚಿಕನ್ ಬದಲಾಗಿ ಪನೀರ್ ಚೇಂಜ್ಜಿ ಮತ್ತು ಪನೀರ್ ಕೊರ್ಮಾಗಳ ಜೊತೆಗೆ ಇತರ ಸಸ್ಯಾಹಾರಿ ಭಕ್ಷ್ಯಗಳಾದ ಕಡಾಯಿ ಪನೀರ್ , ಶಾಹಿ ಪನೀರ್ ಮತ್ತು ದಾಲ್ ತಡ್ಕಾಗಳನ್ನು ನಿರ್ಮಿಸಲಾಗುತ್ತಿದೆ. ಹಿಂದೂ ಅಡುಗೆ ಭಟರು ಮುಸ್ಲಿಮರಿಗಿಂತ ಉತ್ತಮವಾದ ಸಸ್ಯಾಹಾರಿ ಆಹಾರವನ್ನು ತಯಾರಿಸುತ್ತಾರೆ. ಕಳೆದ ವರ್ಷ ನಗರದಲ್ಲಿ ಮಾಂಸ ಮತ್ತು ಮದ್ಯ ಮಾರಾಟವನ್ನು ರಾಜ್ಯ ಸರ್ಕಾರ ನಿಷೇಧಿಸಿದ ನಂತರ ನಾವು ಈ ಸಸ್ಯಾಹಾರಿ ಆಹಾರವನ್ನು ಮಾತ್ರ ಮಾರಾಟ ಮಾಡಲು ಅನುಮತಿ ಪಡೆದಿದ್ದೇವೆ ಎಂದು ಜಮೀಲ್ ಹೇಳಿದರು.
ಅಲ್ಲದೇ ತಮ್ಮ ಹಾವಭಾವವೂ ಗ್ರಾಹಕರನ್ನು ದೂರವಿಡದಂತೆ ಆಗದಿರಲಿ ಎಂದು ಅವರು ಕ್ಯಾಶ್ ಕೌಂಟರ್ನಲ್ಲಿ ಕುಳಿತುಕೊಳ್ಳುವುದನ್ನು ಸಹ ನಿಲ್ಲಿಸಿದ್ದಾರೆ ಅವರ ಬದಲಿಗೆ ಕ್ಯಾಶ್ ಕೌಂಟರ್ನಲ್ಲಿ ಹಿಂದೂ ಸಿಬ್ಬಂದಿಯನ್ನು ನೇಮಿಸಿಕೊಂಡಿದ್ದಾರೆ ಎಂದು ಜಮೀಲ್ ಹೇಳಿದ್ದಾರೆ.
ಹೆಸರು, ಮೆನು ಮತ್ತು ಸಿಬ್ಬಂದಿಯನ್ನು ಒಳಗೊಂಡಿರುವ ತನ್ನ ರೆಸ್ಟೋರೆಂಟ್ನಲ್ಲಿ ಎಲ್ಲವನ್ನೂ ಬದಲಾಯಿಸಲು ತನಗೆ ಒಂದೆರಡು ತಿಂಗಳುಗಳೇ ಬೇಕಾಯಿತು ಎಂದು ಜಮೀಲ್ ಹೇಳಿದ್ದಾರೆ. ಇದರಿಂದ ನಾನು ದೊಡ್ಡ ನಷ್ಟವನ್ನು ಅನುಭವಿಸಿದ್ದೇನೆ. ಕೆಲವು ಸಮಾಜ ವಿರೋಧಿಗಳ ಗುರಿಯಲ್ಲಿರುವುದರಿಂದ ಸುಗಮವಾಗಿ ಕಾರ್ಯನಿರ್ವಹಿಸಲು ನನಗೆ ಇನ್ನೂ ಅವಕಾಶ ಸಿಕ್ಕಿಲ್ಲ. ದಿನಕ್ಕೆ 14,000 ರೂ.ನಿಂದ 15,000 ರೂ.ವರೆಗೆ ಗಳಿಸುತ್ತಿದ್ದ ನನ್ನ ಆದಾಯ ಈಗ ದಿನಕ್ಕೆ 3,000 ರಿಂದ 4,000 ರೂ.ಗೆ ಕಡಿಮೆಯಾಗಿದೆ ಎಂದು ಅವರು ಹೇಳಿದ್ದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ನಗರದಲ್ಲಿ ಇಂತಹ ಹಗೆತನವನ್ನು ತಾನು ಹಿಂದೆಂದೂ ನೋಡಿಲ್ಲ ಮತ್ತು ದೇವಾಲಯವು ಮೊದಲು ಸಾಮರಸ್ಯ ಮತ್ತು ಶಾಂತಿಯುತವಾಗಿತ್ತು ಇದ್ದಕ್ಕಿದ್ದಂತೆ ಎಲ್ಲವೂ ಬದಲಾಗಿದೆ. ದನದ ಮಾಂಸವನ್ನು ಕಳ್ಳಸಾಗಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಬಲಪಂಥೀಯ ಕಾರ್ಯಕರ್ತರು ತಮ್ಮನ್ನು ಥಳಿಸಬಹುದು ಎಂಬ ಭಯದಿಂದ ಜನರು ತಮ್ಮ ಮನೆಗಳಲ್ಲಿ ಮಾಂಸಾಹಾರಿ ಭಕ್ಷ್ಯಗಳನ್ನು ತಿನ್ನಲು ಭಯಪಡುತ್ತಾರೆ. ಆದರೆ ಮಾಂಸ ನಿಷೇಧದ ಬಗ್ಗೆ ತಾನು ಹೈಕೋರ್ಟ್ಗೆ ಮೊರೆ ಹೋಗಿದ್ದು ಆದರೆ ಕೋರ್ಟ್ನಲ್ಲಿ ವಿಚಾರಣೆ ಬಾಕಿ ಉಳಿದಿದೆ ಎಂದು ಜಮೀಲ್ ಆರೋಪಿಸಿದ್ದಾರೆ. ಹೀಗಾಗಿ ದೀರ್ಘಾವಧಿಯವರೆಗೆ ಕಾಯುವ ಮತ್ತು ಹೆಚ್ಚಿನ ನಷ್ಟವನ್ನು ಎದುರಿಸುವ ಬದಲು, ನಾನು ಬದುಕಲು ನನ್ನ ರೆಸ್ಟೋರೆಂಟ್ ಅನ್ನು ಪರಿವರ್ತಿಸಲು ನಿರ್ಧರಿಸಿದೆ ಎಂದು ಜಮೀಲ್ ಹೇಳಿದ್ದಾರೆ.