ತೇಜಸ್ ಲಘು ಯುದ್ಧ ವಿಮಾನ ನಿರ್ಮಾಣ

2,400 ಕೋಟಿ ರೂ. ಒಪ್ಪಂದಕ್ಕೆ ಹೆಚ್‌ಎಎಲ್-ಬಿಇಎಲ್ ಸಹಿ

ಬೆಂಗಳೂರು: ಮೇಕ್ ಇಂಡಿಯಾ ಯೋಜನೆಯಡಿ ತೇಜಸ್ ಲಘು ಯುದ್ಧ ವಿಮಾನಕ್ಕಾಗಿ 20 ವಿವಿಧ ಪ್ರಕಾರದ ಸಿಸ್ಟಮ್‌ಗಳ ಅಭಿವೃದ್ಧಿ ಮತ್ತು ಪೂರೈಕೆಗಾಗಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್, ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‌ನೊಂದಿಗೆ ಇಂದು ಒಪ್ಪಂದಕ್ಕೆ ಸಹಿ ಹಾಕಿದೆ.

2023 ರಿಂದ 2028 ರವರೆಗಿನ ಐದು ವರ್ಷಗಳ ಒಪ್ಪಂದವು 2400 ಕೋಟಿ ರೂಪಾಯಿಗಳ ಮೌಲ್ಯದ್ದಾಗಿದೆ ಮತ್ತು ನಿರ್ಣಾಯಕ ಏವಿಯಾನಿಕ್ಸ್ ಲೈನ್ ರಿಪ್ಲೇಸಬಲ್ ಯುನಿಟ್‌ಗಳು, ವಿಮಾನ ನಿಯಂತ್ರಣ ಕಂಪ್ಯೂಟರ್‌ಗಳು, ನೈಟ್ ಪ್ಲೇಯಿಂಗ್ ಎಲ್‌ಆರ್‌ಯುಎಸ್‌ಗಳನ್ನು ಇದು ಒಳಗೊಂಡಿದೆ. ‘ಆತ್ಮನಿರ್ಭರ್ ಭಾರತ್’ ಅಭಿಯಾನ ಉತ್ತೇಜಿಸುವ ನಿಟ್ಟಿನಲ್ಲಿಇಲ್ಲಿಯವರೆಗೂ ಯಾವುದೇ ಭಾರತೀಯ ಕಂಪನಿ ಮಾಡಿಲ್ಲದ ಅತಿದೊಡ್ಡ ಒಪ್ಪಂದ ಇದಾಗಿದೆ.

ಸ್ವದೇಶಿ ಉತ್ಪನ್ನಗಳಿಗೆ ಎಚ್‌ಎಎಲ್ ಬದ್ಧವಾಗಿದೆ. ಹೆಚ್‌ಎಎಲ್, ಡಿಆರ್‌ಡಿಒ ಮತ್ತು ಬಿಇಎಲ್ ನಡುವಿನ ಸಹಕಾರಕ್ಕೆ ಲಘು ಯುದ್ಧ ವಿಮಾನ ಅತ್ಯುತ್ತಮ ಉದಾಹರಣೆಯಾಗಿದೆ. ಪ್ರಸ್ತುತ ಮೇಕ್ ಇನ್ ಇಂಡಿಯಾ ನಿಟ್ಟಿನಲ್ಲಿ ತೇಜಸ್ ಯುದ್ಧ ವಿಮಾನಕ್ಕಾಗಿ 20 ವಿವಿಧ ಪ್ರಕಾರದ ಎಲ್‌ಆರ್‌ಯುಎಸ್‌ಗಳ ಅಭಿವೃದ್ಧಿ ಮತ್ತು ಪೂರೈಕೆಗಾಗಿ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಹೆಚ್‌ಎಎಲ್ ಮುಖ್ಯಸ್ಥ ಮತ್ತು ವ್ಯವಸ್ಥಾಪಕ ನಿರ್ದೇಶಕ ಆರ್. ಮಾಧವನ್ ತಿಳಿಸಿದ್ದಾರೆ.

× Chat with us