ಅಹಮದಾಬಾದ್ : ಗುಜರಾತ್ ವಿಧಾನಸಭೆ ಚುನಾವಣೆಗೆ ಬಿಜೆಪಿ ತನ್ನ ೧೬೦ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಗುರುವಾರ ಬಿಡುಗಡೆ ಮಾಡಿದೆ.
ಹಾಲಿ ಸಿಎಂ ಭೂಪೇಂದ್ರ ಪಟೇಲ್ ೨೦೧೭ರ ಚುನಾವಣೆಯಲ್ಲಿ ಗೆದ್ದಿದ್ದ ಘಟ್ಲೋಡಿಯಾದಿಂದಲೇ ಈ ಬಾರಿಯೂ ಕಣಕ್ಕಿಳಿಯಲಿದ್ದಾರೆ. ಗುಜರಾತ್ ಗೃಹ ಸಚಿವ ಹರ್ಷ ಸಂಘವಿ ಮಜುರಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ.
ಇತ್ತೀಚೆಗೆ ಸೇತುವೆ ದುರಂತ ಸಂಭವಿಸಿದ್ದ ಮೋರ್ಬಿ ವಿಧಾನಸಭಾ ಕ್ಷೇತ್ರದಿಂದ ಕಾಂತಿಲಾಲ್ ಅಮರತಿಯಾ ಅವರನ್ನು ಕಣಕ್ಕಿಳಿಸಲಾಗಿದೆ. ಕಾಂಗ್ರೆಸ್ನಿಂದ ಬಂದಿರುವ ಬ್ರಿಜೇಶ್ ಮೆರ್ಜಾ ಅವರು ಈ ಹಿಂದೆ ಇಲ್ಲಿ ಗೆದ್ದಿದ್ದರು. ಪಾಟಿದಾರ್ ಆಂದೋಲನದ ನಾಯಕ ಹಾರ್ದಿಕ್ ಪಟೇಲ್ ಅವರು ತಮ್ಮ ತವರು ಕ್ಷೇತ್ರವಾದ ವಿರಾಮಗಾಮ್ನಿಂದ ಸ್ಪರ್ಧಿಸಲಿದ್ದಾರೆ.
ಕ್ರಿಕೆಟಿಗ ರವೀಂದ್ರ ಸಿಂಹ ಜಡೇಜಾ ಅವರ ಪತ್ನಿ ರಿವಾಬಾ ಜಡೇಜಾ ಉತ್ತರ ಜಾಮ್ನಗರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.
೧೮೨ ಸದಸ್ಯರ ಗುಜರಾತ್ ವಿಧಾನಸಭೆಗೆ ಡಿಸೆಂಬರ್ ೧ ಮತ್ತು ಡಿಸೆಂಬರ್ ೫ ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಡಿಸೆಂಬರ್ ೮ ರಂದು ಮತ ಎಣಿಕೆ ನಡೆಯಲಿದೆ.
ಡಿಸೆಂಬರ್ ೧ರಂದು ಮೊದಲ ಹಂತದಲ್ಲಿ ಮತದಾನ ನಡೆಯುವ ೮೯ ಸ್ಥಾನ ಪೈಕಿ ೮೪ ಅಭ್ಯರ್ಥಿಗಳು ಮತ್ತು ಡಿ. ೫ರಂದು ಮತದಾನ ನಡೆಯಲಿರುವ ೯೩ ಕ್ಷೇತ್ರಗಳ ೭೬ ಅಭ್ಯರ್ಥಿಗಳ ಹೆಸರನ್ನು ಮೊದಲ ಪಟ್ಟಿಯಲ್ಲಿ ಹೆಸರಿಸಲಾಗಿದೆ. ಪಟ್ಟಿಯಲ್ಲಿ ೬೯ ಹಾಲಿ ಶಾಸಕರು ಇದ್ದಾರೆ. ಹೆಚ್ಚಿನ ಸಂಖ್ಯೆಯ ಹಾಲಿ ಶಾಸಕರನ್ನು ಕೈಬಿಡಲಾಗಿದೆ. ಪಟ್ಟಿಯಲ್ಲಿ ೧೪ ಮಹಿಳೆಯರೂ ಇದ್ದಾರೆ.
- ಮುಖಪುಟ
- ಮೈಸೂರು
- ಜಿಲ್ಲೆಗಳು
- ರಾಜ್ಯ
- ದೇಶ- ವಿದೇಶ
- ರಾಜಕೀಯ
- ಅಪರಾಧ
- ಮಹಿಳೆ
- ಕೃಷಿ
- ವಿಜ್ಞಾನ ತಂತ್ರಜ್ಞಾನ
- ಕ್ರೀಡೆ
- ವಾಣಿಜ್ಯ
- ಚಿತ್ರಸಂತೆ
- ವಿಶೇಷ
- ಆಂದೋಲನ ಪುರವಣಿ
- ಎಡಿಟೋರಿಯಲ್
- ಆಂದೋಲನ 50
- ಜಾಹೀರಾತು
- Cricket
Subscribe to Updates
Get the latest creative news from FooBar about art, design and business.
Next Article ಇಡಬ್ಲ್ಯೂಎಸ್ ಮೀಸಲಾತಿ: ವಿಶೇಷ ಕಾಯ್ದೆ ರೂಪಿಸಲು ಸಿದ್ಧತೆ