ಅಮ್ರೇಲಿ : ಗುಜರಾತ್‌ನ ಅಮ್ರೇಲಿ ಜಿಲ್ಲೆಯಲ್ಲಿ ದಲಿತ ಪ್ರಾಂಶುಪಾಲರೊಬ್ಬರು ಶುಕ್ರವಾರ (ಅಕ್ಟೋಬರ್ 20) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅವರು ಸಾಯುವ ಮುನ್ನ ವಿಡಿಯೋ ಸಂದೇಶ ರೆಕಾರ್ಡ್ ಮಾಡಿದ್ದು, ತಮ್ಮ ಗ್ರಾಮದ ಸರಪಂಚ್ ತನ್ನ ಜಾತಿಯ ಆಧಾರದ ಮೇಲೆ ತನಗೆ ಮಾನಹಾನಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಮೃತರನ್ನು 52 ವರ್ಷದ ಕಾಂತಿ ಚೌಹಾಣ್ ಎಂದು ಗುರುತಿಸಲಾಗಿದೆ.
ಅವರು ಸಾಯುವ ಮೊದಲು ಅವರು ರೆಕಾರ್ಡ್ ಮಾಡಿದ ವೀಡಿಯೊ ಸಂದೇಶದಲ್ಲಿ, “ನಾನು ಕೆಳ ಜಾತಿಯಿಂದ ಬಂದಿದ್ದೇನೆ. ಆದರೆ ನಾನು ಕಲಿಸುವ ಕೆಲಸವನ್ನು ಮಾಡುತ್ತಿದ್ದೇನೆ. ದಯವಿಟ್ಟು ಅದನ್ನು ನನ್ನಿಂದ ಕಿತ್ತುಕೊಳ್ಳಬೇಡಿ. ನೀವು ನಮ್ಮ ಜಾತಿಯನ್ನು ಅಸ್ತ್ರವಾಗಿ ಬಳಸಿಕೊಂಡು ನಮ್ಮನ್ನು ಕೆಣಕಲು ಪ್ರಯತ್ನಿಸುತ್ತಿದ್ದೀರಿ. ಸರಪಂಚ್ ಆಗಿರುವ ನಿಮಗೆ ಇದು ನಾಚಿಕೆಗೇಡಿನ ಸಂಗತಿ” ಎಂದು ಚೌಹಾಣ್ ಅವರು ಹೇಳಿರುವುದಾಗಿ timesofIndia.com ವರದಿ ಮಾಡಿದೆ.
ಅವರು, (ಸರಪಂಚ್) ಬೆದರಿಕೆ ಹಾಕುತ್ತಿದ್ದಾರೆ. ನಾನು ಪಡೆದಿರುವ ಅನುದಾನವನ್ನು ನೀಡುವಂತೆ ಕೇಳುತ್ತಿದ್ದಾರೆ. ಅವರು ಹಳ್ಳಿಗರ ಸಾಮಾಜಿಕ ಮಾಧ್ಯಮ ಗುಂಪುಗಳಲ್ಲಿ ನನ್ನ ಮತ್ತು ನನ್ನ ಜಾತಿಯ ಬಗ್ಗೆ ಅವಹೇಳನಕಾರಿ ಸಂದೇಶವನ್ನು ಹಾಕಿದ್ದಾರೆ ಎಂದು ಪ್ರಾಂಶುಪಾಲರು ಆರೋಪಿಸಿರುವುದಾಗಿ TheNewIndianExpress ವರದಿ ಮಾಡಿದೆ.
ಆರೋಪಿ ಸರಪಂಚ್ ನನ್ನು ಮುಕೇಶ್ ಬೋರಿಸಾಗರ್ ಎಂದು ಗುರುತಿಸಲಾಗಿದೆ. ಗುಜರಾತ್ ಸರ್ಕಾರವು ಗ್ರಾಮದಲ್ಲಿ ಇತರ ಉದ್ದೇಶಗಳಿಗಾಗಿ ವಿತರಿಸಿದ ಶಾಲಾ ಆಡಳಿತ ಸಮಿತಿ (SMC) ಹಣವನ್ನು ಬೇರೆಡೆಗೆ ಬಳಸಲು ಚೌಹಾಣ್ ಮೇಲೆ ಒತ್ತಡ ಹೇರಿದ್ದರು ಎಂದು TOI ವರದಿ ಮಾಡಿದೆ.
ಶಾಲಾ ಸಮಯಕ್ಕಿಂತ ಮೊದಲು ಎರಡು ಗಂಟೆಗಳ ಅವಧಿಯ ಹೆಚ್ಚುವರಿ ತರಗತಿಗಳನ್ನು ನಡೆಸುವ ಚೌಹಾಣ್ ಅವರ ನಿರ್ಧಾರವು ಕೆಲವು ಪೋಷಕರ ಅಸಮಾಧಾನಕ್ಕೆ ಗುರಿಯಾಗಿತ್ತು ಎಂದು ಚೌಹಾಣ್ ಅವರ ಪತ್ನಿ ಸಲ್ಲಿಸಿದ ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ ಎಂದು TOI ವರದಿ ಮಾಡಿದೆ.
ಚೌಹಾಣ್ ರ ಹಳ್ಳಿಯ ದಲಿತ ಸಮುದಾಯದ ಸದಸ್ಯರು ಶನಿವಾರ ಗ್ರಾಮಾಂತರ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿದ್ದು, ಅವರ ಮೃತದೇಹವನ್ನು ಸ್ವೀಕರಿಸಲು ನಿರಾಕರಿಸಿದ್ದರು ಎಂದು ವರದಿಯಾಗಿದೆ.
“ನಾವು ಐಪಿಸಿಯ ಸೆಕ್ಷನ್ 306 [ಆತ್ಮಹತ್ಯೆಗೆ ಪ್ರಚೋದನೆ] ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯ ವಿವಿಧ ವಿಭಾಗಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದೇವೆ. ಆರೋಪಿಯನ್ನು ಬಂಧಿಸಲು 90 ಪೊಲೀಸರನ್ನು ನಿಯೋಜಿಸಲಾಗಿತ್ತು ” ಎಂದು ಅಮ್ರೇಲಿಯ ಉಪ ಪೊಲೀಸ್ ಅಧೀಕ್ಷಕ ಜೆ.ಪಿ.ಭಂಡಾರಿ ಹೇಳಿದ್ದಾರೆ.
ಬೆಳಗಾವಿ : ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಜೀರ್ ಅಹಮ್ಮದ್ ಬಿಡುಗಡೆಗೊಳಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ…
ರಾಮನಗರ: ರೈಲ್ವೆ ಹಳಿ ಮೇಲೆ ಗ್ಯಾಸ್ ಸಿಲಿಂಡರ್ ಪತ್ತೆಯಾಗಿ ಕೆಲಕಾಲ ಆತಂಕ ಸೃಷ್ಟಿಯಾಗಿರುವ ಘಟನೆ ಮದ್ದೂರು-ಚನ್ನಪಟ್ಟಣ ಮಾರ್ಗಮಧ್ಯೆಯ ಶೆಟ್ಟಿಹಳ್ಳಿ ರೈಲ್ವೆ…
ಚನ್ನೈ: ತಮಿಳುನಾಡಿನ ಜನರ ಕಲ್ಯಾಣಕ್ಕಾಗಿ, ಬಿಜೆಪಿ ಮಹಿಳಾ ಮನೆ ಮುಖ್ಯಸ್ಥರಿಗೆ ತಿಂಗಳಿಗೆ 2,000 ರೂ., ವಾರ್ಷಿಕವಾಗಿ ಮೂರು ಉಚಿತ ಎಲ್‍ಪಿಜಿ…
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂದು ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು 135ನೇ ಜಯಂತಿಯನ್ನು ವಿನೂತನ ರೀತಿಯಲ್ಲಿ ಆಚರಣೆ ಮಾಡಲಾಯಿತು.…
ಮಂಡ್ಯ: ಶ್ರೀಕ್ಷೇತ್ರ ಆದಿಚುಂಚನಗಿರಿಯಲ್ಲಿ 100 ಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಶ್ರೀಗುರು ಭೈರವೈಕ್ಯ ಮಂದಿರ ನಾಳೆ ಲೋಕಾರ್ಪಣೆಗೆ ಸಜ್ಜಾಗಿದೆ. ಪ್ರಧಾನಿ…
ನವದೆಹಲಿ: ದೇಶಾದ್ಯಂತ ರಣ ಬಿಸಿಲ ಝಳ ಹೆಚ್ಚುತ್ತಿದ್ದು, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಒಂದು ವಾರಗಳ ಕಾಲ ತಾಪಮಾನ ಹೆಚ್ಚಾಗಲಿದೆ…