ಹೊಸದಿಲ್ಲಿ: ಅರುಣ್ ಗೋಯಲ್ ಅವರನ್ನು ಚುನಾವಣಾ ಆುುಂಕ್ತರನ್ನಾಗಿ (ಇಅ) ನೇಮಕಾತಿ ಮಾಡಿದ್ದರಲ್ಲಿ ಅಳವಡಿಸಿಕೊಂಡ ಪ್ರತಿಕ್ರಿಯೆಯನ್ನು ಪ್ರಶ್ನೆ ಮಾಡಿರುವ ಸರ್ವೋಚ್ಚ ನ್ಯಾಯಾಲಯ ಅವರ ಕಡತಕ್ಕೆ ತರಾತುರಿಯಲ್ಲಿ ಆತುರದಲ್ಲಿ ಅನುಮತಿ ನೀಡಲಾಗಿದೆ ಎಂದು ಅಸಮಾಧಾನ ಮತ್ತು ಆಕ್ಷೇಪ ವ್ಯಕ್ತಪಡಿಸಿದೆ.
ಇದು ಯಾವ ರೀತಿಯ ಮೌಲ್ಯಮಾಪನ ಆದಾಗ್ಯೂ, ನಾವು ಅರುಣ್ ಗೋಯಲ್ ಅವರ ರುಜುವಾತುಗಳ ಅರ್ಹತೆಯನ್ನು ಪ್ರಶ್ನಿಸುತ್ತಿಲ್ಲ, ಅವರ ನೇಮಕಾತಿಯ ಪ್ರಕ್ರಿಯಯನ್ನು ಪ್ರಶ್ನಿಸುತ್ತಿದ್ದೇವೆ ಎಂದು ನ್ಯಾಯಮೂರ್ತಿ ಕೆ ಎಂ ಜೋಸೆಫ್ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠ ಪ್ರಶ್ನಿಸಿತು.
ಗೋೆಯಲ್ ಅವರ ನೇಮಕಕ್ಕೆ ಸಂಬಂಧಿಸಿದ ಕಡತವನ್ನು ‘ಮಿಂಚಿನ ವೇಗ‘ದಲ್ಲಿ ತೆರವುಗೊಳಿಸಲಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದ್ದು, ಅದಕ್ಕೆ ಅರ್ಜಿದಾರರು ಏನೋ ಹೇಳಲು ಮುಂದಾದಾಗ ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಸ್ವಲ್ಪ ಹೊತ್ತು ಸುಮ್ಮನಿರಿ, ಈ ವಿಷುಂವನ್ನು ಸಂಪೂರ್ಣವಾಗಿ ಪರಿಶೀಲಿಸುವಂತೆ ಮನವಿ ಮಾಡಿದ್ದೇನೆ ಎಂದರು.
ಸರ್ವೋಚ್ಚ ನ್ಯಾಯಾಲಯ ನೀಡಿದ ಬುಧವಾರದ ನಿರ್ದೇಶನದ ಅನುಸಾರವಾಗಿ ಕೇಂದ್ರದಿಂದ ಪೀಠದ ಮುಂದೆ ಇರಿಸಲಾದ ಗೋಯಲ್ ಅವರ ನೇಮಕಾತಿಯ ಮೂಲ ಕಡತವನ್ನು ಅದು ಪರಿಶೀಲಿಸಿತು. ೧೯೮೫ರ ಬ್ಯಾಚ್ನ ಐಎಎಸ್ ಅಧಿಕಾರಿ ಗೋಯಲ್ ಒಂದೇ ದಿನದಲ್ಲಿ ಸ್ವಯಂ ನಿವೃತ್ತಿ ಪಡೆದಿದ್ದಾರೆ, ಅವರ ಕಡತವನ್ನು ಕಾನೂನು ಸಚಿವಾಲಯ ಒಂದೇ ದಿನದಲ್ಲಿ ತೆರವುಗೊಳಿಸಿದೆ, ನಾಲ್ಕು ಹೆಸರುಗಳ ಸಮಿತಿಯನ್ನು ಪ್ರಧಾನ ಮಂತ್ರಿಯ ಮುಂದೆ ಮಂಡಿಸಿ ಗೋಯಲ್ ಅವರ ಹೆಸರಿಗೆ ೨೪ ಗಂಟೆಗಳ ಒಳಗೆ ರಾಷ್ಟ್ರಪತಿಗಳಿಂದ ಒಪ್ಪಿಗೆ ಸಿಕ್ಕಿತು.
ಚುನಾವಣಾ ಆಯುಕ್ತರು ಮತ್ತು ಮುಖ್ಯ ಚುನಾವಣಾ ಆಯುಕ್ತರ ನೇಮಕಕ್ಕೆ ಕೊಲಿಜಿಯಾ ಮಾದರಿಯ ವ್ಯವಸ್ಥೆ ಅಳವಡಿಸಿಕೊಳ್ಳುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ನ್ಯಾಯಪೀಠವು ನಡೆಸುತ್ತಿದೆ.
- ಮುಖಪುಟ
- ಮೈಸೂರು
- ಜಿಲ್ಲೆಗಳು
- ರಾಜ್ಯ
- ದೇಶ- ವಿದೇಶ
- ರಾಜಕೀಯ
- ಅಪರಾಧ
- ಮಹಿಳೆ
- ಕೃಷಿ
- ವಿಜ್ಞಾನ ತಂತ್ರಜ್ಞಾನ
- ಕ್ರೀಡೆ
- ವಾಣಿಜ್ಯ
- ಚಿತ್ರಸಂತೆ
- ವಿಶೇಷ
- ಆಂದೋಲನ ಪುರವಣಿ
- ಎಡಿಟೋರಿಯಲ್
- ಆಂದೋಲನ 50
- ಜಾಹೀರಾತು
- Cricket
Subscribe to Updates
Get the latest creative news from FooBar about art, design and business.
Previous Articleಸಂಸತ್ತಿನ ಹೆಚ್ಚುವರಿ ಅಧಿಕಾರ ಬಳಸಿ ಮತದಾನದ ಹಕ್ಕನ್ನು ತಳ್ಳಿಹಾಕುವಂತಿಲ್ಲ: ಸಿಇಸಿ ಪ್ರಕರಣದಲ್ಲಿ ನ್ಯಾಯಮೂರ್ತಿ ಜೋಸೆಫ್
Next Article ಮಡಿಕೇರಿಯ ರಾಜಾ ಸೀಟಿಗೆ ಈಗ ಹೊಸ ರಾಜ ಕಳೆ