ಕಾಂಗ್ರೆಸ್​ನೊಂದಿಗೆ ಮೈತ್ರಿ ಘೋಷಿಸಿದ ಗೋವಾ ಫಾರ್ವರ್ಡ್​ ಪಾರ್ಟಿ; ಎನ್​ಡಿಎಯಿಂದ 2019ರಲ್ಲಿ ಹೊರಬಿದ್ದ ಪಕ್ಷವಿದು

ಗೋವಾ: ಗೋವಾದಲ್ಲಿ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇದೆ. ಇದೇ ಹೊತ್ತಲ್ಲಿ ಗೋವಾ ಫಾರ್ವರ್ಡ್ ಪಾರ್ಟಿ  ಕಾಂಗ್ರೆಸ್​ನೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದೆ.

ಇಂದು ಜಂಟಿಯಾಗಿ ಸುದ್ದಿಗೋಷ್ಠಿ ಕರೆದ ಕಾಂಗ್ರೆಸ್​ ಮತ್ತು ಜಿಪಿಎಫ್​ ನಾಯಕರು ಮೈತ್ರಿಯ ಘೋಷಣೆ ಮಾಡಿದ್ದಾರೆ. ಕೆಲವೇ ದಿನಗಳ ಹಿಂದೆ ಗೋವಾದ ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷ, ತೃಣಮೂಲ ಕಾಂಗ್ರೆಸ್​​ನೊಂದಿಗೆ ಮೈತ್ರಿಮಾಡಿಕೊಂಡು ಚುನಾವಣೆಗೆ ಸ್ಫರ್ಧಿಸುವುದಾಗಿ ತಿಳಿಸಿತ್ತು.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೋವಾ ಫಾರ್ವರ್ಡ್ ಪಾರ್ಟಿ ಅಧ್ಯಕ್ಷ ವಿಜಯ್​ ಸರ್​​ದೇಸಾಯಿ, ಗೋವಾದಲ್ಲಿರುವ ನಿರಂಕುಶ ಆಡಳಿತದಿಂದ ಮತ್ತೊಮ್ಮೆ ಇಲ್ಲಿನ ಜನರನ್ನು ವಿಮೋಚನೆಗೊಳಿಸುವುದಾಗಿ ಗೋವಾದ 60ನೇ ವಿಮೋಚನಾದಿನದ ಮುನ್ನಾದಿನವಾದ ಇಂದು ಘೋಷಣೆ ಮಾಡುತ್ತಿದ್ದೇವೆ ಎಂದಿದ್ದಾರೆ.

ಜಿಎಫ್​ಪಿ ಪಕ್ಷ ಟ್ವೀಟ್​ ಮಾಡಿದ್ದು, ಗೋವಾಕ್ಕಾಗಿ ಒಗ್ಗಟ್ಟು ಎಂದು ಹೇಳಿದೆ. ಹಾಗೇ, ಕಾಂಗ್ರೆಸ್​ ಮತ್ತು ಜಿಪಿಎಫ್​ ನಾಯಕರು ಒಟ್ಟಾಗಿ ಕೈಹಿಡಿದು ನಿಂತ ಫೋಟೋವುಳ್ಳ ಪೋಸ್ಟರ್​ನ್ನು ಪೋಸ್ಟ್ ಮಾಡಿದೆ.

× Chat with us