ರಾಷ್ಟ್ರೀಯ

ಗರ್ಭಗುಡಿಗೆ ರಾಮಲಲ್ಲಾ ವಿಗ್ರಹ: ಇಂದು ಮೂರ್ತಿ ಪ್ರತಿಷ್ಠಾಪನೆ!

ಅಯೋಧ್ಯೆ: ಅಯೋಧ್ಯೆಯ ಪ್ರಭು ಶ್ರೀರಾಮಮಂದಿರದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೆ ಇಂದು (ಗುರುವಾರ) ಅಯೋಧ್ಯೆಯ ರಾಮಮಂದಿರದ ಗರ್ಭಗುಡಿಯೊಳಗೆ ರಾಮನ ವಿಗ್ರಹವನ್ನು ತರಲಾಗಿದೆ. ಮೂರ್ತಿ ಪ್ರತಿಷ್ಠಾಪನೆ ವಿಧಿ-ವಿಧಾನ ಕಾರ್ಯಗಳು ನಡೆಯುತ್ತಿವೆ.

ಸುಮಾರು 150-200 ಕೆಜಿ ತೂಕದ ರಾಮಲಲ್ಲಾ ವಿಗ್ರಹವನ್ನು ಬುಧವಾರ ಸಂಜೆ ದೇವಸ್ಥಾನಕ್ಕೆ ತರಲಾಗಿತ್ತು. ರಾಮಲಲ್ಲಾ ವಿಗ್ರಹವನ್ನು ಕ್ರೇನ್ ಸಹಾಯದಿಂದ ಗರ್ಭಗುಡಿಗೆ ಇರಿಸಲಾಯಿತು. ಅದಕ್ಕು ಮುನ್ನ ಗರ್ಭಗುಡಿಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

‘ಪ್ರಾಣ ಪ್ರತಿಷ್ಠೆ’ ಸಮಾರಂಭಕ್ಕೂ ಮೊದಲು ಗರ್ಭಗುಡಿಯಲ್ಲಿ ವಿಗ್ರಹವನ್ನು ಸ್ಥಾಪಿಸಲಾಗುವುದು.

ಮೈಸೂರಿನ ಶಿಲ್ಪ ಅರುಣ್‌ ಯೋಗಿರಾಜ್‌ ಅವರಿಂದ ನಿರ್ಮಿತವಾಗಿರುವ ರಾಮಲಲ್ಲಾ ಮೂರ್ತಿಯನ್ನು ನೆನ್ನೆ(ಬುಧವಾರ) ಸಂಜೆ ಮರೆವಣಿಗೆ ಮೂಲಕ ದೇವಸ್ಥಾನಕ್ಕೆ ತರಲಾಯಿತು. ಮೂರ್ತಿಯನ್ನು ಗರ್ಭಗುಡಿಯಲ್ಲಿರಿಸುವ ಮುನ್ನಾ ವಿಶೇಷ ಪೂಜೆ ನಡೆಸಲಾಯಿತು. ಮತ್ತು ಜನವರಿ 22ರ ಉದ್ಘಾಟನಾ ಕಾರ್ಯಕ್ರಮದ ಪೂರ್ವಭಾವಿ ಆಚರಣೆಯ ಸಂಬಂಧ ಕುಶಲ ಪೂಜೆ ಕೈಂಕರ್ಯ ನೆರವೇರಿತು.

andolanait

Recent Posts

ಓದುಗರ ಪತ್ರ: ಇದೇನು ಪಾದಚಾರಿ ರಸ್ತೆಯೋ ಅಥವಾ…?

ಅನ್ನ ಬೆಂದಿದೆಯೋ ಇಲ್ಲವೋ ಎಂಬುದನ್ನುಪರೀಕ್ಷಿಸಲು ಪಾತ್ರೆಯ ಅನ್ನವನ್ನು ಮುಟ್ಟಿ ನೋಡಬೇಕಿಲ್ಲ. ಒಂದು ಅಗುಳನ್ನು ಪರೀಕ್ಷಿಸಿದರೆ ಸಾಕು. ಅಂತೆಯೇ ಮೈಸೂರಿನಲ್ಲಿ ಸಂಚಾರ…

3 mins ago

ಓದುಗರ ಪತ್ರ: ನಕಲಿ ಔಷಧಿಗಳ ಜಾಲದ ತಡೆಗೆ ಕಠಿಣ ಕ್ರಮ ಕೈಗೊಳ್ಳಿ

ಮಾರುಕಟ್ಟೆಯಲ್ಲಿ ನಕಲಿ ಔಷಧಿಗಳ ಮಾರಾಟ ಹೆಚ್ಚಾಗುತ್ತಿರುವುದು ಅಂತಕ ಮೂಡಿಸಿದೆ. ಬ್ರಾಂಡೆಡ್ ಹೆಸರಿನಲ್ಲಿ ಸೂಕ್ತ ಪ್ರಮಾಣದಲ್ಲಿ ರಾಸಾಯನಿಕಗಳಿಲ್ಲದ ಅಥವಾ ಹಾನಿಕಾರಕ ಘಟಕಾಂಶಗಳಿರುವ…

5 mins ago

ಹರಿಕಥೆ ಮೇಷ್ಟ್ರು ಮಾದೇಶ ಇನ್ನಿಲ್ಲ

ಗುಂಡ್ಲುಪೇಟೆ : ತಾಲ್ಲೂಕಿನ ಬಾಚಹಳ್ಳಿಗ್ರಾಮದ ನಿವಾಸಿ, ಹರಿಕಥೆ ಮೇಷ್ಟ್ರು ಮಾದೇಶ(55) ಅವರು ಶನಿವಾರ ರಾತ್ರಿ ನಿಧನರಾದರು. ಚಿಕ್ಕನಿಂದಲೇ ಕಲೆಯನ್ನು ಮೈಗೂಡಿಸಿಕೊಂಡಿದ್ದ…

8 mins ago

ಜೆನ್ ಝೀ ಶಕ್ತಿಗೆ ಹೆದರಿದ ಕೇಂದ್ರದ ಎನ್‌ಡಿಎ ಸರ್ಕಾರ

ದೆಹಲಿ ಕಣ್ಣೋಟ, ಶಿವಾಜಿ ಗಣೇಶನ್‌ ಅವರ ವಾರದ ಅಂಕಣ  ಜನರು ಮತ್ತು ಯುವಕರು ದಿಕ್ಕೆಟ್ಟ ಆಡಳಿತದ ವಿರುದ್ಧ ಸಿಡಿದು ಬೀದಿಗಿಳಿದಿದ್ದಾರೆ…

11 mins ago

ಮತ್ತೆ ಹುಯ್ಯುತ್ತಿರುವ ಪ್ರತಿಭಟನೆಯ ಸುರಿಮಳೆ

ಕೆ.ನೀಲಾ ಕರುನಾಡ ಹೋರಾಟಗಾರ್ತಿ ಕಾಮ್ರೇಡ್ ನೀಲಾ ನೆನಪುಗಳು ನಾನು ಆಗ ಏಳು ಅಥವಾ ಎಂಟನೇ ತರಗತಿ ಓದುತ್ತಿದ್ದೆ ಎಂದು ನೆನಪು.…

49 mins ago

ಕೆಚ್ಚೆದೆಯ ನೇಹಾ ಮತ್ತು ವಾತ್ಸಲ್ಯದ ಅಮ್ಮ

ಪಾತು ಎಲ್ಲಾ ಭಿನ್ನಾಭಿಪ್ರಾಯಗಳಾಚೆಯೂ ಒಬ್ಬರ ಬದುಕಿನಲ್ಲಿ ಇನ್ನೊಬ್ಬರು ಆಸರೆಯಾಗಬಹುದು ಎನ್ನುವುದಕ್ಕೆ ಸಾಕ್ಷಿಯಾಗಿ ಈ ಘಟನೆ ಹಲವು ಕಾಲ ಜನಮಾನಸದಲ್ಲಿ ನಿಲ್ಲುತ್ತದೆ…

57 mins ago