ದೆಹಲಿಯ ರೋಹಿಣಿ ಕೋರ್ಟ್‌ನಲ್ಲಿ ಶೂಟೌಟ್‌: ಗ್ಯಾಂಗ್‌ಸ್ಟರ್‌ ಸೇರಿ ಮೂವರು ಸಾವು

ಹೊಸದಿಲ್ಲಿ: ರೋಹಿಣಿ ನ್ಯಾಯಾಲಯದ ಆವರಣದಲ್ಲಿ ಜೈಲಿನಲ್ಲಿದ್ದ ಗ್ಯಾಂಗ್‌ಸ್ಟರ್‌ ಜಿತೇಂದರ್‌ ಗೋಗಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಕೋರ್ಟ್‌ ಆವರಣದಲ್ಲಿ ನಡೆದ ಗುಂಡಿನ ದಾಳಿ ವೇಳೆ ಇತರೆ ಮೂವರು ಸಾವಿಗೀಡಾಗಿದ್ದು, ಹಲವರು ಗಾಯಗೊಂಡಿದ್ದಾರೆ.

ಜಿತೇಂದರ್ ಮಾನ್ ಅಲಿಯಾಸ್ ಗೋಗಿಗೆ ಶುಕ್ರವಾರ ಮಧ್ಯಾಹ್ನ ರೋಹಿಣಿ ನ್ಯಾಯಾಲಯದೊಳಗೆ ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್ ಸುನೀಲ್ ಅಲಿಯಾಸ್ ಟಿಲ್ಲು ತಾಜಪುರಿಯಾ ನೇತೃತ್ವದ ಎದುರಾಳಿ ತಂಡದ ಇಬ್ಬರು ಶಸ್ತ್ರಸಜ್ಜಿತ ದುಷ್ಕರ್ಮಿಗಳು ಗುಂಡು ಹಾರಿಸಿದರು. ಗೋಗಿ ಜೊತೆಗಿದ್ದ ವಿಶೇಷ ಸೆಲ್ ಕೌಂಟರ್ ಇಂಟೆಲಿಜೆನ್ಸ್ ತಂಡದ ಸದಸ್ಯರು ದುಷ್ಕರ್ಮಿಗಳ ಮೇಲೆ ಗುಂಡಿನ ದಾಳಿ ನಡೆಸಿದ್ದು, ವಕೀಲರು ಎಂದು ತೋರುತ್ತಿದ್ದ ಇಬ್ಬರನ್ನು ಹತ್ಯೆಗೈದಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ಗೋಗಿಯನ್ನು ಏಪ್ರಿಲ್‌ನಲ್ಲಿ ಮಹಾರಾಷ್ಟ್ರ ಸಂಘಟಿತ ಅಪರಾಧ ಕಾಯ್ದೆ ಅಡಿಯಲ್ಲಿ ದೆಹಲಿ ಪೋಲಿಸ್‌ನ ವಿಶೇಷ ಸೆಲ್ ಬಂಧಿಸಿತ್ತು. ಗೋಗಿ ವಿರುದ್ಧ 19 ಸುಲಿಗೆಗಳು, ದರೋಡೆಗಳು, ಕಾರುಗಳ್ಳತನ ಮತ್ತು ದರೋಡೆಗಳ ಜೊತೆಗೆ ಕೊಲೆ ಮತ್ತು ಕೊಲೆ ಯತ್ನದ 19 ಪ್ರಕರಣಗಳು ದಾಖಲಾಗಿದ್ದವು.

30ರ ಹರೆಯದ ಗೋಗಿ 2010ರಲ್ಲಿ ತನ್ನ ತಂದೆಯ ಮರಣದ ನಂತರ ಶಾಲೆ ಬಿಟ್ಟು ಆಸ್ತಿ ವ್ಯವಹಾರದಲ್ಲಿ ತೊಡಗಿಸಿಕೊಂಡು ಅಪರಾಧ ಕೃತ್ಯಗಳನ್ನು ಮಾಡುತ್ತಿದ್ದ ಎಂದು ಈ ಹಿಂದೆ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿತ್ತು.

ಗೋಗಿ ಸೆಪ್ಟೆಂಬರ್ 2010ರಲ್ಲಿ ಪ್ರವೀಣ್ ಎಂಬ ವ್ಯಕ್ತಿಯ ಮೇಲೆ ಗುಂಡು ಹಾರಿಸಿದ್ದ. ನಂತರ ದೆಹಲಿ ವಿಶ್ವವಿದ್ಯಾನಿಲಯದ ಶ್ರದ್ಧಾನಂದ ಕಾಲೇಜಿನಲ್ಲಿ ನಡೆದ ಚುನಾವಣೆಗಳಲ್ಲಿ ಗೋಗಿ ಮತ್ತು ಆತನ ಸ್ನೇಹಿತರು ಸಂದೀಪ್ ಮತ್ತು ರವೀಂದರ್ ಎಂಬ ಇಬ್ಬರು ವ್ಯಕ್ತಿಗಳ ಮೇಲೆ ಹಲ್ಲೆ ನಡೆಸಿ ಗುಂಡು ಹಾರಿಸಿದರು. ಈ ಪ್ರಕರಣದಲ್ಲಿ ಗೋಗಿಯನ್ನು ಅಕ್ಟೋಬರ್ 2011ರಲ್ಲಿ ಬಂಧಿಸಲಾಗಿತ್ತು.

× Chat with us