ನವದೆಹಲಿ : ಮಹಿಳೆ ಅವಿವಾಹಿತೆ ಎಂಬ ಕಾರಣಕ್ಕೆ ಗರ್ಭಪಾತದ ಅವಕಾಶ ನಿರಾಕರಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪನ್ನು ನೀಡಿದೆ.
ಅವಿವಾಹಿತ ಮಹಿಳೆಯು ತನಗೆ ಬೇಡವಾದ 24 ವಾರಗಳ ಭ್ರೂಣವನ್ನು ತೆಗೆಸಬಹುದು ಎಂದು ಆದೇಶಿಸಲಾಗಿದ್ದು, ನ್ಯಾಯಮೂರ್ತಿ ಡಿ.ವೖೆ. ಚಂದ್ರ ಚೂಡ್ ಅವರಿಂದ ಪೀಠವು ವೈದ್ಯಕೀಯ ಗರ್ಭಪಾತ ಕಾಯ್ದೆಗೆ 2021 ರಲ್ಲಿ ತಂದಿರುವ ತಿದ್ದುಪಡಿಯು ಅವಿವಾಹಿತೆಯು ಒಳಗೊಳ್ಳುವಂತೆ ಪತಿಗೆ ಬದಲಾಗಿ ಪಾರ್ಟ್ನರ್ ಎಂಬ ಪದ ಬಳಸಿದೆ ಎಂದು ಹೇಳಿತು.
ಸಹಮತದ ಸಂಬಂಧಿದಿಂದ ಗರ್ಭಿಣಿಯಾಗಿದ್ದ ಇಪ್ಪತೈದು ವರ್ಷದ ಅವಿವಾಹಿತೆ, ನನಗೆ ಬೇಡವಾದ 24 ವಾರಗಳ ಭ್ರೂಣದ ಗರ್ಭಪಾತಕ್ಕೆ ಕೋರಿ ಸಲ್ಲಿಸಿದ ಮನವಿಯನ್ನು ದೆಹಲಿ ಹೈಕೋರ್ಟ್ ಜುಲೈ 16ರಂದು ತಳ್ಳಿ ಹಾಕಿತ್ತು. ಇದನ್ನು ಪ್ರಶ್ನಿಸಿ ಅವಿವಾಹಿತ ಸುಪ್ರೀಂ ಕೋರ್ಟ್ ಮೆಟಿಲೇರಿದ್ದರು.
ಎಂ ಟಿ ಪಿ ಕಾಯ್ದೆಯ ಸೆಕ್ಷನ್ 3 (2) (ಡಿ) ಅಡಿಯಲ್ಲಿ ವೈದ್ಯಕೀಯ ಮಂಡಳಿ ಸ್ಥಾಪಿಸಲು ದೆಹಲಿಯ ಏಮ್ಸ್ ಮುಖ್ಯಸ್ಥರಿಗೆ ಸೂಚಿಸಿದ ಪೀಠವು ಆಕೆ ಜೀವಕ್ಕೆ ತೊಂದರೆಯಾಗದಂತೆ ಗರ್ಭಪಾತ ಮಾಡಿಸಲು ಆದೇಶಿಸಿತು. ಇದೀಗ 20 ರಿಂದ 24 ವಾರಗಳ ಭ್ರೂಣದ ಗರ್ಭಪಾತಕ್ಕೆ ಅವಿವಾಹಿತ ಮಹಿಳೆ ಅಥವಾ ವಿಚ್ಛೇದಿತ ಮಹಿಳೆಯು ಕೂಡ ಅನುಮತಿ ನೀಡಲಾಗಿದೆ.