ರಾಮ್ಗಡ: ಕಾಡಾನೆಗಳು ತಮ್ಮ ಕಾಡಾಂಚಿನ ಗ್ರಾಮಗಳಿಗೆ ಆಗಾಗ ದಾಂಗುಡಿ ಇಡುವುದು ಸಾಮಾನ್ಯವಾಗಿದೆ. ಹೀಗೆ ನಾಡು ನೋಡಲು ಬಂದ ಕಾಡಾನೆಯೊಂದು ಕಂದಕಕ್ಕೆ ಬಿದ್ದು ಮೇಲೆ ಬರಲಾಗದೇ ಪರದಾಟ ನಡೆಸಿದ ಘಟನೆ ಜಾರ್ಖಂಡ್ನ ರಾಮ್ಗಡನಲ್ಲಿ ನಡೆದಿದೆ. ನಂತರ ಜೆಸಿಬಿ ಬಳಸಿ ಆನೆಯನ್ನು ಮೇಲೆತ್ತಲಾಗಿದ್ದು, ರಕ್ಷಣಾ ಕಾರ್ಯಾಚರಣೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜಾರ್ಖಂಡ್ನ ರಾಮ್ಘರ್ನಲ್ಲಿ ಹುಲು ಗ್ರಾಮದಲ್ಲಿ ಈ ಘಟನೆ ನಡೆದಿದೆ. ದೈತ್ಯ ಆನೆಯನ್ನು ಮೇಲೆತ್ತಲು ಅರಣ್ಯ ಇಲಾಖೆ ಸಿಬ್ಬಂದಿ ಕೊನೆಗೆ ಮಣ್ಣು ಅಗೆಯುವ ಜೆಸಿಬಿ ಯಂತ್ರವನ್ನೇ ಸ್ಥಳಕ್ಕೆ ಕರೆಸಬೇಕಾಗಿತ್ತು. ಸುದ್ದಿಸಂಸ್ಥೆ ಎಎನ್ಐ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದೆ. 1:16 ನಿಮಿಷಗಳ ಈ ವಿಡಿಯೋದಲ್ಲಿ ದೊಡ್ಡದಾದ ಕಂದಕದಿಂದ ಮೇಲೆ ಬರಲು ಆನೆ ಕಷ್ಟ ಪಡುತ್ತಿರುವುದನ್ನು ನೋಡಬಹುದು. ಆನೆ ಮೇಲೆ ಬರಲಿ ಎಂಬ ಕಾರಣಕ್ಕೆ ನೀರು ತುಂಬಿದ ಈ ಹೊಂಡವನ್ನು ಜೆಸಿಬಿ ಮೂಲಕ ಅಗಲಗೊಳಿಸಲಾಯಿತು. ನಂತರ ಆನೆ ಮೆಲ್ಲ ಮೆಲ್ಲನೇ ಕಷ್ಟಪಟ್ಟು ಮೇಲೇರುತ್ತಿದ್ದು, ಈ ವೇಳೆ ಜೆಸಿಬಿ ಚಾಲಕ ಆನೆಯನ್ನು ಜೆಸಿಬಿಯ ಬಕೆಟ್ನ ಮೂಲಕ ಆನೆಯನ್ನು ಹಿಂಭಾಗದಿಂದ ತಳ್ಳುವ ಮೂಲಕ ಆನೆ ಮೇಲೆರಲು ಸಹಾಯ ಮಾಡುತ್ತಾನೆ.
ಆನೆ ಹೊಂಡದಿಂದ ಮೇಲೇರುತ್ತಿದ್ದಂತೆ ಸ್ಥಳೀಯರು ಪಂಜು ಹಿಡಿದು ಆನೆಯನ್ನು ಹೆದರಿಸಿದ್ದು ಕಂಡು ಬಂತು ನಂತರ ಆನೆ ಹೊಲಗಳ ಮೂಲಕ ಹಾದು ತನ್ನ ಕಾಡಿಗೆ ಹೊರಟು ಹೋಗಿದೆ. ಜಾರ್ಖಂಡ್ನ ರಾಮಗಢ ಜಿಲ್ಲೆಯ ಹುಲು ಗ್ರಾಮದಲ್ಲಿ ಕಂದಕಕ್ಕೆ ಬಿದ್ದ ಆನೆಯನ್ನು ಸ್ಥಳೀಯ ಆಡಳಿತವು ಮಣ್ಣು ಅಗೆಯುವ ಯಂತ್ರ ಜೆಸಿಬಿಯ ಸಹಾಯದಿಂದ ರಕ್ಷಿಸಿದೆ ಎಂದು ಟ್ವೀಟ್ ಮಾಡಿದ್ದಾರೆ.
#WATCH Local administration with the help of an excavator machine yesterday rescued an elephant after it fell into a ditch in Hulu village of Ramgarh district in Jharkhand pic.twitter.com/4uzdY31KaR
— ANI (@ANI) June 27, 2022