ಬೆಂಗಳೂರು: ನಾಗಾಲ್ಯಾಂಡ್, ಮೇಘಾಲಯ ಮತ್ತು ತ್ರಿಪುರಾ ವಿಧಾನಸಭೆಗೆ ಇಂದು ಭಾರತೀಯ ಚುನಾವಣಾ ಆಯೋಗ, ಮತದಾನದ ದಿನಾಂಕ ಪ್ರಕಟಿಸಲಿದೆ.
ಮೂರು ರಾಜ್ಯಗಳ ವಿಧಾನಸಭಾ ಚುನಾವಣೆಗೆ ಸಜ್ಜಾಗಿರುವ ಆಯೋಗ, ಬುಧವಾರ ಮಧ್ಯಾಹ್ನ 2.30ರ ವೇಳೆಗೆ ಮತದಾನದ ದಿನಾಂಕ ಪ್ರಕಟಿಸುವುದಾಗಿ ಘೋಷಿಸಿದೆ.
ಆಲ್ ಇಂಡಿಯಾ ರೇಡಿಯೊ ಆವರಣದಲ್ಲಿರುವ ರಂಗ್ ಭವನ್ನಲ್ಲಿ ಚುನಾವಣಾ ಆಯೋಗ ದಿನಾಂಕ ಘೋಷಿಸಲಿದೆ. ಕರ್ನಾಟಕದಲ್ಲೂ ಮೇ ತಿಂಗಳಿನಲ್ಲಿ ಚುನಾವಣೆ ನಡೆಯಲಿದ್ದು, ಮತದಾನದ ದಿನಾಂಕವನ್ನು ಆಯೋಗ ಶೀಘ್ರದಲ್ಲೇ ಘೋಷಿಸಲಿದೆ.