ನವದೆಹಲಿ : ರಾಷ್ಟ್ರಪತಿ ಭವನದಲ್ಲಿ ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೊಂದಿಗೆ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಮತ್ತು ವಿವಿಧ ಶಾಲೆಗಳ ಮಕ್ಕಳು ರಕ್ಷಾ ಬಂಧನವನ್ನು ಆಚರಿಸಿದರು.ʼ
ಈ ಸಂದರ್ಬದಲ್ಲಿ ಶಾಲಾ ಮಕ್ಕಳು ಸೇರದಂತೆ ಶಿಕ್ಷಕರುಗಳು ಹಾಜರಿದ್ದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಕೈಗೆ ರಾಖಿ ಕಟ್ಟುವುದರ ಮೂಲಕ ಮಕ್ಕಳು ರಕ್ಷಾ ಬಂಧನವನ್ನು ಆಚರಿಸಿದರು.
ನಂತರ ದ್ರೌಪದಿ ಮುರ್ಮು ಅವರು ಮಕ್ಕಳೊಟ್ಟಿಗೆ ಕೆಲಕಾಲ ಕುಶಲೋಪರಿ ವಿಚಾರಿಸಿ ಮಕ್ಕಳೊಟ್ಟಿಗೆ ಬೆರೆತರು.
ರಕ್ಷಾ ಬಂಧನ ಆಚರಣೆಯ ಕುರಿತು ಮಾಹಿತಿ :
ರಕ್ಷಾ ಬಂಧನ ಆಚರಣೆಯ ಹಬ್ಬವನ್ನು ಪ್ರತಿ ಶ್ರಾವಣ ಮಾಸದಲ್ಲಿ ರಕ್ಷಾ ಬಂಧನ ಹಬ್ಬವನ್ನು ಆಚರಿಸಲಾಗುತ್ತದೆ. ಈ ದಿನ ಸಹೋದರಿಯರು ತಮ್ಮ ಸಹೋದರರಿಗೆ ರಾಖಿಯನ್ನುಕಟ್ಟುತ್ತಾರೆ. ಅನಾದಿ ಕಾಲದಿಂದಲೂ ಈ ಹಬ್ಬವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ವೈದಿಕ ಕಾಲದಲ್ಲೂ ರಕ್ಷಾ ಬಂಧನ ಆಚರಣೆಯಲ್ಲಿತ್ತು ಎಂದು ಹೇಳಬಹುದು. ಈ ಹಬ್ಬವು ಸಹೋದರ ಮತ್ತು ಸಹೋದರಿಯ ನಡುವಿನ ಧಾರ್ಮಿಕ ಬಾಂಧವ್ಯಕ್ಕೆ ಹೆಸರಾಗಿದೆ. ರಕ್ಷಾ ಎಂದರೆ ಸುರಕ್ಷತೆ ಮತ್ತು ಬಂಧನ ಎಂದರೆ ಬಂಧ ಅಥವಾ ಬಾಂಧವ್ಯ. ಸಹೋದರಿಯರು ತಮ್ಮ ಸಹೋದರರ ಕೈಗೆ ಪವಿತ್ರ ದಾರವನ್ನು ಕಟ್ಟುತ್ತಾರೆ. ಪ್ರತಿಯಾಗಿ ಅವನ ರಕ್ಷಣೆಯನ್ನು ಬಯಸುತ್ತಾರೆ. ಈ ಹಬ್ಬವನ್ನು ಶ್ರಾವಣ ಮಾಸದಲ್ಲಿ ಹುಣ್ಣಿಮೆಯ ದಿನ ಅಥವಾ ಪೂರ್ಣಿಮಾ ದಿನದಂದು ಆಚರಿಸಲಾಗುತ್ತದೆ.
ಹೋದರಿಯರು ತಮ್ಮ ಸಹೋದರನ ಕೈಗೆ ಪವಿತ್ರ ರಾಖಿ ಕಟ್ಟುತ್ತಾರೆ. ಜೊತೆಗೆ ಅವರಿಗೆ ದೀರ್ಘ, ಸಮೃದ್ಧ ಮತ್ತು ಸಂತೋಷದ ಜೀವನವನ್ನು ಹಾರೈಸುತ್ತಾರೆ. ಆದರೆ ಪ್ರತಿಯಾಗಿ, ಸಹೋದರರು ತಮ್ಮ ಜೀವನದುದ್ದಕ್ಕೂ ತಮ್ಮ ಸಹೋದರಿಯರನ್ನು ರಕ್ಷಿಸುವ ಭರವಸೆ ನೀಡುತ್ತಾರೆ. ರಾಖಿಯನ್ನು ಕಟ್ಟಿದ ನಂತರ, ಒಡಹುಟ್ಟಿದವರು ಉಡುಗೊರೆಗಳು ಮತ್ತು ಸಿಹಿತಿಂಡಿಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಕುತೂಹಲಕಾರಿಯಾಗಿ, ಇತ್ತೀಚಿನ ದಿನಗಳಲ್ಲಿ ಸಹೋದರರು ಮತ್ತು ಸಹೋದರಿಯರು ಒಬ್ಬರಿಗೊಬ್ಬರು ರಾಖಿ ಕಟ್ಟುವುದಿಲ್ಲ, ಆದರೆ ಸ್ನೇಹಿತರು ಮತ್ತು ಸಂಬಂಧಿಕರು ಸಂಪ್ರದಾಯವನ್ನು ಅನುಸರಿಸಲು ಪ್ರಾರಂಭಿಸಿದ್ದಾರೆ. ಯಾವುದೇ ಹಂತದಲ್ಲಿ ಇನ್ನೊಬ್ಬರಿಗೆ ರಕ್ಷಣೆ ಅಥವಾ ಕಾಳಜಿಯನ್ನು ಒದಗಿಸಿದ ಯಾರೊಂದಿಗೂ ಈಗ ರಾಖಿ ಆಚರಿಸಲಾಗುತ್ತದೆ.