ಎನ್ಐಎ ಗೆ ನೂತನ ಮಹಾನಿರ್ದೇಶಕರಾಗಿ ದಿನಕರ್ ಗುಪ್ತಾ ನೇಮಕ

ಬೆಂಗಳೂರು : ಹಿರಿಯ ಐಪಿಎಸ್ ಅಧಿಕಾರಿ ದಿನಕರ್ ಗುಪ್ತಾ ಅವರನ್ನು ರಾಷ್ಟ್ರೀಯ ತನಿಖಾ ದಳದ (ಎನ್ಐಎ) ಗೆ ನೂತನ ಮಹಾನಿರ್ದೇಶಕರನ್ನಾಗಿ ಕೇಂದ್ರ ಸರ್ಕಾರ ನೇಮಕ ಮಾಡಿ ಇಂದು ಆದೇಶವನ್ನು ಹೊರಡಿಸಿದೆ.

ದಿನಕರ್ ಗುಪ್ತಾ ಅವರು ಮಾರ್ಚ್ 31, 2024 ರ ವರೆಗೆ ಅಧಿಕಾರದಲ್ಲಿ ಇರಲಿದ್ದಾರೆ. ಇದರ ಜೊತೆಗೆ ಗುಪ್ತಚರ ಇಲಾಖೆ ವಿಶೇಷ ನಿರ್ದೇಶಕರಾಗಿದ್ದ ಸ್ವಾಗತ್ ದಾಸ್ ಅವರನ್ನು ಗೃಹ ಸಚಿವಾಲಯದ ವಿಶೇಷ  ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ. ಇವರು 1987  ರ ಬ್ಯಾಚ್ ನ ಛತ್ತೀಸ್ ಗಢ ಕೇಡರ್ ನ ಐಪಿಎಸ್ ಅಧಿಕಾರಿಯಾಗಿದ್ದಾರೆ. ಇವರ ನಿವೃತ್ತಿ ಅವಧಿ ನವೆಂಬರ್ 30, 2024 ರವರೆಗೆ ಇರಲಿದೆ.