ರಾಷ್ಟ್ರೀಯ

ಸಂಸತ್‌ ಭದ್ರತಾ ಲೋಪ: ದೆಹಲಿ ಪೊಲೀಸರಿಂದ ಉತ್ತರಪ್ರದೇಶದಲ್ಲಿ ಮತ್ತೊಬ್ಬನ ಬಂಧನ

ಕಳೆದ ವಾರ ಸಂಸತ್‌ ಭವನಕ್ಕೆ ನುಗ್ಗಿದ್ದ ಆರೋಪಿಗಳನ್ನು ಸತತವಾಗಿ ವಿಚಾರಣೆ ನಡೆಸುತ್ತಿರುವ ದೆಹಲಿ ಪೊಲೀಸರು ಆರೋಪಿಗಳ ಜತೆ ಸಂಪರ್ಕದಲ್ಲಿದ್ದ ವ್ಯಕ್ತಿಗಳನ್ನೂ ಸಹ ವಿಚಾರಣೆ ನಡೆಸುತ್ತಿದ್ದಾರೆ. ನಿನ್ನೆಯಷ್ಟೇ ಮೈಸೂರು ಮೂಲದ ಮನೋರಂಜನ್‌ ಸ್ನೇಹಿತನಾಗಿದ್ದ ಬಾಗಲಕೋಟೆ ಮೂಲದ ಸಾಯಿಕೃಷ್ಣ ಎಂಬ ಎಂಜಿನಿಯರ್‌ನನ್ನು ಬಂಧಿಸಿದ್ದ ದೆಹಲಿ ಪೊಲೀಸರು ಅದೇ ದಿನ ಉತ್ತರಪ್ರದೇಶದ ಜಲೌನ್‌ನ ಒರೈ ಪ್ರದೇಶದ ಅತುಲ್‌ ಕುಲ್‌ಶ್ರೇಷ್ಠ ಎಂಬಾತನನ್ನೂ ಸಹ ಬಂಧಿಸಿ ವಿಚಾರಣೆಗೆ ಕರೆದೊಯ್ದಿದ್ದಾರೆ ಎಂದು ತಿಳಿದುಬಂದಿದೆ.

ಮಾಹಿತಿಗಳ ಪ್ರಕಾರ ಅತುಲ್‌ ಕುಲ್‌ಶ್ರೇಷ್ಠ 50 ವರ್ಷ ವಯಸ್ಸಿನ ರೈತ ಎಂದು ತಿಳಿದುಬಂದಿದೆ ಹಾಗೂ ಈತನಿಗೆ ನಾಲ್ವರು ಮಕ್ಕಳಿದ್ದಾರೆ ಎಂದು ಹೇಳಲಾಗಿದೆ. ಜಲೌನ್‌ನ ಒರೈನಲ್ಲಿ ವಾಸವಿರುವ ಈತ ಅಲ್ಲಿ ಎಡಪಂಥೀಯ ಸಿದ್ಧಾಂತವನ್ನು ಬೆಂಬಲಿಸುವ ಮೂಲಕವೇ ಹೆಸರುವಾಸಿಯಾಗಿದ್ದ ಎನ್ನಲಾಗಿದೆ. ಈತ ಫೇಸ್‌ಬುಕ್‌ನಲ್ಲಿ ಭಗತ್‌ಸಿಂಗ್‌ ಫ್ಯಾನ್ಸ್‌ ಕ್ಲಬ್‌ನ ಸದಸ್ಯನಾಗಿದ್ದ ಹಾಗೂ ಆ ಗುಂಪಿನಲ್ಲಿ ಬಂಧಿತರಾಗಿರುವವರ ಪೈಕಿ ಐದು ಮಂದಿ ಸಹ ಇದ್ದರು ಎಂದು ತಿಳಿದುಬಂದಿದೆ. ಅಲ್ಲದೇ ಆ ಐವರ ಪೈಕಿ ಒಬ್ಬರು ಅತುಲ್‌ ಜತೆ ಚಾಟ್‌ ಮಾಡಿದ್ದರು ಎನ್ನಲಾಗಿದೆ.

ಈ ಬಂಧನದ ಕುರಿತು ಪ್ರತಿಕ್ರಿಯಿಸಿರುವ ಜಲೌನ್‌ ಎಸ್‌ಪಿ ಇರಾಜ್‌ ರಾಜ್‌ “ದೆಹಲಿ ಪೊಲೀಸರ ತಂಡವೊಂದು ಇಲ್ಲಿಗೆ ಬಂದು ಅತುಲ್‌ ಎಂಬುವವರನ್ನು ತಮ್ಮೊಟ್ಟಿಗೆ ಕರೆದುಕೊಂಡು ಹೋಗಿದ್ದಾರೆ ಹಾಗೂ ಅವರು ಈ ಕುರಿತು ನಮಗೆ ಹೆಚ್ಚೇನೂ ಮಾಹಿತಿ ನೀಡಿಲ್ಲ” ಎಂದು ತಿಳಿಸಿದ್ದಾರೆ.

andolana

Recent Posts

ರಾಜ್ಯ ಸರ್ಕಾರ ಪಾಪರ್‌ ಆಗಿದೆ: ವಿಪಕ್ಷ ನಾಯಕ ಆರ್.‌ಅಶೋಕ್‌

ಬೆಂಗಳೂರು: ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ಪ್ರತಿ ಇಲಾಖೆಯಲ್ಲಿಯೂ ನಡೆಯುತ್ತಿದೆ. ಸರ್ಕಾರ ದಿವಾಳಿಯಾಗಿದ್ದು, ಲೂಟಿ ಮಾಡುವುದನ್ನೇ ಕಾಯಕವನ್ನಾಗಿ ಮಾಡಿಕೊಂಡಿದೆ ಎಂದು ವಿಪಕ್ಷ…

24 mins ago

ಚಾಮರಾಜನಗರ| ಫ್ಲೋರೈಡ್‌ ಮಿಶ್ರಿತ ನೀರು ಸೇವಿಸಿ ಕಿಡ್ನಿ ಕಳೆದುಕೊಂಡ 47 ಜನ

ಚಾಮರಾಜನಗರ: ಫ್ಲೋರೈಡ್‌ ಮಿಶ್ರಿತ ನೀರು ಕುಡಿದು 47 ಮಂದಿ ಕಿಡ್ನಿ ಕಳೆದುಕೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಹನೂರು…

35 mins ago

ಹುಣಸೂರು: ಬಾರ್‌ ತೆರೆಯಲು ಅವಕಾಶ ನೀಡದಂತೆ ಗ್ರಾಮಸ್ಥರ ಆಗ್ರಹ

ಹುಣಸೂರು: ತಾಲ್ಲೂಕಿನ ಬೋಳನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸರಾಮನಹಳ್ಳಿ ಗ್ರಾಮದಲ್ಲಿ ಬಾರ್‌ ತೆರೆಯಲು ಅನುಮತಿ ನೀಡದಂತೆ ಒತ್ತಾಯಿಸಿ ಗ್ರಾಮಸ್ಥರು ಪಿಡಿಓಗೆ…

1 hour ago

ಪೆನ್ನಾರ್‌ ನದಿ ಜಲವಿವಾದ: ನ್ಯಾಯಮಂಡಳಿ ಸ್ಥಾಪಿಸುವಂತೆ ಸುಪ್ರೀಂ ಆದೇಶ

ನವದೆಹಲಿ: ಕರ್ನಾಟಕ ಹಾಗೂ ತಮಿಳುನಾಡು ನಡುವಿನ ದಕ್ಷಿಣ ಪಿನಾಕಿನಿ ಎಂದೇ ಹೆಸರುವಾಸಿಯಾಗಿರುವ ಪೆನ್ನಾರ್‌ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ…

2 hours ago

ಉದ್ಯಮಿ ಸಿ.ಜೆ.ರಾಯ್‌ ಆತ್ಮಹತ್ಯೆ ಪ್ರಕರಣ: ವಿಚಾರಣೆಗೆ ಹಾಜರಾಗುವಂತೆ ಪತ್ನಿ, ಪುತ್ರನಿಗೆ ಎಸ್‌ಐಟಿ ಬುಲಾವ್‌

ಬೆಂಗಳೂರು: ಉದ್ಯಮಿ ಸಿ.ಜೆ.ರಾಯ್‌ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ತನಿಖೆ ಚುರುಕುಗೊಂಡಿದ್ದು, ವಿಶೇಷ ತನಿಖಾ ತಂಡವು ಪತ್ನಿ ಹಾಗೂ ಮಗನನ್ನು…

3 hours ago

ಬೈಕ್‌ ಟ್ಯಾಕ್ಸಿಗೆ ಒಪ್ಪಿಗೆ: ಸುಪ್ರೀಂಕೋರ್ಟ್‌ ಮೊರೆ ಹೋಗಲಿದೆ ಸರ್ಕಾರ?

ಬೆಂಗಳೂರು: ರಾಜ್ಯ ಸರ್ಕಾರ ಹಾಗೂ ಅಪ್ಲಿಕೇಶನ್‌ ಆಧಾರಿತ ಟ್ಯಾಕ್ಸಿ ನೀಡುವ ಕಂಪನಿಗಳ ನಡುವೆ ಬೈಕ್‌ ಟ್ಯಾಕ್ಸಿ ವಿಚಾರಕ್ಕೆ ಜಟಾಪಟಿ ನಡೆದಿತ್ತು.…

3 hours ago